IPL2021, ಈ ಮೂರು ಶ್ರೇಷ್ಠ ದಾಖಲೆಯನ್ನು ಮುರಿಯುವವರು ಯಾರು..?

ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಸೀಸನ್ನಲ್ಲಿ ಕಣಕ್ಕಿಳಿದಿದ್ದ ಸೂಹೈಲ್ ತನ್ವೀರ್ ಅವರ 14 ರನ್ ಗೆ 6 ವಿಕೆಟ್ ಕಬಳಿಸಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇತಿಹಾಸ ಬರೆದಿದ್ದರು. ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅದರೊಂದಿಗೆ ತಂಡಗಳ ಬಲಾಬಲ ಮತ್ತು ಸಾಮರ್ಥ್ಯದ ಬಗೆಗಿನ ಚರ್ಚೆಗಳು ಕೂಡ ಶುರುವಾಗಿದೆ. ಈ ಬಾರಿ ಭಾರತದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಅನೇಕ ಹೊಸತನವನ್ನು ನಿರೀಕ್ಷಣೆ ಮಾಡಲಾಗುತ್ತಿದೆ. ಇನ್ನು ಭಾರತದ ಪೀಚ್ ಗಳಲ್ಲಿ ಬಿರುಗಾಳಿಯ ಬ್ಯಾಟಿಂಗ್ ಬೌಲಿಂಗ್ ಮತ್ತು ಸಿಕ್ಸರ್ ಗಳ ಸುರಿಮಳೆಯಾಗುವ ಸಾಧ್ಯತೆ ಇದೆ.

ಅದರ ಜೊತೆಗೆ ಬೌಲಿಂಗ್ ವಿಭಾಗವು ಕೂಡ ಈ ಬಾರಿ ಪಂದ್ಯಾವಳಿ ಮೇಲೆ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯಗಳು ಸಹ ಬಲವಾಗಿ ಕೇಳಿಬರುತ್ತಿದೆ. ಅದರಲ್ಲೂ ಈ ಬಾರಿಯ ಐಪಿಎಲ್ ಹೊಸಹೊಸ ದಾಖಲೆಗಳಿಗೆ ಸಾಕ್ಷಿಯಾಗಲಿದೆ ಎನ್ನುವ ಮಾತು ಕೂಡಾ ಹರಿದಾಡುತ್ತಿದೆ. ಐಪಿಎಲ್ ನಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಅನೇಕ ರೆಕಾರ್ಡ್ಗಳು ಮೂಡಿಬಂದಿವೆ. ಈ ದಾಖಲೆಗಳಲ್ಲಿ ಕೆಲವೊಂದು ದಾಖಲೆಗಳು ಅಚ್ಚರಿಯ ಮತ್ತು ಅತ್ಯಂತ ಶ್ರೇಷ್ಠ ರೆಕಾರ್ಡ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಅಂತಹ ಮೂರು ದಾಖಲೆಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೇದಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಾಖಲೆ. ಐಪಿಎಲ್ ಇತಿಹಾಸದಲ್ಲೇ ಸೀಸನ್ ಒಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇನ್ನು ಈವರೆಗೂ ಈ ದಾಖಲೆಯನ್ನು ಯಾರು ಕೂಡ ಬಿಟ್ ಮಾಡಿಲ್ಲ. ಇನ್ನು ಎರಡನೆಯದಾಗಿ ಮೂರು ಬಾರಿ ಹ್ಯಾಟ್ರಿಕ್ ದಾಖಲೆ. ಹೌದು ಐಪಿಎಲ್ ನಲ್ಲಿ 3 ಬಾರಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದರು ಏಕೈಕ ಬೌಲರ್ ಅಮಿತ್ ಮಿಶ್ರಾ.

ಈವರೆಗೆ ಐಪಿಎಲ್ನಲ್ಲಿ ಒಟ್ಟು 15 ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಅಮಿತ್ ಮಿಶ್ರಾ ಅವರ ದಾಖಲೆಯನ್ನು ಮುರಿಯಲು ಆಗಲಿಲ್ಲ. ಹೀಗಾಗಿ ಈ ಬಾರಿ ದಾಖಲೆಯನ್ನು ಯಾರಾದರೂ ಅಳಿಸಿ ಹಾಕಲಿದ್ದರಾ ಎಂಬುದನ್ನು ಕಾದು ನೋಡಬೇಕು. ಇನ್ನು ಕೊನೆಯದಾಗಿ ಅಲ್ಜಾರಿ ಜೋಸೆಫ್ ಬೌಲಿಂಗ್ ಯಾಕಲೇ ರಾಜಸ್ತಾನ ರಾಯಲ್ಸ್ ಪರ ಸ್ಟ್ರಕ್ಚರ್ ಆಫ್ ಐಪಿಎಲ್ ಸೀಸನ್ನಲ್ಲಿ ಕಣಕ್ಕಿಳಿದಿದ್ದ ಸೂಹೈಲ್ ತನ್ವೀರ್ ಅವರ 14 ರನ್ ಗೆ 6ವಿಕೆಟ್ ದಾಖಲೆಯನ್ನು ಕಳೆದ ಬಾರಿ ಮುಂಬೈ ಇಂಡಿಯನ್ಸ್ ಬೌಲರ್ ಅಲ್ಜಾರಿ ಜೋಸೆಫ್ ಮುರಿದು ಹಾಕಿದರು. ಈ ಮೂಲಕ ಅವರ ದಾಖಲೆಯನ್ನು ಯಾರು ಮುರಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕು.