ವಿರಾಟ್ ಕೊಹ್ಲಿ ಒಬ್ಬ ಕೆಟ್ಟ ನಾಯಕ, ಅವನಿಗೆ ಏನೂ ಬರುವುದಿಲ್ಲ ಮೊದಲು ತೆಗೆಯಿರಿ ಎಂದ ಆರ್ಸಿಬಿ ಮಾಜಿ ಆಟಗಾರ..!

ಸ್ನೇಹಿತರೆ, ಐಪಿಎಲ್ ಗೆ ಕ್ಷಣಗಣನೆ ಶುರುವಾಗಿದ್ದು, ಇದೀಗ ಐಪಿಎಲ್ ವಿಚಾರವಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಈ ತಂಡ ಕಪ್ ಗೆಲ್ಲಲಿದೆ, ಹಾಗೆಯೇ ಈ ಆಟಗಾರ ಹೆಚ್ಚು ರನ್ ಸಿಡಿಸಲಿದ್ದಾರೆ ಅನ್ನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಆರ್ಸಿಬಿಯ ಮಾಜಿ ಆಟಗಾರರು ಒಬ್ಬರು ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಪ್ರತಿಬಾರಿಯೂ ಆಟಗಾರ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರವಾಗಿ ಮಾತನಾಡುತ್ತಲೇ ಇರುತ್ತಾರೆ.

ಹೌದು ಆ ಆಟಗಾರ ಬೇರೆ ಯಾರು ಇಲ್ಲ ಆರ್ಸಿಬಿ ತಂಡದ ಮಾಜಿ ಆಟಗಾರ ಸದ್ಯ ಮುಂಬೈ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾರ್ಥಿವ್ ಪಟೇಲ್. ಐಪಿಎಲ್ ನಲ್ಲಿ ಆರ್ಸಿಬಿ ಪರ ಕೆಲ ಪಂದ್ಯಗಳನ್ನು ಆಡಿರುವ ಪಾರ್ಥಿವ್ ಪಟೇಲ್ ಆಗಾಗ ವಿರಾಟ್ ಕೊಹ್ಲಿ ವಿಚಾರವಾಗಿ ಮುಗಿಬೀಳುತ್ತಾರೆ. ಅಲ್ಲದೆ ಅವರ ನಾಯಕತ್ವದ ವಿಚಾರದಲ್ಲಿ ಅಪಸ್ವರ ಎತ್ತು ತ್ತಿರುತ್ತಾರೆ. ಇದೀಗ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಒಬ್ಬ ಕೆಟ್ಟ ನಾಯಕ ಅಂತ ಹೇಳುವ ಮೂಲಕ ಆರ್ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಇತ್ತೀಚಿಗೆ ಐಪಿಎಲ್ ವಿಚಾರವಾಗಿ ಮಾತನಾಡಿರುವ ಪಾರ್ಥಿವ್ ಪಟೇಲ್ ಐಪಿಎಲ್ ನಲ್ಲಿ ತಲೆಕೆಡಿಸಿಕೊಳ್ಳದೆ ಪ್ಲೇಯಿಂಗ್ ಇಲೆವೆನ್ ಸೆಲೆಕ್ಟ್ ಮಾಡುವುದು ಯಾವುದು ಎಂಬ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಎಂದು ಉತ್ತರ ಕೊಟ್ಟಿದ್ದು, ಮುಂಬೈ ಇಂಡಿಯನ್ಸ್ ಉತ್ತಮವಾದ ತಂಡ ಅವರು ಯಾವ ರೀತಿ ತಲೆಕೆಡಿಸಿಕೊಳ್ಳುವ ಹಾಗಿಲ್ಲ ಅಂತ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಒಬ್ಬ ಕೆಟ್ಟ ನಾಯಕ ಉತ್ತಮ ನಿರ್ಧಾರಗಳು, ಆಟದ ಬಗ್ಗೆ ಒಳ್ಳೆ ನಿರ್ಧಾರಗಳು ಹಾಗೆ ಒತ್ತಡದಲ್ಲಿ ಪಂದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಅನ್ನುವ ವಿಚಾರದಲ್ಲಿ ಕೊಹ್ಲಿಗಿಂತ ರೋಹಿತ್ ಶರ್ಮ ಉತ್ತಮ.

ಈ ಮೂಲಕ ವಿರಾಟ್ ಕೊಹ್ಲಿ ಒಬ್ಬ ಕೆಟ್ಟ ನಾಯಕ ಅಂತ ಹೇಳಿದ್ದಾರೆ. ಈ ಹಿಂದೆ ಸಹ ಪಾರ್ಥಿವ್ ಪಟೇಲ್ ವಿರಾಟ್ ಕೊಹ್ಲಿ ನಾಯಕತ್ವ ಬಗ್ಗೆ ಮಾಡಿಕೊಂಡಿದ್ದರು. ಇನ್ನು ಪಾರ್ಥಿವ್ ಹೇಳಿಕೆಗೆ ವಿರಾಟ್ ಅಭಿಮಾನಿಗಳು ಆತನ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ ಪಂದ್ಯದಲ್ಲಿ ಆಡಲು ಅವಕಾಶ ಸಿಗದ ಕಾರಣ ಈ ರೀತಿ ಮಾತನಾಡುತ್ತಿದ್ದಾನೆ ಅಂತ ಅಭಿಮಾನಿಗಳು ತಮ್ಮ ಅಕ್ರೋಶವನ್ನು ಹೊರಹಾಕುತ್ತಿದ್ದಾರೆ…