ವಿರಾಟ್ ಕೊಹ್ಲಿ ಇನ್ನು 8 ದಿನ ಆರ್ಸಿಬಿ ಸೇರೋ ಹಾಗಿಲ್ಲ ಯಾಕೆ ಗೊತ್ತಾ ??

ಸ್ನೇಹಿತರೆ, ಐಪಿಎಲ್ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ ಅಂತಾನೆ ಹೇಳಬಹುದು. ಈಗಾಗಲೇ ಎಲ್ಲಾ ಆಟಗಾರರು ಕ್ವಾರಂಟೈನ್ ಹಾಗೂ ಬಯೋ ಬಬಲ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಇದ್ದ ಯಾವ ಆಟಗಾರರಿಗೂ ಕ್ವಾರಂಟೈನ್ ಇಲ್ಲ ಅಂತ ಬಿಸಿಸಿಐ ಕೂಡ ತಿಳಿಸಿದೆ. ಆದರೆ ವಿರಾಟ್ ಕೊಹ್ಲಿ ಇದೀಗ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಹೌದು ಇಂಗ್ಲೆಂಡ್ ವಿರುದ್ಧ ಯಶಸ್ವಿಯಾಗಿ ಸರಣಿ ಗೆಲುವು ಸಾಧಿಸಿದ ವಿರಾಟ್ ಆರ್ಸಿಬಿ ತಂಡವನ್ನು ಸೇರಿಕೊಳ್ಳದೆ ಹೆಂಡತಿ ಮಗುವಿನ ಜೊತೆ ಮನೆಗೆ ತೆರಳಿದ್ದರು.

ಹೀಗಾಗಿ ವಿರಾಟ್ ಏಪ್ರಿಲ್ ಒಂದರಂದು ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದರು ಸಹ ಅವರು ಅಭ್ಯಾಸದಲ್ಲಿ ಸೇರುವ ಹಾಗಿಲ್ಲ, ಅವರು ಹೋಟೆಲ್ ನಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಹಾಗಾಗಿ ವಿರಾಟ ಏಪ್ರಿಲ್ 7ರ ವರೆಗೆ ಅಭ್ಯಾಸವನ್ನು ನಡೆಸಲು ಸಾಧ್ಯವಿಲ್ಲ. ಅವರು ನೇರವಾಗಿ ಉದ್ಘಾಟನ ಪಂದ್ಯಕ್ಕೆ ಬರುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಕೂಡ ಮಾತನಾಡಿದ್ದು, ವಿರಾಟ್ ಅವರ ಏಳುದಿನಗಳ
ಕ್ವಾರಂಟೈನ್ ನಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಅಂತ ಹೇಳಿಕೊಂಡಿದ್ದೆ.

ಐಪಿಎಲ್ ಏಪ್ರಿಲ್ ಒಂಬತ್ತರಿಂದ ಶುರುವಾಗುತ್ತಿತ್ತು, ಯಾವ ತಂಡ ಈ ಬಾರಿ ಕಪ್ ಗೆಲ್ಲಲಿದೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೀಗ ಕ್ರಿಕೆಟ್ ಲೋಕದ ದಿಗ್ಗಜ ಸುನಿಲ್ ಗವಾಸ್ಕರ್ ಈ ಬಾರಿಯ ಐಪಿಎಲ್ ಅನ್ನು ಇದೆ ತಂಡ ಗೆಲ್ಲಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಹೌದು ಕಳೆದ ಬಾರಿ ಮುಂಬೈ ಇಂಡಿಯನ್ಸ್ ಕಪ್ ಗೆದ್ದಿತ್ತು, ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುತ್ತೆ ಅಂತ ಭವಿಷ್ಯ ನುಡಿದಿದ್ದಾರೆ ಗವಾಸ್ಕರ್. ಮುಂಬೈ ತಂಡ ಒಂದು ಉತ್ತಮ ತಂಡವಾಗಿದ್ದು, ತಂಡದಲ್ಲಿ ಸಾಕಷ್ಟು ಬಲಿಷ್ಠ ಆಟಗಾರರಿದ್ದಾರೆ. ನಿಮ್ಮ ಪ್ರಕಾರ ಯಾವ ತಂಡ ಈ ಬಾರಿ ವಿಜೇತವಾಗುತ್ತೆ ಅನ್ನೋದು ನನಗೆ ಕಮೆಂಟ್ ಮಾಡಿ ತಿಳಿಸಿ.