ವಿರಾಟ್ ಅಭಿಮಾನಿಗಳು ತಿಳಿದುಕೊಳ್ಳಬೇಕಾದ ವಿಷಯ…. ಈ ಸಲ ರೆಕಾರ್ಡ್ ಕೊಹ್ಲಿಯದ್ದೇ…!

ಸ್ನೇಹಿತರೆ, ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಪರವಾಗಿ ಕಪ್ ಗೆಲ್ಲದೆ ಇದ್ದರೂ ಕೂಡ ಅಭಿಮಾನಿಗಳನ್ನು ರಂಜಿಸುವಲ್ಲಿ ಯಾವತ್ತೂ ಕೂಡ ಹಿಂದೆ ಬಿದ್ದಿಲ್ಲ. ಪ್ರತಿ ಸೀಸನ್ ನಲ್ಲು ವಿರಾಟ್ ಕೊಹ್ಲಿ ಇಂದಾಗಿ ಮನೆಮನೆಗಳ ಹುಚ್ಚ ಹೆಚ್ಚಾಗಿರುತ್ತೆ ಹೊರತು ಕಡಿಮೆಯಾಗಿಲ್ಲ. ಹೀಗಾಗಿ ಪ್ರತಿಯೊಬ್ಬ ವಿರಾಟ್ ಅಭಿಮಾನಿಯು ತಿಳಿದುಕೊಳ್ಳಬೇಕಾದ ಕೆಲ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ. ಹೌದು ಈ ಬಾರಿ ಕ್ಯಾಪ್ಟನ್ ಕೊಹ್ಲಿ ಸಾಕಷ್ಟು ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ. ಈ ಬಗ್ಗೆ ತಿಳಿಯಲು ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

6 ಸಾವಿರ ಗಡಿಯಲ್ಲಿ ಕಿಂಗ್ ಕೊಹ್ಲಿ. ಹೌದು ಕ್ಯಾಪ್ಟನ್ ಕಿಂಗ್ ಕೊಹ್ಲಿ ಈ ಸೀಸನ್ ನಲ್ಲಿ ಕೇವಲ 122 ರನ್ ಪೂರೈಸಿದ್ದಾರೆ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ಸಾಧನೆಯನ್ನು ಮಾಡಲಿದ್ದಾರೆ. 122 ರನ್ ಕಲೆಹಾಕಿದ್ದಾರೆ 6 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ ಮ್ಯಾನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 184 ಇನ್ನಿಂಗ್ಸ್ ಗಳಲ್ಲಿ 5878 ರನ್ಗಳನ್ನ ಕಲೆಹಾಕಿದ್ದಾರೆ. ಇನ್ನು ಎರಡನೇದಾಗಿ 200 ಪಂದ್ಯಗಳ ಮೈಲುಗಲ್ಲು. ಹೌದು ವಿರಾಟ್ ಕೊಹ್ಲಿ ಈವರೆಗೂ ಐಪಿಎಲ್ ನಲ್ಲಿ 192 ಪಂದ್ಯಗಳನ್ನು ಅದು ಆರ್ಸಿಬಿ ಪರವಾಗಿ ಆಡಿದ್ದಾರೆ.

ಇನ್ನ 8 ಪಂದ್ಯಗಳನ್ನು ಆಡಿದ್ರೆ ವಿರಾಟ್ ಕೊಹ್ಲಿ ಈ ಬಾರಿ 200 ಪಂದ್ಯಗಳ ಕ್ಲಬ್ ಸೇರಲಿದ್ದಾರೆ. ಈ ಮೂಲಕ ಧೋನಿ ಮತ್ತು ರೋಹಿತ್ ಶರ್ಮ ಜೊತೆ 200ರ ಕ್ಲಬ್ನಲ್ಲಿ ಮೂರನೇ ಆಟಗಾರನಾಗಿ ಸ್ಥಾನವನ್ನು ಪಡೆಯಲಿದ್ದಾರೆ. ಇನ್ನು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳ ಸಾಧನೆ. ಈವರೆಗೂ ವಿರಾಟ್ ಕೊಹ್ಲಿ ಟಿ-ಟ್ವೆಂಟಿ ಫಾರ್ಮೆಟ್ ನಲ್ಲಿ 289 ಪಂದ್ಯಗಳನ್ನು ಆಡಿ 9731 ರನ್ಗಳನ್ನು ಸಿಡಿಸಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಅವರು ಕೇವಲ 269 ರನ್ ಕಲೆ ಹಾಕಿದ್ರೆ ಚುಟುಕು ಪಂದ್ಯದಲ್ಲಿ 10 ಸಾವಿರ ಕಳಿಸಿದ ಮೊದಲ ಭಾರತೀಯ ಬ್ಯಾಟ್ಸ್ ಮ್ಯಾನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸ್ನೇಹಿತರೆ ಒಟ್ಟಿನಲ್ಲಿ ಈ ಮೂರು ಪ್ರಮುಖ ಸಾಧನೆಗಳ ಜೊತೆಯಲ್ಲಿ ಕನ್ನಡ ಕೊಹ್ಲಿ ಆಡಲಿರುವ ಪ್ರತಿ ಇನ್ನಿಂಗ್ಸ್ ನಲೋ ಒಂದೊಂದು ಹೊಸ ದಾಖಲೆಗಳು ಆಗೋದು ಗ್ಯಾರಂಟಿ. ನೀವು ಕೂಡ ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ಆ ಪಕ್ಕ ಅಭಿಮಾನಿ ಆಗಿದ್ದಲ್ಲಿ ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.