ರಿವಿಲ್ ಆಯ್ತು ಆರ್ಸಿಬಿ ಅಧಿಕೃತ ಜರ್ಸಿ.! 46 ಯಾರು? ಜರ್ಸಿ ನಂಬರ್ ಗೊತ್ತಾ..?

ಸ್ನೇಹಿತರೆ, ಐಪಿಎಲ್ಗೆ ಇನ್ನೂ ಮೂರೆ ದಿನ ಬಾಕಿ ಇದ್ದು, ಏಪ್ರಿಲ್ 9 ಹತ್ತಿರವಾಗುತ್ತಿದ್ದಂತೆ ಐಪಿಎಲ್ ಪ್ರಿಯರ ಉತ್ಸಾಹ ಮುಗಿಲುಮುಟ್ಟಿದೆ. ಯಾಕಂದ್ರೆ ಆರ್ಸಿಬಿ ತಂಡ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಬಹುಮುಖ್ಯವಾಗಿ ಆರ್ ಸಿಬಿ ಜರ್ಸಿ ಹೇಗಿದೆ ಅನ್ನೋ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಆರ್ಸಿಬಿ ಆಟಗಾರರು ಆರ್ಸಿಬಿಯ ಈ ವರ್ಷದ ಜರ್ಸಿಯಲ್ಲಿ ಅದಾಗಲೇ ಪ್ರಾಕ್ಟೀಸ್ ನಡೆಸುತ್ತಿದ್ದಾರೆ ನಿಜ, ಆದರೆ ಏಪ್ರಿಲ್ 9ರ ಪಂದ್ಯದಲ್ಲಿ ಅವರು ಧರಿಸುವ ಜರ್ಸಿ ಹೇಗಿದೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೆ ನ್ಯೂಜಿಲ್ಯಾಂಡ್ ನ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮ್ಯಾನ್ ಫಿನ್ ಅಲ್ಲೆನ್ ತೆರೆ ಎಳೆದಿದ್ದಾರೆ. ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಕ್ವರಂಟೈನಲ್ಲಿರುವ
ಫಿನ್ ಅಲ್ಲೆನ್ ತಮ್ಮ ಆರ್ಸಿಬಿ ಜರ್ಸಿಯನ್ನ ರಿವಿಲ್ ಮಾಡಿದರೆ. 46ನೇ ನಂಬರ್ ಹೊಂದಿರುವ ಜರ್ಸಿಯ ಫೋಟೋವನ್ನು ರಿಲೀಸ್ ಮಾಡಿರುವ ಫಿನ್ ಅಲ್ಲೆನ್
ಜರ್ಸಿಯಲ್ಲಿ ಕೇವಲ ಅಲ್ಲೆನ್ ಅಂತ ಬರೆಸಿಕೊಂಡಿದ್ದಾರೆ. ಇನ್ನು ಜರ್ಸಿಯ ಬಲಭುಜದ ಸ್ಥಳದಲ್ಲಿ ಹೊಸದಾಗಿ ಬಂದಿರುವ ಉಮಾ ಪ್ರಾಯೋಜಕತ್ವದ ಲೋಗೋ ಇದೆ.

ಈ ಬಾರಿಯೂ ಆರ್ಸಿಬಿ ಜೆರ್ಸಿಯಲ್ಲಿ ತುಂಬಾ ಏನು ದೊಡ್ಡ ಬದಲಾವಣೆಗಳು ಆಗಿಲ್ಲ ಆದರೆ ಸಣ್ಣಪುಟ್ಟ ಸ್ಫೋನ್ಸರ್ಷಿಪ್ ಗಳು ಬದಲಾಗಿದೆ ಅಷ್ಟೇ. ಈ ಮೂಲಕ ಫಿನ್ ಅಲ್ಲೆನ್ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಈ ಮೂಲಕ ಫಿನ್ ಅಲ್ಲೆನ್ ಗೆ ಆರ್ಸಿಬಿ ಮೂಲಕ ಸಾಕಷ್ಟು ಹೆಸರು ಸಿಗಲಿ ಹಾಗೂ ಆರ್ಸಿಬಿಗೆ ಇವರಿಂದ ಕಪ್ ಗೆಲ್ಲುವಂತ ಆಗಲಿ ಎಂದು ಆಶಿಸೋಣ. ನಿಮಗೆ ಆರ್ಸಿಬಿ ತಂಡದ ಈ ಬಾರಿಯ ಜರ್ಸಿ ಹೇಗನಿಸಿತು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ಹಾಗೂ ಫಿನ್ ಅಲ್ಲೆನ್ ಮೊದಲ ಪದ್ಯದಿಂದಲೇ ಮಾಡಬೇಕಾ ಬೇಡವಾ ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಖಂಡಿತ ನಮಗೆ ಕಮೆಂಟ್ ಮಾಡಿ.