ಯುವರತ್ನ ಸಿನಿಮಾ ನೋಡಿ ಟಿಕೇಟ್ ದುಡ್ಡು ವಾಪಸ್ ಕೊಡಿ ಎಂದು ಪ್ರತಿಭಟನೆ  ಮಾಡಿದ ಅಪ್ಪು ಅಭಿಮಾನಿಗಳು..! ಯಾಕೆ ಗೊತ್ತಾ..?

ಸ್ನೇಹಿತರೆ, ಯುವರತ್ನ ಸಿನಿಮಾ ಬಿಡುಗಡೆಯಾಗಿದ್ದ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರತಿಭಟನೆಯನ್ನು ಮಾಡಿದ್ದಾರೆ. ಚಿತ್ರಮಂದಿರದಲ್ಲಿ ದ್ವನಿ ಗುಣಮಟ್ಟ ಸರಿಯಿಲ್ಲ ಸಿನಿಮಾದ ಸಂಭಾಷಣೆಗಳು ಸರಿಯಾಗಿ ಕೇಳುತ್ತಿಲ್ಲ, ಅಷ್ಟೊಂದು ಕಡಿಮೆ ಸೌಂಡ್ ಅನ್ನು ನೀಡಲಾಗಿದೆ ಅಂತ ಪ್ರೇಕ್ಷಕರು ಆಕ್ರೋಶವನ್ನು ಹೊರಹಾಕಿದರು. ಜೊತೆಗೆ ತಮ್ಮ ಸಿನಿಮಾ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದರು. ಆದರೆ ಹಣವನ್ನು ಮತ್ತೆ ಹಿಂದಿರುಗಿಸಲು ಆಡಳಿತ ಮಂಡಳಿ ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರದ ಒಳಗಡೆಯೇ ನುಗ್ಗಿ ಘೋಷಣೆಯನ್ನು ಕೂಗಿದ್ದಾರೆ.

ಇನ್ನು ಕೆಲವರು ಚಿತ್ರವನ್ನು ವೀಕ್ಷಣೆ ಮಾಡದೆ ಮನೆಗೆ ವಾಪಸ್ ತೆರಳಿದ್ದಾರೆ. ಇನ್ನು ಫ್ಯಾನ್ಸ್ ಪ್ರತಿಭಟನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ಇನ್ನು ಮುಂದೆ ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಮಾಡಬೇಡಿ ಎಂಬ ಟೈಟಲ್ ನೊಂದಿಗೆ ವಿಡಿಯೋ ಹರಿದಾಡುತ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿರುವ ಅಭಿಪ್ರಾಯದ ಪ್ರಕಾರ ಬೆಳಗಿನ ಶೋನಲ್ಲಿ ಧ್ವನಿ ಗುಣಮಟ್ಟ ಚೆನ್ನಾಗೆ ಇತ್ತಂತೆ.

ಆದರೆ ಎರಡನೇ ಶೋನಿಂದ ಆಚೆಗೆ ಸೌಂಡ್ ಅನ್ನು ಕಡಿಮೆ ಮಾಡಲಾಗಿದೆಯಂತೆ. ಅಲ್ಲದೆ ಈ ವಿಷಯವನ್ನು ತಿಳಿದ ಮಾಧ್ಯಮದವರು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ನಂತರ ಅಭಿಮಾನಿಗಳನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು. ಏನೇ ಆದ್ರೂ ಊರ್ವಶಿ ಥಿಯೇಟರ್ ಮಾಲೀಕರು ಹಾಗೂ ಸಿಬ್ಬಂದಿಗಳಿಂದ ಫ್ಯಾನ್ಸ್ ಗಳು ನಿರಾಸೆ ಆಗಿರೋದು ಮಾತ್ರ ಸುಳ್ಳಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ…