ಪೊಗರು ಅಲ್ಲ ರಾಬರ್ಟ್ ಅಲ್ಲ ಎರಡು ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಯುವರತ್ನ ದ 2 ನೇ ದಿನದ ಕಲೆಕ್ಷನ್ ಎಷ್ಟು ಕೋಟಿ ನೋಡಿ !!

ಸ್ನೇಹಿತರೆ, ನೆನ್ನೆ ಯುವರತ್ನ ಸಿನಿಮಾ ರಾಜ್ಯದ್ಯಂತ ಏಳುನೂರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದೆ. ಯುವರತ್ನ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡ ರಿಲೀಸ್ ಆಗಿದ್ದು ಅಲ್ಲಿನ ಪ್ರೇಕ್ಷಕರಿಂದಲೂ ಕೂಡ ಒಳ್ಳೆಯ ರೆಸ್ಪಾನ್ಸ್ ದೊರೆತಿದೆ ಮತ್ತು ಎಲ್ಲೆಡೆ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ. ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಎರಡನೇ ಸಿನಿಮಾ ಇದಾಗಿದ್ದು, 2 ನೆ ದಿನದ ಕಲೆಕ್ಷನ್ ಎಷ್ಟು ಕೋಟಿ ಇರಬಹುದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಹಾಗಾದರೆ ಸಿನಿಮಾದ 2nd ಡೇ ಕಲೆಕ್ಷನ್ ಎಷ್ಟಿರಬಹುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಈ ವರ್ಷದಲ್ಲಿ ನಿರೀಕ್ಷಿತ ಸಿನಿಮಾಗಳಲ್ಲಿ ಯುವರತ್ನ ಮುಂಚೂಣಿಯಲ್ಲಿತ್ತು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ನಟನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಏಪ್ರಿಲ್ ಒಂದರಂದು ಅದ್ದೂರಿಯಾಗಿ ಎಲ್ಲೆಡೆ ಯುವರತ್ನ ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನವನ್ನು ಕಂಡಿದ್ದು ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಸಿನಿಮಾ ಮಂದಿರಗಳು ಮತ್ತು ಆಂಧ್ರಪ್ರದೇಶ ತೆಲಂಗಾಣದಲ್ಲಿ ನೂರೈವತ್ತಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸ್ಟಾರ್ ನಟನನ್ನು ಮುಂಜಾನೆಯೇ ಕಣ್ತುಂಬಿಕೊಳ್ಳದ್ದಿದ್ದರೆ ಅಭಿಮಾನಿಗಳಿಗೆ ಸಮಾಧಾನವಾಗುವುದಿಲ್ಲ.

ರಾಜಕುಮಾರ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ಗೆ ಭಾರಿ ಯಶಸ್ಸು ಸಿಕ್ಕಿತ್ತು ಇನ್ನು ಎರಡನೇ ಬಾರಿ ಮತ್ತೆ ಈ ಕಾಂಬಿನೇಷನ್ ಸಕ್ಕತ್ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಪುನೀತ್ ರಾಜಕುಮಾರಿಗೆ ನಾಯಕಿಯಾಗಿ ಸಾಯಿ ಶೈಲಿರವರು ನಟಿಸಿದ್ದಾರೆ ಪ್ರಕಾಶ್ ರೈ, ಡಾಲಿ ಧನಂಜಯ್, ಸೋನು ಗೌಡ, ರಾಧಿಕ, ಶರತ್ ಕುಮಾರ್, ಸಾಯಿಕುಮಾರ್ ಇನ್ನೂ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಯುವರತ್ನ ಸಿನಿಮಾದಲ್ಲಿ ಈಗಿನ ಎಜುಕೇಶನ್ ವ್ಯವಸ್ಥೆ ಬಗ್ಗೆ ಒಳ್ಳೆಯ ಸಂದೇಶವನ್ನು ಸಹ ನೀಡಲಾಗಿದೆ ಮತ್ತು ಅಭಿಮಾನಿಗಳು ಸಿನಿಮಾಕ್ಕೆ ನೂರಕ್ಕೆ ನೂರು ಅಂಕಗಳನ್ನು ಸಹ ನೀಡಿದ್ದಾರೆ.

ಯುವರತ್ನ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಕರ್ನಾಟಕದಲ್ಲಿ 13.5 ಕೋಟಿ ಮತ್ತು ಆಂಧ್ರಪ್ರದೇಶದಲ್ಲಿ 3 ಕೋಟಿ ರೂಪಾಯಿ ಆಗಿದೆ ಒಟ್ಟಿಗೆ ಕನ್ನಡ ಮತ್ತು ತೆಲುಗಿನಲ್ಲಿ ಯುವರತ್ನ ಸಿನಿಮಾದ ಒಟ್ಟು ಕಲೆಕ್ಷನ್ ಹದಿನಾರುವರೆ ಕೋಟಿ ರೂಪಾಯಿ ಆಗಿದೆ. ಇನ್ನು ಎರಡನೇ ದಿನದ ಕಲೆಕ್ಷನ್ ನನ್ನು ನಾವು ನೋಡುವುದಾದರೆ 15 ಕೋಟಿ ಕರ್ನಾಟಕದಲ್ಲಿ ಹಾಗೂ 4 ಕೋಟಿ ಆಂಧ್ರಪ್ರದೇಶದಲ್ಲಿ ಆಗಿದೆ ಒಟ್ಟು 19 ಕೋಟಿ ಗಳಿಸಿದೆ, ಒಟ್ಟು ಎರಡು ದಿನದ ಮೊತ್ತ ನೋಡುವುದಾದರೆ 35 ಕೋಟಿಗೂ ಮೀರಿದ ಕಲೆಕ್ಷನ್ ಪಡೆದುಕೊಂಡಿದೆ, ಇನ್ನು ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಯುವರತ್ನ ಸಿನಿಮಾವು ಮತ್ತಷ್ಟು ಥಿಯೇಟರ್ ಗಳನ್ನು ಸೇರಿಕೊಳ್ಳಲಿ, ಪುನೀತ್ ರಾಜಕುಮಾರ್ ಅವರ ಅಭಿನಯದ ಯುವರತ್ನ ಸಿನಿಮಾವು ನೂರು ದಿನದವರೆಗೂ ಸಕ್ಸಸ್ ಕಾಣಲಿ ಎಂದು ಹಾರೈಸೋಣ…