ಡಿ ಬಾಸ್ ನಟಿಸುತ್ತಿರುವ ಮುಂಬರುವ ಚಿತ್ರಗಳು ಇವೆ ನೋಡಿ !!

ಸ್ನೇಹಿತರೆ, ಅಭಿಮಾನಿಗಳಿಂದ ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ದಾಸ ಈ ರೀತಿ ಹತ್ತು ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದರು. ಇನ್ನು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ದರ್ಶನ್ ಹೊಂದಿದ್ದಾರೆ. ಈಗಾಗಲೇ ರಾಬರ್ಟ್ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡು ಕೋಟಿ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ರಾಬರ್ಟ್ ಸಿನಿಮಾವನ್ನು ನೋಡಿದ ಪ್ರತಿಯೊಬ್ಬ ಅಭಿಮಾನಿ ಕೂಡ ರಾಬರ್ಟ್ ಸಿನಿಮಾ ಪಕ್ಕಾ ಪೈಸಾ ವಸೂಲ್ ಸಿನಿಮಾ, ಎಲ್ಲರೂ ನೋಡಲೇಬೇಕಾದ ಸಿನಿಮಾ ಅಂತ ಅಭಿಪ್ರಾಯಪಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಇದ್ದು, ತೆಲುಗಿನ ಖ್ಯಾತನಟ ಜಗಪತಿ ಬಾಬು, ದರ್ಶನ್ ಅವರಿಗೆ ನಾಯಕಿಯಾಗಿ ಆಶಾ ಭಟ್ ಹಾಗೂ ಸ್ನೇಹಿತನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಹೀಗೆ ದೊಡ್ಡ ತಾರಾ ಸಮೂಹವೇ ಈ ಚಿತ್ರದಲ್ಲಿದೆ. ಅಲ್ಲದೆ ರಾಬರ್ಟ್ ಸಿನಿಮಾದ ನಿರ್ದೇಶನ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದ್ದು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಡಿ ಬಾಸ್ ರಾಬರ್ಟ್ ಚಿತ್ರದ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಡೌಟ್ ಎಲ್ಲರಿಗೂ ಕೂಡ ಇತ್ತು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ರಾಜವೀರ ಮದಕರಿ ನಾಯಕ. ಈ ಚಿತ್ರದಲ್ಲಿ ಮದಕರಿನಾಯಕನಾಗಿ ಅಭಿನಯಿಸುತ್ತಿರುವುದು ನಮ್ಮ ಡಿ ಬಾಸ್. ಈ ಸಿನಿಮಾ ಬಿ ಎಲ್ ವೇಣು ಅವರ ಗಂಡುಗಲಿ ವೀರ ಮದಕರಿನಾಯಕ ಕಾದಂಬರಿ ಆಧಾರಿತ ಸಿನಿಮಾ. ಈ ಸಿನಿಮಾವನ್ನು ಎಸ್ಪಿ ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು, ರಾಕ್ಲೈನ್ ವೆಂಟೇಶ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್ ಆರಂಭಿಕ ಹಂತದಲ್ಲಿದ್ದು, ಇನ್ನು ಮದಕರಿನಾಯಕನ ಕಥೆಯನ್ನು ಕಣ್ತುಂಬಿಕೊಳ್ಳುವ ದಕ್ಕೆ ಕರ್ನಾಟಕ ಜನ ಕಾಯುತ್ತಿದ್ದಾರೆ. ಇನ್ನು ಮುಂದಿನ ಸಿನಿಮಾ ಅಂದ್ರೆ ಅದು ಸಿಂಧೂರ ಲಕ್ಷ್ಮಣ. ಇನ್ನು ಐತಿಹಾಸಿಕ ಸಿನಿಮಾ ಅಂದ್ರೆ, ಅದಕ್ಕೆ ಡಿ ಬಾಸ್ ಮೊದಲು ರೆಡಿಯಾಗಿರುತ್ತಾರೆ. ಅಲ್ಲದೆ ಅದಕ್ಕೆ ಬೇಕಾಗಿರುವಂತಹ ಮೈಕಟ್ಟು ಹಾಗೂ ಪ್ರತಿಭೆ ಕೂಡ ಅವರಲ್ಲಿದೆ. ಈ ಸಿನಿಮಾಗೂ ಕೂಡ ಡಿ ಬಾಸೆ ಹೀರೋ. ಈ ಧೀರ ಸ್ವಾತಂತ್ರ ಹೋರಾಟಗಾರನ ಸ್ಟೋರಿಯನ್ನು ರಾಬರ್ಟ್ ಸಿನಿಮಾದ ಟೀಮ್ ಮಾಡುತ್ತಿದ್ದಾರೆ ಅನ್ನೋ ಮಾತಿದೆ.

ಇನ್ನು ನವಗ್ರಹ ಹಾಗೂ ಸಾರಥಿ ನಂತರ ದಿನಕರ್ ತೂಗುದೀಪ್ ಹಾಗೂ ದರ್ಶನ್ ಅವರು ಸೇರಿ ಸರ್ವಾಂತರ್ಯಾಮಿ ಅಥವಾ ನವಗ್ರಹ 2 ಸಿನಿಮಾ ಮಾಡುತ್ತಾರೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ನೀವು ಕೂಡ ಡಿ ಬಾಸ್ ಫ್ಯಾನ್ ಆಗಿದ್ದು ಅವರ ಹೊಸ ಚಿತ್ರಕ್ಕಾಗಿ ಕಾಯುತಿದ್ದರೆ ಲೇಖನಕ್ಕೆ ಒಂದು ಲೈಕ್ ಮಾಡಿ.