ಔಷಧಿ ನೀಡಿಯಾದರೂ ಜಾರಕಿಹೊಳಿಯನ್ನು ಬಂಧಿಸಿ, ಗೃಹಸಚಿವರಿಗೆ ಕಾಂಗ್ರೆಸ್ ಒತ್ತಾಯ..! ನಿಮ್ಮ ಅಭಿಪ್ರಾಯ??

ಔಷಧಿ ನೀಡಿಯಾದರೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಒತ್ತಾಯಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಬೊಮ್ಮಾಯಿಯವರೇ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಅವರಿಗೆ ಜ್ವರ ಶಮನವಾಯಿತೆ. ಆಗಿಲ್ಲವೆಂದರೆ ಮಾತ್ರ ಔಷಧಿ ನೀಡಿ ಬಂದಿಸಿ ಸ್ವಾಮಿ. ಜನತೆ ಕಾನೂನಿನ ಮೇಲಿಟ್ಟಿರುವ ಗೌರವ ಉಳಿಯಲಿ’ ಎಂದು ಆಗ್ರಹಿಸಿದೆ. ಇನ್ನು ಉಪ ಚುನಾವಣೆ ಆದಮೇಲೆ ಕಾಂಗ್ರೆಸ್ನವರು ಬಿಜೆಪಿ ಸೇರುತ್ತಾರೆ ಎಂದು ಹೇಳುತ್ತಾ ನಳಿನ್ ಕುಮಾರ್ ಕಟೀಲ್ ಅವರು ತಿರುಕನ ಕನಸು ಕಾಣುತ್ತಿದ್ದಾರೆ.

ಉಪ ಚುನಾವಣೆ ಆದಮೇಲೆ ಬಿಎಸ್ ವೈ ಮುಕ್ತ ಬಿಜೆಪಿ ಆಗುತ್ತದೆ ಎಂದು ಯತ್ನಾಳ್ ಹೇಳುತ್ತಿದ್ದಾರೆ ಅರಿವಿದೆಯೇ! ಬಿಜೆಪಿ ಪಕ್ಷ ಮುಳುಗುತ್ತಿರುವ ಮುರಿದ ದೋಣಿ ಅದನ್ನು ಹತ್ತುವ ಮೂರ್ಖರು ಯಾರಿಲ್ಲ ಬಿಡಿ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ. ಇನ್ನು ಜನವಿರೋಧಿ ಬಿಜೆಪಿ ಪಕ್ಷವನ್ನು ಜನತೆ ಪ್ರತಿ ಮನೆ ಎದುರು ಬಿಜೆಪಿಯವರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿ ತಿರಸ್ಕರಿಸುವ ಕಾಲ ಸನಿಹವಾಗುತ್ತಿದೆ ಎಂದು ಕಿಡಿಕಾರಿದೆ.

ಇನ್ನು ರಾಜ್ಯಸಭೆಯ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ವಿಷಕಾರಿ ಆಗಿದ್ದಾರೆ. ಅವರ ನಿಜವಾದ ಮುಖ ಅರ್ಥಮಾಡಿಕೊಂಡ ಕಲಬುರ್ಗಿ ಜನ ಅವರನ್ನು ಸೋಲಿಸಿದ್ದಾರೆ. ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ಈ ರೀತಿ ರಾಜ್ಯದ ಪ್ರತಿಪಕ್ಷದ ನಾಯಕರು ಪರಸ್ಪರ ಟ್ವೀಟ್ ವಾರ್ ಅನ್ನು ನಡೆಸುತ್ತಿದ್ದು, ಒಬ್ಬರ ಮೇಲೆ ಒಬ್ಬರು ಆರೋಪವನ್ನು ಮುಂದುವರಿಸಿದ್ದಾರೆ ಅಂತನೇ ಹೇಳಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.