ಒಂದು ಕಾಲದ  ಡಾ.ರಾಜಕುಮಾರ್ ಅವರ ಮದುವೆಯ ಲಗ್ನಪತ್ರಿಕೆ ಹೇಗಿತ್ತು ನೀವು ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ !!

ಸ್ನೇಹಿತರೆ ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರು ಅಂದರೆ ಕನ್ನಡ ಚಿತ್ರರಂಗಕ್ಕೆ ಗಾಡ್ ಫಾದರ್ ಇದ್ದಂತೆ, ಅವರು ಹಾಕಿಕೊಟ್ಟ ಹಾದಿಯಲ್ಲೇ ಇಂದು ಕೂಡ ಹಲವಾರು ಸ್ಟಾರ್ಗಳು ನಡೆಯುತ್ತಿದ್ದಾರೆ. ಅಲ್ಲದೆ ಅಂದಿಗೂ ಇಂದಿಗೂ ಅಣ್ಣಾವ್ರ ಹೆಸರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗದಲ್ಲಿ ಅಜರಾಮರ. ಅದೇ ರೀತಿ ಅಣ್ಣಾವ್ರ ಮಕ್ಕಳು ಸಹ ಅವರು ಹೇಳಿಕೊಟ್ಟ ಮೌಲ್ಯಗಳನ್ನು ಪಾಲಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಅವರನ್ನ ನೇರವಾಗಿ ನೋಡದೆ ಇರುವ ಅದೆಷ್ಟು ಅಭಿಮಾನಿಗಳಿದ್ದಾರೆ. ಅದೇ ರೀತಿ ಅಣ್ಣಾವ್ರ ಮದುವೆಯನ್ನು ಕಣ್ತುಂಬಿಕೊಳ್ಳದ ಅಭಿಮಾನಿಗಳು ಕೂಡ ಇದ್ದಾರೆ. ಈಗ ಅಪರೂಪದ ಕ್ಷಣವನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದರೆ ಹೇಗಿರುತ್ತೆ ಅಲ್ವಾ..! ಹೋಗ್ಲಿ ಬಿಡಿ ಅದು ಕಷ್ಟಸಾಧ್ಯ. ಆದ್ರೆ ಅಣ್ಣಾವ್ರ ಮದುವೆ ಪ್ರಯುಕ್ತ ಪ್ರಕಟವಾಗಿದೆ ಲಗ್ನಪತ್ರಿಕೆಯನ್ನು ನೋಡುವ ಅವಕಾಶ ಮಾತ್ರ ನಮಗೆ ಪಕ್ಕಾ ಸಿಕ್ಕಿದೆ. ಇದು ಡಾ. ರಾಜ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ.

ಈ ಪತ್ರಿಕೆಯಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ ನೋಡಿ… ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಹಾಗೂ ಸಿಂಗಾನಲ್ಲೂರು ನಾಗೇಗೌಡರು ಮಾಡುವ ವಿಜ್ಞಾಪನೆಗಳು…. 25/6/1953 ರಲ್ಲಿ 10:30 ಗಂಟೆಯಿಂದ 11:15 ಗಂಟೆಯ ಶುಭಲಗ್ನದಲ್ಲಿ ಅಪ್ಪಾಜಿ ಗೌಡರ ಪುತ್ರಿ ಪಾರ್ವತಿ ಎಂಬ ವಧುವಿಗೂ, ನಾಗೇಗೌಡರ ಅಣ್ಣಂದಿರು ನಾಟಕದ ಅಭಿನಯ ಶಿರೋಮಣಿ ಪುಟ್ಟಸ್ವಾಮೆಗೌಡರ ಪುತ್ರ ಮುತ್ತುರಾಜು ಎಂಬ ವರನಿಗೂ ನಂಜನಗೂಡು ತಾಣಪ್ಪನವರ ಛತ್ರದಲ್ಲಿ ವಿವಾಹ ನಡೆದಿದೆ.