ಐಪಿಎಲ್ ಗೂ ಮುನ್ನ ಸೀಕ್ರೆಟ್ ಬಿಚ್ಚಿಟ್ಟ ಆರ್ಸಿಬಿ ಓಪನರ್ ದೇವದತ್ ಪಡಿಕ್ಕಲ್ !! ಏನೂ ನೋಡಿ ??

ಸ್ನೇಹಿತರೆ, ಐಪಿಎಲ್ ಸೀಸನ್ 14 ರಲ್ಲಿ ಯಾರು ಅತಿ ಹೆಚ್ಚು ರನ್ ಕಲೆಹಾಕುತ್ತಾರೆ ಅನ್ನೋ ಲೆಕ್ಕಾಚಾರಗಳು ನಡಿತಾ ಇದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ದೇಸಿ ಆಟಗಾರರು ಮಿಂಚುತ್ತಾರಾ ಅಥವಾ ವಿದೇಶಿ ಆಟಗಾರರು ಆರ್ಭಟಿಸುತ್ತಾರಾ ಅನ್ನೋ ಕುತೂಹಲಗಳು ಕೂಡ ಸಾಕಷ್ಟು ಜನರ ಮನದಲ್ಲಿ ಮನೆಮಾಡಿದೆ. ಈಗಾಗಲೇ ದೇಸಿ ಪ್ರತಿಭೆಗಳು ಸೈಯದ್ ಮುಷ್ಟಾಖ್ ಅಲಿ ಟ್ರೋಫಿ ಹಾಗೂ ಇನ್ನಿತರೆ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.

ಹೀಗಿರುವಾಗ ಆರ್ಸಿಬಿ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ದೇವದತ್ತ ಪಡಿಕಲ್ ಪೃಥ್ವಿ ಶಾ ಜೊತೆ ಪೈಪೋಟಿ ಏರ್ಪಟ್ಟಿದ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ವಿಜಯ್ ಹಜಾರೆ ಟ್ರೋಫಿ ಯಲ್ಲಿ ದೇವದತ್ ಪಡಿಕಲ್ ಹಾಗೂ ಶಾ ಇಬ್ಬರು ಅದ್ಭುತ ಪ್ರದರ್ಶನ ತೋರುವ ಮೂಲಕ ಮೊದಲ ಎರಡು ಸ್ಥಾನದಲ್ಲಿ ಪೈಪೋಟಿ ನಡೆಸಿದ್ದರು. ಪೃಥ್ವಿ ಶಾ 8 ಪಂದ್ಯಗಳಿಂದ 827 ರನ್ ಗಳಿಸಿದರೆ, ಕನ್ನಡಿಗ ದೇವದತ್ತ ಪಡಿಕಲ್ ಹೇಳು ಪಂದ್ಯದಲ್ಲಿ 737 ರನ್ ಸಿಡಿಸಿದರು. ಇನ್ನು ಈ ಇಬ್ಬರು ಆಟಗಾರರು ಐಪಿಎಲ್ ನಲ್ಲಿ ಸಹ ಇದೇ ರೀತಿ ಪ್ರದರ್ಶನವನ್ನು ನೀಡುವ ಉತ್ಸಾಹದಲ್ಲಿದ್ದಾರೆ.

ಈ ವೇಳೆ ದೇವದತ್ ಪಡಿಕಲ್ ವಿಜಯ್ ಹಜಾರೆ ಟ್ರೋಫಿ ವೇಳೆ ಪೃಥ್ವಿ ಶಾ ನಡುವೆ ನಡೆದ ಪೈಪೋಟಿ ವಿಚಾರವನ್ನು ಹೇಳಿಕೊಂಡಿದ್ದಾರೆ. ಪೃಥ್ವಿ ಶಾ ಒಬ್ಬ ಅತ್ಯದ್ಭುತ ಆಟಗಾರ ಹಾಗೆ ಉತ್ತಮ ಫಾರ್ಮ್ ನಲ್ಲಿದ್ದಾರೆ, ಅಲ್ಲದೆ ನಾನು ವಿಜಯ ಹಜಾರೆ ಟ್ರೋಫಿ ಯಲ್ಲಿ ಹೆಚ್ಚು ರನ್ ಗಳಿಸಲು ಪೃಥ್ವಿ ಶಾ ಅವರೇ ಕಾರಣ ಅಂತ ಹೇಳಿದ್ದಾರೆ. ಇನ್ನು ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ ಇಬ್ಬರ ನಡುವೆ ತಿಳಿಯದ ರೀತಿಯಲ್ಲಿ ಪೈಪೋಟಿ ನಡೆಯುತ್ತಿತ್ತು, ಅದು ನನಗೆ ಅನುಭವವಾಗಿದೆ. ಅದೇ ರೀತಿ ಪೃಥ್ವಿ ಶಾ ಅವರಿಗೂ ಅನುಭವ ಆಗಿರುತ್ತೆ ಅಂತ ಅಂದುಕೊಂಡಿದ್ದೇನೆ.

ಈ ಮೂಲಕ ನನಗೆ ತುಂಬಾನೇ ಅನುಕೂಲವಾಯಿತು ಅಲ್ಲದೆ ಹೆಚ್ಚು ರನ್ ಗಳಿಸಲು ಸಹಾಯವಾಯಿತು ಅಂತ ದೇವದತ್ತ ಪಡಿಕಲ್ ಹೇಳಿಕೊಂಡಿದ್ದಾರೆ. ನಿಮ್ಮ ಪ್ರಕಾರ ಪೃಥ್ವಿ ಶಾ ಹಾಗೂ ದೇವದತ್ ಪಡಿಕಲ್ ಈ ಬಾರಿ ಐಪಿಎಲ್ ನಲ್ಲಿ ವಿಜಯ್ ಹಜಾರೆ ಟ್ರೋಫಿ ಯಲ್ಲಿ ಆರ್ಭಟಿಸಿದ ಹಾಗೆ ಗರ್ಜಿಸುತ್ತಾರಾ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ…