ಈ ಬಾರಿ ಬಿಗ್ ಬಾಸ್ ಗೆಲ್ಲೋದು ಇವರೇ ಎಂದು ಭವಿಷ್ಯ ನುಡಿದ ಚಂದ್ರಕಲಾ, ನೀವು ಕೂಡ ಇವರೇ ಗೆಲ್ಲೋದು ಅಂತೀರಾ ??

ಕನ್ನಡ ಕಿರುತೆರೆಯ ಸೂಪರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದ್ದು, ಇನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ. ಏನೋ ಈ ಕಾರ್ಯಕ್ರಮ ಆರಂಭವಾದ ಮೊದಲ ಎರಡು ವಾರಗಳ ಕಾಲ ಮನೆಯ ಸದಸ್ಯರು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಆಟವಾಡೋಣ ಎಂದುಕೊಂಡಿದ್ದರು. ಆದರೆ ಈಗ ಬಿಗ್ ಬಾಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಶುರುವಾಗಿದ್ದು, ಅಸಲಿ ಆಟ ಪ್ರಾರಂಭವಾಗಿದೆ ಎಂದೇ ಹೇಳಲಾಗುತ್ತಿದೆ.

ಅಲ್ಲದೆ ಸದಸ್ಯರುಗಳು ಒಬ್ಬರ ಮೇಲೆ ಒಬ್ಬರಿಗಿದ್ದ ಅಭಿಪ್ರಾಯ ಕೂಡ ಬದಲಾಗಿತ್ತು ವಯಸ್ಸಿನ ಅಂತರ ಕೂಡ ನೋಡದೆ ಏಕವಚನದಲ್ಲಿ ಮಾತನಾಡುತ್ತಾ ಟಾಸ್ಕ್ ವೇಳೆ ಕಿತ್ತಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ 17 ಮಂದಿ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದು ಆದರೆ ಈಗ 17 ಜನರ ಪೈಕಿ ಧನುಶ್ರೀ, ನಿರ್ಮಲ ಚನ್ನಪ್ಪ, ಬ್ರಹ್ಮಗಂಟು ಗೀತಾ ಭಾರತಿ ಭಟ್ ಹಾಗೂ ಅಜ್ಜಮ್ಮ ಖ್ಯಾತಿಯ ಚಂದ್ರಕಲಾ ಅವರು ಮನೆಯಿಂದ ಹೊರ ನಡೆದಿದ್ದಾರೆ. ಆದರೆ ಇದೀಗ ಬಿಗ್ಬಾಸ್ ಮನೆಯಲ್ಲಿ ನಾಲ್ಕು ಮಹಿಳಾ ಸ್ಪರ್ಧಿಗಳನ್ನು ಕಳೆದುಕೊಂಡಿರುವ ಅನ್ಯ ಮಹಿಳಾ ಸ್ಪರ್ಧಿಗಳು ಕಂಗೆಟ್ಟಿದ್ದಾರೆ.

ಇದರ ಬೆನ್ನಲ್ಲೇ ಕಳೆದ ವಾರ ಮನೆಯಿಂದ ಹೊರ ಬಂದಿರುವ ಚಂದ್ರಕಲಾ ಅವರು ಸಂದರ್ಶನವೊಂದರಲ್ಲಿ ಬಿಗ್ ಬಾಸ್ ಮನೆಯ ಪಯಣವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಬಿಗ್ ಬಾಸ್ ಫಿನಾಲೆ ತಲುಪುವ ಸ್ಪರ್ಧಿ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದಿವ್ಯ ಸುರೇಶ್ ಅವರು ಆಟವನ್ನು ಬಹಳ ಚೆನ್ನಾಗಿ ಆಡುತ್ತಾರೆ. ಅವಳಿಗೆ ಒಂದು ಗುರಿ ಇದೆ ವಯಸ್ಸು ಚಿಕ್ಕದಾದರೂ ಏನೋ ಒಂದು ಗುರಿ ಇದೆ. ಒಳ್ಳೆಯ ಹುಡುಗಿ ಅರವಿಂದ್ ಹಾಗೂ ದಿವ್ಯ ಹುರುಡುಗ ಕೂಡ ಒಳ್ಳೆಯ ಕಂಟೆಸ್ಟೆಂಟ್ ಗಳು.

ಆದರೆ ಫಿನಾಲೆಯಲ್ಲಿ ಗೆಲ್ಲೋದು ಒಬ್ಬರೇ ಆದಕಾರಣ ನನ್ನ ಅನಿಸಿಕೆ ಅರವಿಂದ್ ಎಂದು ತಿಳಿಸಿದ್ದಾರೆ. ಇನ್ನು ಬಿಗ್ ಬಾಸ್ ಪಯಣದಲ್ಲಿ ತಮಗೆ ಬಹಳ ಆತ್ಮೀಯರಾಗಿದ್ದ ಅವರ ಹೆಸರನ್ನು ಸೂಚಿಸಿರುವ ಚಂದ್ರಕಲಾ ಅವರು ನನಗೆ ಶುಭಾಪೂಂಜಾ ಹಾಗೂ ಗೀತಾ ಬಹಳ ಇಷ್ಟ ಆಗಿದ್ರೆ. ಹಾಗೆಯೇ ಬಿಗ್ ಬಾಸ್ ಪಯಣ ಅಷ್ಟೊಂದು ಬೇಗ ಮುಗಿದಿರುವ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸಿರುವ ಚಂದ್ರಕಲಾ ಅವರು ಇನ್ನಷ್ಟು ದಿನ ಉಳಿಯಬೇಕಿತ್ತು ಹಾಗೂ ನನ್ನ ಕಲೆ ಪ್ರದರ್ಶನ ಮಾಡಬೇಕಿತ್ತು ಎಂದು ಹೇಳಿಕೊಂಡಿದ್ದಾರೆ…