ಆರ್ಸಿಬಿ ಹನ್ನೊಂದರ ಬಳಗದಲ್ಲಿ ಯಾವ್ಯಾವ ಆಟಗಾರರು ಸ್ಥಾನ ಪಡೆದುಕೊಳ್ಳಲಿದ್ದಾರೆ ಗೊತ್ತಾ..?

ಸ್ನೇಹಿತರೆ, ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರಿ ನಿರೀಕ್ಷೆಯ ಐಪಿಎಲ್ ಸೀಸನ್ 14 ಆರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಆರ್ಸಿಬಿ ತಂಡ ಈ ಬಾರಿಯೂ ನಿರೀಕ್ಷೆಗಳ ಬೆಟ್ಟವನ್ನು ಹೆಗಲಮೇಲೆ ಏರಿಸಿಕೊಂಡಿದೆ. ಎಲ್ಲರ ಮಹದಾಸೆ ಆರ್ ಸಿ ಬಿ ಕಪ್ ಗೆಲ್ಲುವುದು ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗುತ್ತಿರುವ ಕಾರಣ ಐಪಿಎಲ್ ಕ್ರೇಜ್ ಕೂಡ ಹೆಚ್ಚಾಗುತ್ತಿದೆ. ಈ ಬಾರಿ ಆರ್ಸಿಬಿ ತಂಡ ಕೊಂಚ ವಿಭಿನ್ನವಾಗಿರಲಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಇದೇ ಮೊಟ್ಟಮೊದಲ ಬಾರಿಗೆ ಆರ್ಸಿಬಿ ತಂಡ ಬಹಳ ಸಮತೋಲನದಿಂದ ಕೂಡಿದೆ.

ಅದರಲ್ಲೂ ಬೌಲಿಂಗ್ ಹಾಗೂ ಆಲ್ರೌಂಡರ್ ಗಳ ವಿಭಾಗದಲ್ಲಿ ದೇಶದ ಯುವ ಪ್ರತಿಭೆಗಳು ತಂಡ ಸೇರಿಕೊಂಡಿರುವುದು ಮತ್ತೊಂದು ಖುಷಿ ವಿಚಾರವೇ ಸರಿ. ಈ ಮೂಲಕ ಖಂಡಿತವಾಗಿಯೂ ಆರ್ಸಿಬಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಲೆಕ್ಕಾಚಾರ ಹಲವರದ್ದು. ಹಾಗಿದ್ದರೆ ಇಷ್ಟೆಲ್ಲಾ ದೊಡ್ಡ ದೊಡ್ಡ ಆಟಗಾರರ ನಡುವೆ ಹನ್ನೊಂದರ ಬಳಗ ಹೇಗೆ ರಚನೆ ಆಗುತ್ತೆ ಅಂತ ನೋಡುವುದಾದರೆ. ಇದೀಗ ಕ್ರಿಕೆಟ್ ಪಂಡಿತರು ಆಟವಾಡುವ ಹನ್ನೊಂದರ ಬಳಗದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿಜಕ್ಕೂ ಬಹಳ ಅದ್ಭುತವಾಗಿ ತಂಡ ಮೂಡಿಬಂದಿದೆ.

ಮೊದಲನೇದಾಗಿ ದೇವದತ್ತ ಪಡಿಕಲ್, ವಿರಾಟ್ ಕೊಹ್ಲಿ, ಮೋಹಮ್ಮದ್ ಅಜರುದ್ದಿನ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ವಾಷಿಂಗ್ಟನ್ ಸುಂದರ್, ಡ್ಯಾನಿಯಲ್ ಸ್ಯಾಮ್ಸ್, ಯಜುವೇಂದ್ರ ಚಹಾಲ್, ಮೊಹಮದ್ ಶಿರಾಜ್ ಇನ್ನು ಅನೇಕರು ಹನ್ನೊಂದರ ಬಳಗದಲ್ಲಿ ಆಡಲಿದ್ದಾರೆ ಅನ್ನೋ ಮಾಹಿತಿ ಇದೀಗ ಹೊರಬಿದ್ದಿದೆ. ಇನ್ನು ಸಾಕಷ್ಟು ಕೌತುಕಕ್ಕೆ ಕಾರಣವಾಗಿರುವ ಈ ಬಾರಿಯ ಐಪಿಎಲ್ ಏಪ್ರಿಲ್ 9 ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ…