ಆರ್ಸಿಬಿಗೆ ಸ್ಯಾಂಡಲ್ವುಡ್ ಶುಭಾಶಯ..! ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ, ಆರ್ಸಿಬಿ ಗೆಲ್ಲಿಸಿ, ಈ ಸಲ ಕಪ್ ನಮ್ದೇ…

ಸ್ನೇಹಿತರೆ, ಐಪಿಎಲ್ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ ಅಂತನೇ ಹೇಳಬಹುದು. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿ ಸ್ಟಾರ್ ಗಳವರೆಗೂ ಆರ್ಸಿಬಿ ಅಂದರೆ ಏನೋ ಒಂಥರಾ ಕ್ರೇಜ್. ಅದೇ ರೀತಿ ಇದೀಗ ಐಪಿಎಲ್ ಸೀಸನ್ 14 ಏಪ್ರಿಲ್ ಒಂಬತ್ತರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ನ ಸ್ಟಾರ್ ಗಳು ಆರ್ಸಿಬಿ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ಈ ಸಲ ಕಪ್ ನಮ್ದೇ ಅಂತ ಆರ್ಸಿಬಿ ಪರ ನಿಂತಿದ್ದಾರೆ.

ಮೊದಲನೇದಾಗಿ ನಟ ಅಜಯ್ ರಾವ್ ಎಬಿಸಿಡಿ ಹೇಳೋದನ್ನ ಬೇಕಾದ್ರೆ ಬಿಡ್ತೀವಿ, ಆದರೆ ಎಬಿಡಿ ಎಬಿಡಿ ಅಂತ ಕೋಗೋದನ್ನ ಮಾತ್ರ ಬಿಡೋದಿಲ್ಲ. ಕೋಳಿ ತಿನ್ನುವುದನ್ನು ಬೇಕಾದರೆ ಬಿಡ್ತೀವಿ, ಆದರೆ ಕೊಹ್ಲಿ ಮೇಲಿರುವ ಅಭಿಮಾನವನ್ನು ಬಿಡುವುದಿಲ್ಲ. ಗೆದ್ದರು ಸೋತ್ರು ಗೋಲಿ ಆಟ ಹುಡುಗರು ಗೇಲಿ ಮಾಡಿದರು, ಅಕ್ಕ ಪಕ್ಕ ರಾಜ್ಯದವರು ಆಡಿಕೊಂಡರು ಮನೆಯವರು ಮಕ್ಕು ಕೂಗಿದರು ಆರ್ಸಿಬಿ ಗೆ ಸಪೋರ್ಟ್ ಮಾಡೋದನ್ನ ಮಾತ್ರ ನಾವು ಬಿಡುವುದಿಲ್ಲ ಅಂತ ನಟ ಅಜಯ್ ರಾವ್ ಸಕ್ಕತ್ತಾಗಿ ಡೈಲಾಗ್ ಹೊಡೆದಿದ್ದಾರೆ.

ಇನ್ನು ನಟಿ ಅತಿಥಿ ಪ್ರಭುದೇವ್ ಕೂಡ, ಸ್ಯಾಂಡಲ್ ವುಡ್ ಅಂದರೆ ಅಣ್ಣಾವ್ರು, ಐಪಿಎಲ್ ಅಂದ್ರೆ ಬೆಂಗಳೂರು. ಈ ಸಲ ಕಪ್ ನಮ್ದೆ ಜೈ ಆರ್ಸಿಬಿ ಅಂತ ನಟಿ ಅದಿತಿ ಪ್ರಭುದೇವ್ ಹೇಳಿದ್ದಾರೆ. ಈ ರೀತಿ ಸ್ಯಾಂಡಲ್ವುಡ್ನ ಸಾಕಷ್ಟು ನಟ ನಟಿಯರು ಆರ್ಸಿಬಿ ಬೆನ್ನಿಗೆ ನಿಂತಿದ್ದು ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಹುಮ್ಮಸ್ಸಿನಲ್ಲಿದ್ದಾರೆ ಅಂತನೇ ಹೇಳಬಹುದು. ಇನ್ನು ಈ ಬಾರಿಯ ತಂಡ ಕೂಡ ಸಾಕಷ್ಟು ಬಲಿಷ್ಠವಾಗಿದ್ದು, ದೊಡ್ಡ ದೊಡ್ಡ ಹಾಗೂ ಪ್ರತಿಭಾವಂತ ದೇಸಿ ಆಟಗಾರರು ಈ ಬಾರಿ ತಂಡದಲ್ಲಿದ್ದಾರೆ.

ಕೊನೆಯದಾಗಿ ಸ್ಯಾಂಡಲ್ವುಡ್ನ ತಾರೆಯರ ಮಾತುಗಳು ಹಾಗೂ ಆರ್ಸಿಬಿ ಮೇಲಿನ ಅಭಿಮಾನ ಫ್ಯಾಂಸ್ಗೆ ಸಕ್ಕತ್ ಇಷ್ಟ ಆಗಿದ್ದು, ಸೋಶಿಯಲ್ ಮೀಡಿಯಾ ಗಳಲ್ಲಿ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ.. ಇದೆ ಜೋಶ್ ನಲ್ಲಿ ಆರ್ಸಿಬಿ ಈ ಬಾರಿ ಕಪ್ ಗೆಲ್ಲಲಿ ಅಂತ ಆಶಿಸೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ…