ಆರ್ಸಿಬಿಗೆ ಕಪ್ ಗೆಲ್ಲಿಸಿಕೊಡುವ ಮೂವರು ಆಟಗಾರರು ಇವರೇ ನೋಡಿ..!

ಸ್ನೇಹಿತರೆ ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಆದರೆ ಆರ್ಸಿಬಿಗೆ ಅದ್ಯಾಕೋ ಏನೋ ಐಪಿಎಲ್ ಕಪ್ ಗೆ ಮುತ್ತಿಡು ಅವಕಾಶ ಇನ್ನೂ ಬಂದಿಲ್ಲ. ಪ್ರತಿ ಬಾರಿಯ ಐಪಿಎಲ್ ಶುರುವಾದಾಗೆಲೇ ಈ ಸಲ ಕಪ್ ಗೆಲ್ತಾರೆ ಗೆಲ್ತಾರೆ ಅಂತ ಹೇಳಿ ಟೂರ್ನಿ ಆರಂಭಿಸಿದರು ಕೊನೆಯಲ್ಲಿ ಕಪ್ ಗೆಲ್ಲದೆ ನಿರಾಸೆ ಅನುಭವಿಸುತ್ತಿದ್ದೇವೆ. ತಂಡದಲ್ಲಿ ಎಬಿಡಿ ಕೊಹ್ಲಿ ರಂತಹ ಬಲಿಷ್ಠರಿದ್ದು, ಇನ್ನೂ ಅನೇಕ ಬಲಿಷ್ಟ ಆಟಗಾರರು ಆಡಿ ಹೋದರು ಕಪ್ ವಿಚಾರದಲ್ಲಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗಿಲ್ಲ.

ಆದರೆ ಆರ್ಸಿಬಿ ತಂಡದ ನಿರ್ದೇಶಕ ಮೈಕ್ ಹೆಸೆನ್ ಈ ಬಾರಿಯ ಐಪಿಎಲ್ 2021 ರಲ್ಲಿ ಆರ್ಸಿಬಿಗೆ ಗೆಲ್ಲಿಸಿಕೊಡುವ ಮೂರು ಭಾರತೀಯ ಆಟಗಾರರನ್ನು ಹೆಸರಿಸಿದ್ದಾರೆ. ಹೌದು ಈ ಮೂವರು ಭಾರತೀಯ ಆಟಗಾರರು ಈ ಬಾರಿ ಆರ್ಸಿಬಿ ಗೆಲ್ಲುವಂತೆ ಮಾಡಬಲ್ಲರು ಅಂತ ಹೇಳಿದ್ದಾರೆ. ಮೊದಲನೇದಾಗಿ ರಜತ್ ಪಾಟಿದಾರ್. ಮಧ್ಯಪ್ರದೇಶದ ಆಟಗಾರ ಈ ಬಾರಿ ಹರಾಜಿನಲ್ಲಿ ಆರ್ಸಿಬಿ ಗೆ ಸೇರಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡುವ ಮೂಲಕ ಗಮನ ಸೆಳೆದಿದ್ದರು.

ಇನ್ನು ಆತನ ಬ್ಯಾಟಿಂಗ್ ಸ್ಟೈಲ್ ನೋಡ್ತಾ ಇದ್ರೆ ಆತನ ಟ್ಯಾಲೆಂಟ್ ಎಂಥದ್ದು ಅಂತ ಗೊತ್ತಾಗುತ್ತೆ. ಹೀಗಾಗಿ ಆರ್ಸಿಬಿ ಪರ ಈ ಬಾರಿ ರಜತ್ ಪಾಟಿದಾರ್ ಆರ್ಭಟಿಸುತ್ತರೆ ಅಂತ ಮೈಕ್ ಹೆಸೆನ್ ತಿಳಿಸಿದ್ದಾರೆ. ಇನ್ನು ಎರಡನೇ ಆಟಗಾರ ಕೇರಳದ ವಿಕೆಟ್ ಕೀಪಿಂಗ್ ಬ್ಯಾಟ್ಮ್ಯಾನ್ ಮೊಹಮ್ಮದ್ ಅಜರುದ್ದೀನ್. ಈ ಆಟಗಾರ ಕೂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 54 ವರ್ಷದ ಗಳಲ್ಲಿ 137 ರನ್ ಸಿಡಿಸಿ ಗಮನಸೆಳೆದಿದ್ದ ಅಜ್ಗರ್ ಆರ್ಸಿಬಿಗೆ ಮೂಲ ಬೆಲೆಗೆ ಸೇಲ್ ಆದ್ರೂ. ಇನ್ನು ಈ ಮೂಲಕ ಅಜ್ಗರ್ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ಇನ್ನು ಮೂರನೇ ಆಟಗಾರ ಶ್ರೇಯಸ್ ಪ್ರಭುದೇಸಾಯಿ. ಈತ ಕೂಡ ಪ್ರತಿಭಾವಂತ ಆಟಗಾರರಾಗಿದ್ದು, 23 ವರ್ಷದ ಯುವಕ ಆಟಗಾರ ಗೋವಾ ಪರ ಸಾಕಷ್ಟು ಪಂದ್ಯಗಳನ್ನು ಆಡಿ ಮಿಂಚಿದ್ದಾರೆ. ಇದೀಗ ಮೈಕ್ ಹೆಸರು ಈ ಮೂವರು ಆಟಗಾರರ ಹೆಸರನ್ನು ಹೇಳುವ ಮೂಲಕ ಈ ಬಾರಿಯ ಐಪಿಎಲ್ ಕಪ್ ಗೆಲ್ಲಿಸಿ ಕೊಳ್ಳಬಲ್ಲರು ಅಂತ ಹೇಳಿ ವಿಶ್ವಾಸ ನುಡಿಗಳನ್ನು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ…