ತಮ್ಮ ಹಳ್ಳಿಯಲ್ಲಿ ಸಿದ್ದರಾಮಯ್ಯ ಕಟ್ಟಿಕೊಂಡಿರುವ ಮನೆ ಹೇಗಿದೆ ಗೊತ್ತಾ ನೋಡಿ ಹೇಗಿದೆ !!

ಸ್ನೇಹಿತರೆ,, ಜಾತಿ, ಧರ್ಮ, ಮತ ಬೇಧಗಳನ್ನು ಹೊರತುಪಡಿಸಿ ಮಾತನಾಡುವುದಾದರೆ ಯಾವುದೇ ಅಕ್ರಮ ಆಸ್ತಿ ಚಿಂತೆಯಿಲ್ಲದೆ, ಇನ್ಕಮ್ ಟ್ಯಾಕ್ಸ್ ಭಯವಿಲ್ಲದೆ, ಕರ್ನಾಟಕ ರಾಜ್ಯದಲ್ಲಿ ರಾತ್ರಿ ಹೊತ್ತು ನೆಮ್ಮದಿಯಿಂದ ಮಲಗುವ ಕೆಲವೇ ಕೆಲವು ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಬ್ಬರು. ಕರ್ನಾಟಕದ ರಾಜಕೀಯದಲ್ಲಿ ಮನಸ್ಸಾಕ್ಷಿಯಾಗಿ ಪ್ರಾಮಾಣಿಕ ಕೆಲಸ ಮಾಡುವವರಲ್ಲಿ ಇವರು ಕೂಡ ಒಬ್ಬರು. ಮಾತು ಒರಟಾದರೂ ಇವರ ಹೃದಯ ಮಾತ್ರ ಹೂವಿನಂತದು ಅಂದರೆ ತಪ್ಪಾಗುವುದಿಲ್ಲ.

ಹಾಗಾದ್ರೆ ಸಿದ್ದರಾಮಯ್ಯ ಅವರು ಅವರ ಹಳ್ಳಿಹಳ್ಳಿಯಲ್ಲಿ ಕಟ್ಟಿಕೊಂಡಿರುವ ಅವರ ಮನೆ ಹೇಗಿದೆ ಅಂತ ತಿಳಿಯೋಣ ಬನ್ನಿ. ಮೈಸೂರು ಜಿಲ್ಲೆ, ವರುಣಾ ಹೋಬಳಿಯ, ಸಿದ್ದರಾಮನಹುಂಡಿ ಅನ್ನುವ ಒಂದು ಚಿಕ್ಕ ಹಳ್ಳಿಯಲ್ಲಿ ರೈತನ ಮಗನಾಗಿ ಹುಟ್ಟಿದ ಸಿದ್ಧರಾಮಯ್ಯನವರು, ತಮ್ಮ 10 ವರ್ಷದ ವರೆಗೂ ಶಾಲೆಯ ಮೆಟ್ಟಿಲು ಸಹ ಹತ್ತಲಿಲ್ಲ. ನಂತರ ಶಾಲೆ ಕಡೆ ಮುಖ ಮಾಡಿದ ಇವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ l.l.b. ಮಾಡಿ ಜೂನಿಯರ್ ಲಾಯರ್ ಆಗಿ ಕೆಲಸ ಆರಂಭಿಸಿದರು.

ನಂತರ ಕೆಲವರ ಪ್ರಭಾವದಿಂದ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ಅದರಲ್ಲಿ ಏಳುಬೀಳುಗಳನ್ನು ಕಂಡು, ಕೊನೆಗೂ ಹಠ ಬಿಡದೆ ಜೈಸಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಸಿದ್ದರಾಮಯ್ಯ ಅವರಲ್ಲಿ ಮೆಚ್ಚುವಂತಹ ಗುಣ ಅಂದರೆ ನಾವು ನಿಮ್ಮ ರಕ್ತ ಸಂಬಂಧಿ, ಈ ಸಂಬಂಧ ಎಂದು ಹೇಳಿಕೊಂಡು ಈ ಕೆಲಸ ಮಾಡಿಕೊಡಿ, ಆ ಕೆಲಸ ಮಾಡಿಕೊಡಿ ಅನ್ನುವವರಿಗೆ ಖಂಡಿತವಾಗಿಯೂ ಅವರು ಹತ್ತಿರಕ್ಕೂ ಸೇರಿಸುವುದಿಲ್ಲ. ಯಾಕೆಂದರೆ ಸಂಬಂಧಗಳ ನೆಲೆಯ ಮೇಲೆ ಯಾವತ್ತೂ ಕೂಡ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಇಚ್ಛಿಸುವುದಿಲ್ಲ.

ಆದರೆ ಯಾರಾದರೂ ಕೂಡ ತಮ್ಮ ಬಳಿ ಕಷ್ಟ ಅಂತ ಬಂದರೆ ಕೈಲಾದಷ್ಟು ಸಹಾಯ ಮಾಡಿ ಕಳುಹಿಸುತ್ತಾರೆ. ನೀವು ಅವರ ಮನೆಯನ್ನು ಈ ಲೇಖನದಲ್ಲಿ ಕಾಣಬಹುದು. ಬಿಡುವಿದ್ದಾಗ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ ಕುಟುಂಬ ಸಮೇತರಾಗಿ ಬಂದು, ಒಂದೆರಡು ದಿನ ಅಲ್ಲೇ ಉಳಿದು ನಂತರ ಹೋಗುತ್ತಾರೆ. ಇನ್ನು ಇವರ ಕುಟುಂಬದ ಮತ್ತೊಂದು ವಿಶೇಷ ಅಂದ್ರೆ ಯಾರು ಕೂಡ ಕ್ಯಾಮರಾದ ಮುಂದೆ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಒಂದು ಬಾರಿಯೂ ಮೀಡಿಯಾದ ಮುಂದೆ ಬಂದಿಲ್ಲ.

ತಮ್ಮ ಗಂಡ ಅಧಿಕಾರದಲ್ಲಿದ್ದಾಗ ತಮ್ಮದೇ ದರ್ಬಾರ್ ನಡೆಸುವ ಎಷ್ಟೋ ರಾಜಕೀಯ ನಾಯಕರ ಹೆಂಡತಿಯರ ಮಧ್ಯೆ, ಸಾಮಾನ್ಯ ಮಹಿಳೆಯಂತೆ ಜೀವನ ನಡೆಸುತ್ತಿರುವ ಪಾರ್ವತಿಯವರು ಎಲ್ಲರಿಗೂ ಮಾದರಿಯಾಗಿದ್ದಾರೆ.