RCB 2021 ಕೊಹ್ಲಿ ಪಡೆಗೆ ಕಿವಿಸ್ ನೆಲದಿಂದ ಗುಡ್ ನ್ಯೂಸ್ ಕೊಟ್ಟ ಕಾಂಗರೂಗಳು..!

ಸ್ನೇಹಿತರೆ, ಆರ್ಸಿಬಿ ತಂಡಕ್ಕೆ ನ್ಯೂಜಿಲ್ಯಾಂಡ್ ನೆಲದಿಂದ ಆಸ್ಟ್ರೇಲಿಯಾದ ಆಟಗಾರರು ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ಅಂತಾನೆ ಹೇಳಬಹುದು. ಹಾಗಿದ್ರೆ ಆಸ್ಟ್ರೇಲಿಯಾ ಆಟಗಾರರು ಕೊಟ್ಟಿರುವ ಗುಡ್ ನ್ಯೂಸ್ ಆದ್ರೂ ಏನೋ? ಈ ಎಲ್ಲಾ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸದ್ಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಇದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಅದಾಗಲೇ ಎರಡು ಟಿ20 ಪಂದ್ಯಗಳನ್ನು ಆಡಿವೆ. ಫಲಿತಾಂಶವನ್ನು ನೋಡುವುದಾದರೆ ಎರಡು ಪಂದ್ಯಗಳನ್ನು ಕೂಡ ನ್ಯೂಜಿಲ್ಯಾಂಡ್ ಗೆದ್ದಿದೆ. ಆದರೆ ಆರ್ಸಿಬಿಗೆ ಖುಷಿ ವಿಚಾರ ಏನಪ್ಪಾ ಅಂದರೆ, ಆರ್ಸಿಬಿ ತಂಡದಲ್ಲಿ ಇರುವಂತಹ ಆಸ್ಟ್ರೇಲಿಯಾ ಆಟಗಾರರು ಉತ್ತಮ ಫಾರ್ಮ್ ನಲ್ಲಿರುವ ಮತ್ತು ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನವನ್ನು ನೀಡಿರುವುದು.

ಹೌದು ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 219 ರನ್ ಗಳನ್ನು ಕಲೆಹಾಕಿತು. ಅದನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 215 ರನ್ ಗಳನ್ನು ಕಲೆ ಹಾಕಲು ಮಾತ್ರ ಶಕ್ತವಾಯಿತು. ಆ ಮೂಲಕ ನ್ಯೂಜಿಲೆಂಡ್ ತಂಡ 4 ರನ್ ಗಳ ಗೆಲುವು ದಾಖಲಿಸಿತು. ಇಲ್ಲಿ ಆರ್ಸಿಬಿಗೆ ಖುಷಿ ವಿಷಯ ಏನಪ್ಪಾ ಅಂದ್ರೆ,. ಆರ್ಸಿಬಿ ಆಲ್-ರೌಂಡರ್ ಡೆಲ್ಲಿ ಡೇರ್ ಡೆವಿಲ್ಸ್ ಮೂಲಕ ಆರ್ಸಿಬಿ ತಂಡ ಟ್ರೇಡ್ ವಿಂಡೋದ ಮೂಲಕ ಖರೀದಿಸಿದಂತಹ ಡ್ಯಾನಿಯಲ್ ಸ್ಯಾಮ್ಸ ಬೌಲಿಂಗ್ನಲ್ಲಿ 4 ಓವರ್ ಗಳನ್ನು ಮಾಡಿ ಒಂದು ವಿಕೆಟ್ ಕಬಳಿಸಿದರೆ.

ಆಸ್ಟ್ರೇಲಿಯಾ ಪರವಾಗಿ ಅವರು ಬ್ಯಾಟಿಂಗ್ ಮಾಡಿ ಕೇವಲ 15 ಬಾಲ್ ಗಳಲ್ಲಿ 41 ರನ್ ಗಳನ್ನು ಸಿಡಿಸಿದರು, ಅದರಲ್ಲಿ ಎರಡು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸೇರಿತ್ತು. ಇನ್ನು ಆರ್ಸಿಬಿ ತಂಡದ ವಿಕೆಟ್ ಕೀಪಿಂಗ್ ಬ್ಯಾಟ್ಮ್ಯಾನ್ ಆಸ್ಟ್ರೇಲಿಯಾದಲ್ಲಿ ಆಗಿರುವಂತಹ ಜೋಷ್ ಫೀಲಿಪ್ಪೆ ಆರಂಭಿಕರಾಗಿ ಬಂದು, ಅವರು ಕೂಡ 32 ಬಾಲ್ ಗಳಲ್ಲಿ 45 ರನ್ ಸಿಡಿಸಿದರು. ಹಾಗೆ ಆರ್ಸಿಬಿ ಲೆಗ್ ಸ್ಪಿನ್ನರ್ ಆಡಂ ಜಾಂಪಾ ಕೂಡ 4 ಓವರ್ಗಳ ಸ್ಪೆಲ್ ಮಾಡಿ ಒಂದು ವಿಕೆಟನ್ನು ಕಬಳಿಸಿದರು. ಆರ್ಸಿಬಿ ಬೌಲರ್ಗಳು ಬ್ಯಾಟ್ಸ್ ಮ್ಯಾನ್ ಗಳು ಹಾಗೂ ಆಲ್-ರೌಂಡರ್ ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನ್ಯೂಜಿಲ್ಯಾಂಡ್ ವಿರುದ್ಧ ನೀಡಿದ್ದಾರೆ. ಈ ವಿಚಾರ ಆರ್ಸಿಬಿ ತಂಡಕ್ಕೆ ಖುಷಿ ನೀಡಿದೆ.