RCB 2021 ಒಂದೇ ಒಂದು ಪಂದ್ಯ, RCBಗೆ ಮೂರು ಮೂರು ಗುಡ್ ನ್ಯೂಸ್..!

ಸ್ನೇಹಿತರೆ, ಐಪಿಎಲ್ ಅಭಿಮಾನಿಗಳಿಗೆ ಅದರಲ್ಲೂ ಆರ್ಸಿಬಿ ಅಭಿಮಾನಿಗಳಿಗೆ ವಿಜಯ್ ಹಜಾರೆಯ ಒಂದೇ ಒಂದು ಪಂದ್ಯದಿಂದ ಮೂರು ಮೂರು ಗುಡ್ ನ್ಯೂಸ್ ಸಿಕ್ಕಿದೆ ಅಂತಾನೆ ಹೇಳಬಹುದು. ಮೊದಲನೇದಾಗಿ ವಿಜಯ್ ಹಜಾರೆ ಟ್ರೋಫಿ ಯಲ್ಲಿ ಕರ್ನಾಟಕ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಿದ್ದು, ಕರ್ನಾಟಕ ಗೆಲುವನ್ನು ದಾಖಲಿಸಿತ್ತು. ಕರ್ನಾಟಕ ತಂಡಕ್ಕೆ ಈ ಬಾರಿಯ ವಿಜಯ್ ಹಜಾರೆ ಮೂರನೇ ಗೆಲುವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 8 ವಿಕೆಟ್ ನಷ್ಟಕ್ಕೆ 277 ರನ್ ಗಳನ್ನು ಕಲೆ ಹಾಕಿತ್ತು.

ಇನ್ನು 279 ರನ್ ಬೆನ್ನತ್ತಿದ ಕರ್ನಾಟಕ ತಂಡ ಕೇವಲ ಒಂದು ವಿಕೆಟನ್ನು ಕಳೆದುಕೊಂಡು 5.3 ಓವನಲ್ಲಿ ಗೆಲುವಿನ ಕೇಕೆ ಹಾಕಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರ್ಸಿಬಿ ಬ್ಯಾಟ್ಸ್ ಮ್ಯಾನ್ ದೇವದತ್ ಪಡಿಕಲ್. ಹೌದು ದೇವದತ್ ಪಡಿಕಲ್ ಅವರು ಈ ಪಂದ್ಯದಲ್ಲಿ ಶತಕವನ್ನು ದಾಖಲಿಸಿದರು. ಈ ಬಾರಿ ವಿಜಯ್ ಹಜಾರೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಪಡಿಕಲ್ ಎರಡು ಅರ್ಧಶತಕ ಮತ್ತು ಎರಡು ಶತಕಗಳನ್ನು ದಾಖಲಿಸಿದ್ದಾರೆ.

ಕೇರಳ ವಿರುದ್ಧದ ಪಂದ್ಯದಲ್ಲಿ ಪಡಿಕಲ್ ತಾವು ಆಡಿದ 138 ಬಾಲ್ ಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 91.30 ಸ್ಟ್ರೈಕ್ ರೇಟ್ ನಲ್ಲಿ ಅಜಯ 126 ರನ್ ಕಲೆಹಾಕಿದರು. ಇದರೊಂದಿಗೆ ತಂಡದ ಗೆಲುವಿಗೂ ಸಹ ಪ್ರಮುಖ ಪಾತ್ರವಹಿಸಿದ್ದರು. ಮತ್ತೊಂದು ಕಡೆ ಕೇರಳದ ಪರವಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆಟಗಾರರು ಅರ್ಧಶತಕವನ್ನು ದಾಖಲಿಸಿದರು. ಮುಖ್ಯವಾಗಿ ಕೇರಳದ ಕ್ಯಾಪ್ಟನ್ ಸಚಿನ್ ಬೇಬಿ ಆರ್ಸಿಬಿ ಬ್ಯಾಟ್ಸ್ ಮ್ಯಾನ್ ಇವರು 63 ಬಾಲುಗಳಲ್ಲಿ ಎರಡು ಬೌಂಡರಿ ಒಂದು ಸಿಕ್ಸರ್ ಸಹಿತ ಅಜಯ 54 ರನ್ ಕಲೆಹಾಕಿದರು.

ಮತ್ತೊಂದು ಕಡೆ ಆರ್ಸಿಬಿ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಮೊಹಮ್ಮದ್ ಅಜರುದ್ದೀನ್ 38 ಬಾಲ್ ಗಳಲ್ಲಿ ಎರಡು ಬೌಂಡರಿ ಮತ್ತು 3 ಸಿಕ್ಸರ್ ಸಹಿತ 59 ರನ್ ಕಲೆಹಾಕಿದರು. ಒಂದೇ ಪಂದ್ಯದಲ್ಲಿ ಆರ್ಸಿಬಿಯ ಬ್ಯಾಟ್ಸ್ ಮ್ಯಾನ್ ಗಳು ಆರ್ಭಟಿಸಿದ್ದಾರೆ ಅಂತನೇ ಹೇಳಬಹುದು. ಇಬ್ಬರು ಅರ್ಧಶತಕವನ್ನು ದಾಖಲಿಸಿದರೆ, ದೇವದಾಸ್ ಪಡಿಕಲ್ ಶತಕವನ್ನು ದಾಖಲಿಸಿದರು. ಸ್ನೇಹಿತರೆ ಆರ್ಸಿಬಿ ಬ್ಯಾಟ್ಸ್ ಮ್ಯಾನ್ ಗಳ ಆರ್ಭಟದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.