RCB 2021 ಇವರು ನಮ್ಮವರು ಆರ್ಸಿಬಿ ಆಟಗಾರರ ಕಿರುಪರಿಚಯ…!

ಸ್ನೇಹಿತರೆ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿದೆ ಅಂತಾನೆ ಹೇಳಬಹುದು. ಅದರಲ್ಲಿ ಒಬ್ಬ ಆಟಗಾರ ಆಲ್-ರೌಂಡ್ ಆಟಗಾರ, ಬಲಗೈ ಬ್ಯಾಟ್ಸ್ ಮ್ಯಾನ್, ಹಾಗೇನೇ ಫಾಸ್ಟ್ ಬೌಲರ್. ಹೌದು ಆತ ಬೇರೆ ಯಾರು ಅಲ್ಲ ಗೋವಾ ಕ್ರಿಕೆಟ್ನ ಸೂಯೆಶ್ ಪ್ರಭುದೇಸಾಯಿ. ಇವರು ಆರ್ಸಿಬಿ ತಂಡಕ್ಕೆ ಹೇಗೆ ನೆರವಾಗುತ್ತಾರೆ, ಇವರಿಗಿರುವ ಆ ಕ್ವಾಲಿಟಿಸ್ ಗಳು ಯಾವವು. ಈ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಗೋವ ರಾಜ್ಯ ಭಾರತೀಯ ಕ್ರಿಕೆಟ್ ತಂಡಕ್ಕೆ ಅಷ್ಟೇನೂ ಉತ್ತಮ ಆಟಗಾರರನ್ನು ನೀಡಿಲ್ಲ, ಆದರೆ
ಸೂಯೆಶ್ ಪ್ರಭುದೇಸಾಯಿ ಎನ್ನುವ ಅದ್ಭುತ ಆಟಗಾರ ಇದೀಗ ಗೋವಾದ ನಾಲ್ಕನೇ ಕ್ರಿಕೆಟಿಗನಾಗಿ ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದಾನೆ. ಕೇವಲ 24 ವರ್ಷದ ಕ್ರಿಕೆಟಿಗ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರ ಕುರಿತು ತುಂಬಾನೇ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರೆ. ಈ ಹಿಂದಿನ ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದ ಆಟಗಾರ, ಆನಂತರದಲ್ಲಿ ಸಾಕಷ್ಟು ತರಬೇತಿಯನ್ನು ಪಡೆದುಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಿದ್ದ.

ಆ ಬಳಿಕ ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ನನಗೆ ನನ್ನ ತಂದೆ ತಾಯಿ ಮೆಸೇಜ್ ಮಾಡುವ ಮೂಲಕ ತಿಳಿಸಿದರು, ಈ ಕ್ಷಣವನ್ನು ನನ್ನ ಜೀವನಪೂರ್ತಿ ಮರೆಯೋದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 2017 ರಿಂದ ಗೋವಾ ತಂಡದ ಪರವಾಗಿ ಆಡುತ್ತಿದ್ದ ಸೂಯೆಶ್ ಪ್ರಭುದೇಸಾಯಿ ಈವರೆಗೂ 19 t20 ಗಳನ್ನು ಆಡಿದ್ದಾರೆ‌‌.

ಇದರಲ್ಲಿ 357 ರನ್ ಕೂಡ ಕಲೆಹಾಕಿದ್ದಾರೆ‌. ಬಲಗೈ ಬ್ಯಾಟ್ ಮ್ಯಾನ್ ಆಗಿರುವಂತಹ ಸುಯೇಶ್ ವಯಸ್ಸು ಇನ್ನೂ ಕೇವಲ 24 ವರ್ಷ. ಇನ್ನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೀಸೋ ಸಾಮರ್ಥ್ಯ ಹೊಂದಿರುವ ಈ ಆಟಗಾರನನ್ನು ಆರ್ಸಿಬಿ ಖರೀದಿಸಿದೆ. ಅಷ್ಟೇ ಅಲ್ಲದೆ ಇವರನ್ನು ಕೂಡ ಭಾರತೀಯ ಆಲ್-ರೌಂಡರ್ ಆಗಿ ಯೂಸ್ ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ. ನಿಮ್ಮ ಪ್ರಕಾರ ಸುಯೇಶ್ ಪ್ರಭುದೇಸಾಯಿ ಆರ್ಸಿಬಿ ತಂಡಕ್ಕೆ ನೆರವಾಗುತ್ತಾರೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.