ಅವಕಾಶ ಸಿಕ್ಕರೂ ಕೊನೆಯ ಕ್ಷಣದಲ್ಲಿ ಮೇಘನಾರಾಜ್ ಬಿಗ್ ಬಾಸ್ ಮನೆಗೆ ಯಾಕೆ ಹೋಗಿಲ್ಲ ಗೊತ್ತಾ..?

ಬಿಗ್ ಬಾಸ್ ಕನ್ನಡದ ಸೀಸನ್ 8 ನೆನ್ನೆ ತಾನೆ ಶುರು ಆಗಿದೆ. ಅದಕ್ಕೂ ಮುನ್ನ ಕಲರ್ಸ್ ಕನ್ನಡದ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ ಹಾಗೂ ಕಿಚ್ಚ ಸುದೀಪ್ ಅವರು ಒಂದು ಸುದ್ದಿಗೋಷ್ಠಿ ಮಾಡಿದ್ದರು. ಆ ಸುದ್ದಿಗೋಷ್ಠಿಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆಗೆ ಯಾರ್ಯಾರು ಸ್ಪರ್ಧಿಗಳು ಬರಬಹುದು ಎಂಬುದರ ಬಗ್ಗೆ ಮಾತನಾಡಿದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿತ್ತು, ಅದೇನಪ್ಪ ಅಂದ್ರೆ, ಈ ಬಾರಿಯ ಬಿಗ್ ಬಾಸ್ ಮನೆಗೆ ಚಿರು ಸರ್ಜಾ ಪತ್ನಿ ಮೇಘನಾರಾಜ್ ಅವರು ಹೋಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು.

ಬಿಗ್ ಬಾಸ್ ನಿರ್ದೇಶಕ ಹಾಗೂ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಅವರು ಸುಮಾರು ಹತ್ತು ದಿನಗಳ ಹಿಂದೆ ಮೇಘನಾ ರಾಜ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶದ ಬಗ್ಗೆ ಮೇಘನಾ ರಾಜ್ ಅವರ ಮನೆಗೆ ಹೋಗಿ ಮಾತನಾಡಿದ್ದರು. ಪರಮೇಶ್ವರ್ ಅವರ ಪ್ರಕಾರ ಮೇಘನಾ ರಾಜ್ ಅವರು ಈಗ ಚಿರು ಅವರು ಇಲ್ಲದೆ ಬಹಳ ನೋವಿನಲ್ಲಿ ಇರುವುದರಿಂದ, ಮೇಘನಾರಾಜ್ ಅವರಿಗೆ ಕೂಡ ಒಂದು ಒಳ್ಳೆಯ ಬ್ರೇಕ್ ಸಿಗಬಹುದು ಎಂದು ಯೋಚನೆ ಮಾಡಿ, ಮೇಘರಾಜ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗಲು ವಿನಂತಿ ಮಾಡಿದ್ದಾರೆ.

ಇದರ ಬಗ್ಗೆ ಮೇಘನರಾಜ ಅವರು ಹೇಳಿದ್ದೇನು ಗೊತ್ತಾ? ಹೌದು ಪರಮೇಶ್ವರ್ ಅವರು ಮೇಘನಾ ರಾಜ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಕೊಟ್ಟಿದ್ದು ಸತ್ಯ, ಆದರೆ ಮೇಘರಾಜ್ ಅವರು ಮೊದಲಿಗೆ ತಮಗೆ ಒಂದು ವಾರದ ಸಮಯ ಕೊಡುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಒಂದು ವಾರದ ನಂತರ ಪರಮೇಶ್ವರ ಅವರಿಗೆ ಕರೆ ಮಾಡಿ “ಇಲ್ಲ ಪರಂ ಅವರೇ, ನನ್ನ ತಲೆಯಲ್ಲಿ ಸದ್ಯಕ್ಕೆ ನನ್ನ ಮಗುವಿನ ಬಗ್ಗೆ ಮಾತ್ರವೇ ಯೋಚನೆ ಇದ್ದು, ಸದ್ಯಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗಲು ರೆಡಿ ಇಲ್ಲ, ಮುಂದಿನ ವರ್ಷ ಖಂಡಿತ ಬರುತ್ತೇನೆ” ಎಂದು ಮೇಘನರಾಜ್ ಅವರು ಹೇಳಿದ್ದಾರೆ.

ಇದಲ್ಲದೆ ಈ ವಿಚಾರದ ಬಗ್ಗೆ ಮೇಘನಾ ರಾಜ್ ಅವರ ತಮ್ಮ ತಂದೆ ಸುಂದರರಾಜ ಹತ್ತಿರ ಹಾಗೂ ಧ್ರುವ ಸರ್ಜಾ ಅವರ ಜೊತೆ ಕೂಡ ಮಾತನಾಡಿದ್ದಾರಂತೆ. ಅವರ ಸಲಹೆ ಪಡೆದುಕೊಂಡು ಮೇಘನಾ ರಾಜ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲು ಮೇಘನಾ ರಾಜ್ ಅವರಿಗೆ ಅವಕಾಶ ಬಂದಿದ್ದು ನಿಜ, ಆದರೆ ಮೇಘನರಾಜ್ ಅವರು ಇಲ್ಲ ಈ ಬಾರಿ ನನ್ನ ಮನಸ್ಥಿತಿ ಬಿಗ್ ಬಾಸ್ ಗೆ ಹೋಗಲು ಸರಿ ಇಲ್ಲ ಎಂದು ಹೇಳಿ ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.