ಯಾವ ತಂದೆ ಕೂಡ ಈ ರೀತಿ ಮಗಳ ಮದುವೆ ಮಾಡಿಸಲು ಸಾಧ್ಯವಿಲ್ಲ ಯಾಕೆ ಗೊತ್ತಾ..?

ಸ್ನೇಹಿತರೆ, ತಾಯಿ-ಮಗುವನ್ನು ಒಂಬತ್ತು ತಿಂಗಳು ಹೊತ್ತಿಕೊಂಡು ತಿರುಗಾಡಿದರೆ, ತಂದೆ ಮಗುವನ್ನು ಮತ್ತು ಮಗುವಿನ ಕಷ್ಟವನ್ನು ಜೀವನಪರ್ಯಂತ ಹೆಗಲ ಮೇಲೆ ಹೊತ್ತುಕೊಂಡು ತಿರುಗಾಡುತ್ತಾರೆ. ಮಗು ಹುಟ್ಟಿದ ಕ್ಷಣದಿಂದ ಮಗುವಿಗೆ ಹೊಸ ಲೋಕವನ್ನು ಸೃಷ್ಟಿಸುವ ಸೂಪರ್ ಮ್ಯಾನ್ ಅಂದರೆ ತಂದೆ ಯಾಗಿರುತ್ತಾರೆ. ಅಪ್ಪ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಬಂದ ತಕ್ಷಣ ನಮ್ಮಲ್ಲಿ ಗೊತ್ತಿಲ್ಲದ ಧೈರ್ಯ ಹುಟ್ಟುತ್ತದೆ ಅಂತನೇ ಹೇಳಬಹುದು. ಕಾರಣ ಎಂಥ ಸಂದರ್ಭದಲ್ಲೂ ತಂದೆ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬುದು.

ಇದೇ ರೀತಿ ಇಲ್ಲಿ ಉಮಾ ತಂದೆ ಆಂಧ್ರ ಪ್ರದೇಶಕ್ಕೆ ಸೇರಿದ ನರಸಿಂಹಚಾರಿ ಅವರಿಗೆ ಓರ್ವ ಹೆಣ್ಣು ಮಗಳು ಇರುತ್ತಾಳೆ. ಮಗು ಹುಟ್ಟಿದಾಗ ಈತನ ಸಂತೋಷ ಎಲ್ಲೇ ದಾಟಿತ್ತು. ಈತ ತನ್ನ ಮಗಳಿಗೆ ಏನಾದರೂ ವಿಶೇಷವಾದ ಉಡುಗೊರೆಗಳನ್ನು ಕೊಟ್ಟು ಸದಾ ಖುಷಿಯಲ್ಲಿ ತೇಲಾಡುತ್ತಿದ್ದ ನರಸಿಂಹಚಾರಿ. ಕೊನೆಗೆ ಮಗಳು ಕೂಡ ಬೆಳೆದು ನಿಂತಳು, ಮದುವೆ ಕೂಡ ಫಿಕ್ಸ್ ಆಯ್ತು. ಪ್ರತಿಕ್ಷಣ ಮಗಳ ಬಗ್ಗೆ ಚಿಂತಿಸುವ ಈ ತಂದೆ ಮಗಳ ಮದುವೆಯ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದಾರೆ.

ಪತ್ರಿಕೆಯ ಮೊದಲ ಪೇಜಿನಲ್ಲಿ ಹೆತ್ತರೆ ಹೆಣ್ಣುಮಕ್ಕಳನ್ನೇ ಹೆರಬೇಕು ಎಂದು ಮುದ್ರಿಸಿ ಹಾಗೇ ಆ ಪೇಜಿನ ಪೂರ್ತಿ ಮಗಳ ಬಾಲ್ಯದಿಂದ ಇಲ್ಲಿವರೆಗಿನ ಫೋಟೋಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನೊಂದು ಪೇಜಿನಲ್ಲಿ ಮಗಳ ಬಗ್ಗೆ ಒಂದು ಕವಿತೆಯನ್ನು ಸಹ ಬರೆದು ಮುದ್ರಿಸಿದ್ದಾರೆ. ಮಗಳೆಂದರೆ ಈ ತಂದೆಗೆ ಆದಷ್ಟು ಪ್ರೀತಿ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ. ತಂದೆಯ ಕನಸುಗಳನ್ನು ಹೊತ್ತ ಈ ಲಗ್ನ ಪತ್ರಿಕೆ ನೋಡಿದ ಮಗಳು ಸಂತೋಷದಿಂದ ತಂದೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಳಂತೆ.

ನಾವು ತಂದೆಯ ಬಗ್ಗೆ ಅದೆಷ್ಟು ಬಾರಿ ಆಲೋಚಿಸುತ್ತೇವೆ ಹೋಗುತ್ತಿಲ್ಲ, ಆದರೆ ಅವರು ಪ್ರತಿಕ್ಷಣ ನಮ್ಮ ಬಗ್ಗೆ ಆಲೋಚಿಸುತ್ತಿದ್ದಾರೆ. ನಮ್ಮ ಏಳಿಗೆಗಾಗಿ ತಂದೆ ಬೇರೆಯವರ ಕಾಲು ಹಿಡಿಯಲು ಸಹ ಸಿದ್ಧರಾಗಿರುತ್ತಾರೆ. ಮಾನವನ ಅತಿ ದುಃಖದ ಕ್ಷಣ ಅಂದ್ರೆ ಮಗುವನ್ನು ಕಳೆದುಕೊಂಡ ತಂದೆಯ ದುಃಖ ಎಂದು ಪುರಾಣಗಳು ಹೇಳುತ್ತವೆ. ಹಾಗಾಗಿ ಅವರು ನಮ್ಮಿಂದ ದೂರ ಹೋಗುವ ಮುನ್ನ, ಅವರ ಬಗ್ಗೆ ಆಲೋಚಿಸೋಣ, ಅವರನ್ನು ಸಂತೋಷವಾಗಿರಲು ಪ್ರಯತ್ನಿಸೋಣ.