ಡಾ.ರಾಜ್ ಕುಮಾರ್ ಅವರು ಕಟ್ಟಿಸಿದ ಗಾಜನೂರಿನ ಮನೆ ಹೇಗಿದೆ ಗೊತ್ತಾ ಫೋಟೋ ನೋಡಿ !!

ಸ್ನೇಹಿತರೆ, ಗಾಜನೂರು ಎಂಬ ಚಿಕ್ಕ ಹಳ್ಳಿಯಿಂದ ನಕ್ಷತ್ರ ಹುಟ್ಟಿ ಒಂದು ಆರು ಕೋಟಿ ಕನ್ನಡಿಗರ ಹೃದಯದಲ್ಲಿ ಮಿನುಗುತ್ತದೆ ಎಂದು ಯಾರು ತಾನೇ ಊಹಿಸಲು ಸಾಧ್ಯ ಹೇಳಿ. ಚಿಕ್ಕ ವಯಸ್ಸಲ್ಲೇ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ನಟನೆಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು, ನಾಟಕಗಳ ಮಧ್ಯೆ ಬಾಂಧವ್ಯವನ್ನು ಬೆಳೆಸಿಕೊಂಡು. ನಂತರ ಕನ್ನಡದ ಸೂಪರ್ ಸ್ಟಾರ್ ಆಗಿ ಬೆಳೆದ ಡಾ.ರಾಜಕುಮಾರ್ ಕನ್ನಡ ಸಿನಿರಸಿಕರ ಮಹಾರಾಜ. ಹಾಗಾದ್ರೆ ಅಣ್ಣಾವ್ರ ಗಾಜನೂರಿನ ಕನಸಿನ ಮನೆ ಹೇಗಿದೆ ಅಂತ ತಿಳಿಯೋಣ ಬನ್ನಿ….

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಆಸೆ ಇರುತ್ತೆ ಅದು ಏನೆಂದರೆ ಈ ಪ್ರಪಂಚಕ್ಕೆ ತನ್ನನ್ನು ಪರಿಚಯಿಸಿದ ತನ್ನ ಹುಟ್ಟೂರಿನಲ್ಲಿ ಒಂದು ಒಳ್ಳೆಯ ಮನೆಯನ್ನು ಕಟ್ಟಬೇಕು ಅನ್ನೋದು. ಯಾಕಂದ್ರೆ ನಾವು ಎಲ್ಲೇ ಇದ್ದರೂ ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದರು, ನಮ್ಮ ಮನಸ್ಸು ನಮ್ಮ ಹುಟ್ಟೂರಿನ ಕಡೆ ಸೆಳೆಯುತ್ತಿರುತ್ತದೆ. ಅಲ್ಲದೆ ಅಲ್ಲಿನ ನೆನಪುಗಳು ನಮ್ಮನ್ನು ಸದಾ ಕಾಡುತ್ತಿರುತ್ತವೆ. ಇದೇ ರೀತಿ ಅಣ್ಣಾವ್ರಿಗೆ ಕೂಡ ತಮ್ಮ ಹುಟ್ಟೂರಿನಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಬೇಕು ಅನ್ನುವ ಆಸೆ ಇತ್ತು.

ಕೊನೆಗೂ ತಮ್ಮ ಅಭಿರುಚಿಗೆ ತಕ್ಕಂತೆ ತಮ್ಮ ಕನಸಿನ ಮನೆಯನ್ನು ಗಾಜನೂರಿನ ಫಾರ್ಮ್ ಹೌಸ್ ನಲ್ಲಿ ಕಟ್ಟಿಸಿದರು ಅಣ್ಣಾವ್ರು. ಅವರ ಗಾಜನೂರಿನ ಮನೆಯನ್ನು ನೀವು ಈ ಲೇಖನದಲ್ಲಿ ಕಾಣಬಹುದು. ಸುಂದರ ಪರಿಸರದ ಮಧ್ಯೆ ಇರುವ ಈ ಮನೆ, ಈ ಸ್ಥಳ ಅಂದ್ರೆ ಅಣ್ಣಾವ್ರಿಗೆ ತುಂಬಾನೇ ಪ್ರೀತಿ. ಸಮಯ ಸಿಕ್ಕಾಗೆಲ್ಲ ಇಲ್ಲಿಗೆ ಬಂದು ಸಾಮಾನ್ಯ ವ್ಯಕ್ತಿಯಂತೆ ಜಮೀನಿನಲ್ಲಿ ತಿರುಗಾಡಿ, ಎಲ್ಲರೊಟ್ಟಿಗೆ ಬೆರೆತು ಒಂದಷ್ಟು ದಿನ ಇಲ್ಲೇ ಇದ್ದು ಹೋಗುತ್ತಿದ್ದರು.

ಅಲ್ಲದೆ ಮುಂದೆ ಹೆಚ್ಚು ಹೆಚ್ಚು ದಿನಗಳನ್ನು ಇದೇ ಮನೆಯಲ್ಲಿ ಕಳೆಯಲು ಬಯಸಿದ್ದರು. ಆದರೆ ಅವರ ಆಸೆಗೆ ಕಲ್ಲು ಹಾಕಿದವನು ಕಾಡುಗಳ್ಳ ವೀರಪ್ಪನ್. ಹೌದು ಅಣ್ಣಾವ್ರು ಇದೆ ಮನೆಯಲ್ಲಿದ್ದಾಗ ಬಂದು ಅವರನ್ನು ಅಪಹರಿಸಿದ್ದ. ಅಲ್ಲದೆ ರಾಜ್ ಕುಮಾರ್ ಅವರು ಹುಟ್ಟಿದ ಗಾಜನೂರಿನ ಮನೆಯನ್ನು ಸಹ ಜೋಪಾನವಾಗಿ ಕಾಪಾಡಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಈ ಮನೆಗೆ ಭೇಟಿ ಕೊಟ್ಟು ತಂದೆಯ ಜೊತೆಗಿನ ಹಳೆ ನೆನಪುಗಳನ್ನು ಮೆಲಕು ಹಾಕಿಕೊಂಡರು.