ನಮ್ಮ ಅಪ್ಪು ಅವರ ಐಷಾರಾಮಿ ಹೊಸಮನೆ ಹೇಗಿದೆ ಗೊತ್ತಾ..! ಮನೆಯ ಒಳಗೆ ಏನ್ ಏನ್ ಇದೆ ಗೊತ್ತಾ?

ಅಭಿಮಾನಿಗಳ ಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇತರರಿಗೆ ಮಾಡುವ ಸಹಾಯ ಮತ್ತು ಸರಳತೆಯಿಂದಲೇ ಬಹು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅಣ್ಣಾವ್ರು ಮತ್ತು ಪಾರ್ವತಮ್ಮ ದಂಪತಿಯ ಮಗನಾಗಿ ತಂದೆ-ತಾಯಿ ತೋರಿಸಿದ ಸರಳತೆ ಸಜ್ಜನಿಕೆ ಮತ್ತು ಸಹಾಯ ಮನೋಭಾವದಿಂದಲೇ ಬೆಳೆದಿದ್ದಾರೆ ಅಪ್ಪು. ಅಪ್ಪು ಅವರ ನಡವಳಿಕೆ ಮತ್ತು ಸರಳತೆ ಕುರಿತು ಅನೇಕರು ಮಾತನಾಡುವುದನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಅಪ್ಪು ಅವರು ನಿಜ ಜೀವನದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಅಂತನೇ ಹೇಳಬಹುದು.

ಡಾ.ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಮುದ್ದಿನ ಮಗ ಅಪ್ಪು ಚಿಕ್ಕವಯಸ್ಸಿನಿಂದಲೂ ತಂದೆ ಜೊತೆ ಸಿನಿಮಾ ಮಾಡಿಕೊಂಡು ಬಂದವರು. ಹತ್ತನೇ ವಯಸ್ಸಿನಲ್ಲಿಯೇ ನಟನೆಗಾಗಿ ನ್ಯಾಷನಲ್ ಅವಾರ್ಡ್ ಪಡೆದ ಖ್ಯಾತಿ ಅಪ್ಪು ಅವರದ್ದು. ಇನ್ನು ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದರು ಅಪ್ಪು. ನಟನಾದ ನಂತರ ತಮ್ಮ ಪ್ರತಿಭೆಯಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಅಪ್ಪು ಅವರು ನಟನೆ, ಗಾಯನ, ನಿರ್ಮಾಣ ಎಲ್ಲದರಲ್ಲೂ ನಂಬರ್1.

ಸಿನಿಮಾ ಕೆಲಸಗಳಿಂದ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗಾಗಿ ಸಮಯ ಕೊಡುವುದನ್ನು ಮಿಸ್ ಮಾಡುವುದಿಲ್ಲ ಅಪ್ಪು. ಪತ್ನಿ ಮತ್ತು ಮಕ್ಕಳೊಡನೆ ಆಗಾಗ ಟ್ರಾವೆಲ್ ಮಾಡಿ ಹೊಸ ಜಾಗಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಫ್ಯಾಮಿಲಿ ಜೊತೆ ಅಪ್ಪು ಅವರು ಟ್ರಾವೆಲ್ ಮಾಡುತ್ತಿರುವ ಹಲವಾರು ಫೋಟೋ ಮತ್ತು ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ನಮಗೆಲ್ಲ ತಿಳಿದಿರುವ ಹಾಗೆ ಅಪ್ಪು ಅವರು ಇರುವುದು ಬೆಂಗಳೂರಿನ ಸದಾಶಿವನಗರದಲ್ಲಿ. ರಾಘಣ್ಣನ ಕುಟುಂಬ ಮತ್ತು ಅಪ್ಪು ಕುಟುಂಬ ಜೊತೆಯಾಗಿ ವಾಸ ಮಾಡುತ್ತಾರೆ.

ಈ ಮನೆಯಲ್ಲದೆ ಅಪ್ಪು ಅವರು ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಆ ಮನೆ ಹೇಗಿದೆ ಮತ್ತು ಯಾವ ಜಾಗದಲ್ಲಿ ಇದೆ ಎಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.. ಸದಾಶಿವನಗರದಲ್ಲಿರುವ ಮನೆ ಜೊತೆ ಆಗಾಗ ತಮ್ಮ ಹೊಸಮನೆಯಲ್ಲಿ ಕೂಡ ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ತಮ್ಮ ಇಚ್ಛೆಗೆ ತಕ್ಕಹಾಗೆ ಹೊಸ ಮನೆಯನ್ನು ಕಟ್ಟಿಸಿದ್ದಾರೆ, ಪುನೀತ್ ಅವರ ಪತ್ನಿ ಅಶ್ವಿನಿ ಅವರು ತಮ್ಮ ಇಷ್ಟದ ಹಾಗೆ ಇಡೀ ಮನೆಯನ್ನು ಅಚ್ಚುಕಟ್ಟಾಗಿ ವಿನ್ಯಾಸ ಮಾಡಿಸಿದ್ದಾರೆ. ಅಪ್ಪು ಅವರ ಹೊಸ ಮನೆ ಬಹಳ ಸುಂದರವಾಗಿದೆ.

ಜೊತೆಗೆ ಆಧುನಿಕ ರೀತಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಅಪ್ಪು ಅವರ ಹೊಸ ಮನೆ ಸದಾಶಿವನಗರದಲ್ಲೆ ಇದ್ದು, ಇದರ ಬೆಲೆ ಬರೋಬ್ಬರಿ 15 ಕೋಟಿ ಎಂದು ಮೂಲಗಳಿಂದ ತಿಳಿದುಬಂದಿದೆ. ಅಪ್ಪು ಅವರು ಆಗಾಗ ತಮ್ಮ ಹೊಸ ಮನೆಯಲ್ಲೇ ಕಾಲ ಕಳೆಯುತ್ತಾರಂತೆ. ಆ ಮನೆಯ ಕೆಲವೊಂದು ಫೋಟೋಗಳನ್ನು ನೀವು ಇಲ್ಲಿ ಕಾಣಬಹುದು‌.