ನಿಮ್ಮ ಬಳಿ ಇದು ಇಲ್ಲದಿದ್ದರೆ ಹೈವೇ ರಸ್ತೆಯಲ್ಲಿ ಹೋಗಲೇ ಬೇಡಿ!! ಸರಕಾರದ ಈ ಹಗಲು ದರೋಡೆ ಬಗ್ಗೆ ನಿಮ್ಮ ಅನಿಸಿಕೆ..?

ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ವಾಹನ ಸವಾರರಿಗೆ ಬೇಸರ ಮತ್ತು ಸಿಟ್ಟು ಎರಡು ಕೂಡ ಆಗಿದೆ. ಹಲವರು ಸರ್ಕಾರಕ್ಕೆ ಹಿಡಿ ಶಾಪ ಕೂಡ ಹಾಕುತ್ತಿದ್ದಾರೆ. ಇದೀಗ ವಾಹನ ಸವಾರರಿಗೆ ಮತ್ತೊಂದು ಆತಂಕ ಎದುರಾಗಿದೆ. ಇನ್ನು ಮುಂದೆ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಇನ್ನು ಮುಂದೆ ಪ್ರಯಾಣ ಮಾಡಬೇಕಾದರೆ ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಈಗ ನಮ್ಮ ಸರ್ಕಾರ ಹೆದ್ದಾರಿಗಳಲ್ಲಿ ಇರುವ ಟೋಲ್ ಹಾಗೂ ಫಾಸ್ಟ್ ಟ್ಯಾಗ್ ಬಗ್ಗೆ ಜನರಿಗೆ ಮತ್ತೊಂದು ಶಾಕ್ ನೀಡಿದೆ.

ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವುದು ವಾಹನ ಸವಾರರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ರಾಜ್ಯದ ಕೆಲವು ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಇಂದಾಗಿ ವಾಹನ ಸವಾರರು ಜಗಳ ಆಡುವ ಹಂತಕ್ಕೆ ತಲುಪಿದ್ದಾರೆ. ಇನ್ನು ಮುಂದೆ ಯಾವುದೇ ಟೋಲ್ ದಾಟಬೇಕಾದರೆ ಫಾಸ್ಟ್ ಇರಲೇಬೇಕು. ಇಲ್ಲವಾದಲ್ಲಿ ದುಪ್ಪಟ್ಟು ಬೆಲೆ ಕಟ್ಟಬೇಕು ಎಂಬ ರೂಲ್ಸ್ ಸೋಮವಾರ ರಾತ್ರಿಯಿಂದ ಜಾರಿಯಾಗಿದೆ. ಇದರಿಂದಾಗಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಫಾಸ್ಟ್ ಟ್ಯಾಗ್ ಮಾಡಿಸಲು ಸಮಯ ಇದ್ದರೂ ಮಾಡಿಸದೆ ಇದ್ದ ವಾಹನ ಸವಾರರಿಗೆ ಫೈನ್ ಹಾಕಲಾಗುತ್ತಿದೆ.

ಬೆಲೆಗಳನ್ನು ನೋಡುವುದಾದರೆ : ಕಾರುಗಳಿಗೆ ರೂ 20 ಇದ್ದಿದ್ದು, ರೂ 40 ಆಗಿದೆ. ಇನ್ನು ಮಿನಿ ಬಸ್ ಗಳಿಗೆ ರೂ 30 ಇದ್ದಿದ್ದು, 60 ಆಗಿದೆ. ಇನ್ನು ಬಸ್ ಗಳಿಗೆ ರೂ.60 ಇದ್ದಿದ್ದು, ರೂ.130 ಆಗಿದೆ. ಈ ರೀತಿ ಟೋಲ್ ಸಿಬ್ಬಂದಿಗಳ ಜೊತೆ ವಾಹನ ಸವಾರರು ಮಾತಿನ ಚಕಮಕಿ ನಡೆಸಿ ಹೊಡೆದಾಟಕ್ಕೆ ಹೋಗಿರುವಂತಹ ಘಟನೆಗಳು ರಾಜ್ಯದ ಹಲವಾರು ಟೋಲ್ಗಳಲ್ಲಿ ನಡೆದಿವೆ. ಇದರ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ಆಟೋ ಚಾಲಕರೊಬ್ಬರು ಸರ್ಕಾರ ಇರುವುದು ಜನರಿಗಾಗಿ, ಜನರಿದ್ದರೆ ಸರ್ಕಾರ, ಸರ್ಕಾರ ಜನರಿಗೆ ಸಹಾಯ ಆಗುವ ರೀತಿ ಕೆಲಸ ಮಾಡಬೇಕೆ ಹೊರತು, ಜನರಿಗೆ ತೊಂದರೆ ಆಗುವ ಹಾಗೆ ಮಾಡಬಾರದು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ…