ಇಂದಿಗೂ ಒಂದು ಬಾರಿಯೂ ಎಣ್ಣೆ ಮುಟ್ಟದ ಕನ್ನಡದ ನಟರು ಯಾರ್ಯಾರು ಗೊತ್ತಾ, ತಿಳಿದರೆ ಭೇಸ್ ಅಂತೀರಾ


ಸ್ನೇಹಿತರೆ ಇತ್ತೀಚಿನ ಸಿನಿಮಾಗಳು ಯಾವ ಹಂತಕ್ಕೆ ತಲುಪುತ್ತಿವೆ ಅಂದರೆ, ಸಿಗರೇಟ್ ಸೇದುವ ಮಧ್ಯಪಾನ ಮಾಡುವ ದೃಶ್ಯಗಳು ಇಲ್ಲದ ಚಿತ್ರಗಳನ್ನು ಹುಡುಕುವುದು ತುಂಬಾನೇ ಕಷ್ಟವಾಗಿದೆ. ಹೀಗಾಗಿ ಜನ ಹೀರೋಗಳ ಉಪದೇಶವನ್ನು ಕೇಳುವುದನ್ನು ಬಿಟ್ಟಿದ್ದಾರೆ ಅಂತನೇ ಹೇಳಬಹುದು. ಆದರೆ ಕೆಲವರು ನಿಜವಾಗಿಯೂ ಆಕಾಶದಲ್ಲಿ ಕಾಣುವ ಸ್ಟಾರ್ ರೀತಿ ಬದುಕುತ್ತಿದ್ದಾರೆ. ಇತರರಿಗೆ ಆದರ್ಶವಾಗಿ ಇದ್ದಾರೆ. ಅಂತಹವರು ನಮ್ಮ ಕನ್ನಡದಲ್ಲೂ ಕೂಡ ಇದ್ದಾರೆ. ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಎಣ್ಣೆ ಮುಟ್ಟದ ಕನ್ನಡ ನಟರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಜೀವನದಲ್ಲಿ ಒಮ್ಮೆ ಅಪ್ಪು ಅವರನ್ನು ಭೇಟಿ ಮಾಡಿ ನೋಡಿ…

ಆ ಕ್ಷಣವನ್ನು ನೀವು ಜೀವನಪೂರ್ತಿ ಮರೆಯುವುದಿಲ್ಲ, ಯಾಕೆಂದರೆ ಅವರು ನಿಜವಾದ ಜಂಟಲ್ಮ್ಯಾನ್, ನಿಮ್ಮನ್ನು ಸ್ನೇಹಿತನಂತೆ ಮಾತನಾಡಿಸುತ್ತಾರೆ. ಅಲ್ಲದೆ ಒಳ್ಳೆಯ ಕಥೆಯನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುವ ಅದ್ಭುತ ಹೃದಯವಂತ ನಮ್ಮ ಪುನೀತ್ ರಾಜಕುಮಾರ್. ಹಾಗೆಯೇ ಎಣ್ಣೆಯಿಂದ ಅಪ್ಪು ತುಂಬಾ ದೂರ ಇರುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಈ ಸ್ಟಾರ್ ಅನ್ನು ನೋಡಿದರೆ ದಿನಪೂರ್ತಿ ಹೆಣ್ಣೆ ಕುಡಿಯುತ್ತಾರೆ ಅಂತ ಅನಿಸಬಹುದು, ಆದರೆ ನಿಜಾಂಶ ಏನೆಂದರೆ ಜೀವನದಲ್ಲಿ ಇಲ್ಲಿಯವರೆಗೂ ಮಧ್ಯಪಾನ ಹತ್ತಿರಕ್ಕೂ ಬಿಟ್ಟುಕೊಳ್ಳದ ಅಪ್ಪಟ ನಟ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್.

ಇವರು ನಿಜಜೀವನದಲ್ಲಿ ಸಿಗರೇಟ್ ಕೂಡ ಸೇದುವುದಿಲ್ಲ. ಕಲ್ಪನೆಯ ಮತ್ತಿನಲ್ಲಿ ಇರುವ ಕ್ರೇಜಿಸ್ಟಾರ್ ಗೆ ಎಣ್ಣೆ ಏನು ಮತ್ತು ಕೊಡುತ್ತದೆ ಅಲ್ಲವೇ. ಇನ್ನು ಪ್ರಾರಂಭದಲ್ಲಿ ಸಿಗರೇಟ್ ಸೇದುತ್ತಿದ್ದ ಕಿಚ್ಚ ಸುದೀಪ್ ಅವರು ನಂತರ ಮೈಗ್ರೇನ್ ತಲೆನೋವಿಗೆ ತುತ್ತಾದರು. ಹೀಗಾಗಿ ಸುಮಾರು ವರ್ಷಗಳ ಹಿಂದೆ ಸಿಗರೇಟ್ ಸೇದುವುದನ್ನು ಬಿಟ್ಟ ಸುದೀಪ್ ಅವರು ಎಣ್ಣೆ ಕೂಡ ಕುಡಿಯುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಇತರರಿಗೆ ಸಹಾಯ ಮಾಡುವುದರಲ್ಲಿ ಕಿಕ್ ಪಡೆಯುವ ಕಿಚ್ಚನಿಗೆ ಎಣ್ಣೆ ಯಾವ ಮಹಾನ್ ಕಿಕ್ ಕೊಡುತ್ತದೆ ಅಲ್ವೇ.

ಇನ್ನೂ ನಿಜಜೀವನದಲ್ಲಿ ಅಲ್ಲದೆ ಸಿನಿಮಾದಲ್ಲಿ ಮಧ್ಯಪಾನ ಮತ್ತು ಧೂಮಪಾನ ಮಾಡದ ಪ್ರಪಂಚದ ಏಕೈಕ ನಟ ನಮ್ಮ ರಾಜಣ್ಣ. ಹೌದು ಎಣ್ಣೆ ಕುಡಿಯುವ ಸೀನ್ ಇದ್ದರೆ ಅಂತಹ ಚಿತ್ರಗಳನ್ನು ತಿರಸ್ಕಾರ ಮಾಡುತ್ತಿದ್ದರಂತೆ ನಟಸಾರ್ವಭೌಮ. ಅದಕ್ಕೆ ಕಾರಣ ನಮ್ಮ ಅಭಿಮಾನಿಗಳಿಗೆ ಕೆಟ್ಟ ಚಟಗಳನ್ನು ಪರಿಚಯಿಸಬಾರದು ಎಂದು. ಎಂತಹ ಆಲೋಚನೆ ಅಲ್ಲವೇ. ಸ್ನೇಹಿತರೆ ಈ ಮಾಹಿತಿಯ ಅರ್ಥ ಈ ನಾಲ್ಕು ಜನ ಸ್ಟಾರ್ಸ್ ಬಿಟ್ಟು ಬೇರೆ ಎಲ್ಲಾ ಸ್ಟಾರ್ಸ್ ಕುಡಿಯುತ್ತಾರೆ ಅಂತಲ್ಲ. ಬದಲಿಗೆ ನಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಈ ಮಾಹಿತಿಯನ್ನು ತಿಳಿಸಿದ್ದೇನೆ ಅಷ್ಟೇ.