ತೆಲುಗಿನಲ್ಲಿ ದಾಖಲೆ ಸೃಷ್ಟಿಸಿದ ಕೆಜಿಎಫ್ 2 ಚಿತ್ರ, ದಾಖಲೆಗಳು ಉಡೀಸ್ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೇವಲ ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಕೆಜಿಎಫ್ ಚಿತ್ರ ಇದೀಗ ಸದ್ದು ಮಾಡಲು ಆರಂಭಿಸಿದೆ. ಹೌದು ಸ್ನೇಹಿತರೇ ಇದೀಗ ಕೆಜಿಎಫ್ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದು ಕೊಳ್ಳಲು ವಿವಿಧ ಚಿತ್ರರಂಗಗಳ ನಿರ್ಮಾಪಕರು ಕ್ಯೂ ಅಲ್ಲಿ ನಿಂತಿದ್ದಾರೆ

ಅದರಲ್ಲಿಯೂ ಕಳೆದ ಬಾರಿ ಅಮೆಜಾನ್ ಪ್ರೈಮ್ ಕೆಜಿಎಫ್ 1 ಚಿತ್ರದ ಬಿಡುಗಡೆ ಹಕ್ಕನ್ನು ಕೇವಲ ಐದು ಕೋಟಿಗೆ ಖರೀದಿಸಲಾಗಿತ್ತು. ಆದರೆ ಇದರಿಂದ ಬಂದ ಲಾಭ ಬರೋಬ್ಬರಿ 12 ಕೋಟಿ, ಹೀಗಾಗಿ ತೆಲುಗು ಚಿತ್ರರಂಗದ ನಿರ್ಮಾಪಕರು ಕೂಡ ಕೆಜಿಎಫ್ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದು ಕೊಳ್ಳಲು ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ. ಪೈಪೋಟಿಯನ್ನು ಅರ್ಥ ಮಾಡಿಕೊಂಡಿರುವ ಕೆಜಿಎಫ್ ಚಿತ್ರತಂಡ ಕೆಜಿಎಫ್ ಗಾಗಿ ಭರ್ಜರಿ ಬೇಡಿಕೆಯನ್ನು ಇಟ್ಟಿದ್ದು.

ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾ ವಿತರಣೆಗಳನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಪಡೆದು ಕೊಳ್ಳಲು ಕೆಜಿಎಫ್ ಚಿತ್ರತಂಡ ಬರೋಬ್ಬರಿ 70 ಕೋಟಿಗಳಿಗೆ ಬೇಡಿಕೆ ಇಟ್ಟಿತ್ತು, ಸಾಕಷ್ಟು ನಿರ್ಮಾಪಕರು ಎಪ್ಪತ್ತು ಕೋಟಿ ಎಂದು ಒಂದು ಕ್ಷಣ ಆಶ್ಚರ್ಯಗೊಂಡು ಹಿಂದೆ ಸರಿದರು. ಆದರೆ ತೆಲುಗಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ದಿಲ್ ರಾಜುರವರು ಎಪ್ಪತ್ತು ಕೋಟಿ ಸಾಧ್ಯವಿಲ್ಲ 65 ಕೋಟಿ ಕೊಡುತ್ತೇನೆ ಎಂದು ಹೇಳಿ ಡೀಲ್ ಓಕೇ ಮಾಡಿದ್ದಾರೆ, ಈ ಮೂಲಕ ತೆಲುಗಿನಲ್ಲಿ ದಾಖಲೆ ಮೊತ್ತಕ್ಕೆ ಕೆಜಿಎಫ್ 2 ಚಿತ್ರದ ವಿತರಣೆ ಹಕ್ಕುಗಳು ಮಾರಾಟ ಗೊಂಡಿವೆ.