ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದ ಒಂದು ಕಾಲದ ಟಾಪ್ ನಟ. ಬೇಜಾರ್ ಆಗುತ್ತೆ ಕಣ್ರೀ !!

ಸ್ನೇಹಿತರೆ, ಮನುಷ್ಯ ಯಾವಾಗ ಯಾವ ಸ್ಥಿತಿಗೆ ಬರುತ್ತಾನೆ ಎಂದು ಯಾರಿಗೆ ತಾನೆ ಗೊತ್ತು ಹೇಳಿ.. ಆದರೆ ಸ್ವಾಭಿಮಾನಿಗಳು ಎಂತಹ ಕಷ್ಟ ಬಂದರೂ ಅದನ್ನು ಎದುರಿಸುತ್ತಾರೆ, ಕೊನೆಗೆ ಜಯಿಸುತ್ತಾರೆ. ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಖ್ಯಾತ ನಟ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೇಗೆ ಗೊತ್ತಾ? ಸಂಜಯ್ ಮಿಶ್ರ ಇವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಖ್ಯಾತ ಬಾಲಿವುಡ್ ನಟ ಈಗ ಸಹ ನಟನಾಗಿ ನಟಿಸುತ್ತಿದ್ದಾರೆ. ವರ್ಷಕ್ಕೆ ಏನಿಲ್ಲ ಅಂದರೂ ಇವರ 20 ಸಿನಿಮಾಗಳು ರಿಲೀಸಾಗುತ್ತವೆ.

ಆದರೆ ಅವರ ಜೀವನದಲ್ಲಿ ಆಗಿದ್ದೇನು ಗೊತ್ತಾ? ಅಂದು 2008ರ ವರ್ಷ ಅದಾಗಲೇ ಸಂಜಯ್ ಮಿಶ್ರ 45 ಚಿತ್ರಗಳಲ್ಲಿ ನಟಿಸಿದ್ದರು. ಸಡನ್ನಾಗಿ ಸಂಜಯ್ ಮಿಶ್ರ ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಆಗ ಮಗನ ಉಳಿಸಿಕೊಳ್ಳಲು ಸಂಜಯ್ ಮಿಶ್ರಾ ತಂದೆ ಇರುವ ಆಸ್ತಿಪಾಸ್ತಿ ಮಾರಿ ಎಲ್ಲ ಹಣವನ್ನು ಖರ್ಚು ಮಾಡಿ ಮಗನನ್ನು ಉಳಿಸಿಕೊಂಡು. ಆದರೆ ಸಂಜೆ ಮಿಶ್ರ ಅನಾರೋಗ್ಯದಿಂದ ಚೇತರಿಸಿಕೊಂಡ ಹದಿನೈದು ದಿನಕ್ಕೆ ತಂದೆ ತೀರಿಕೊಂಡರು. ಆಗ ಕೈಯಲ್ಲಿ ಒಂದು ಪೈಸ ಇಲ್ಲದ ಸ್ಥಿತಿಯಲ್ಲಿ ಸಂಜಯ್ ಮಿಶ್ರಾ ತಲುಪಿದರು.

ಇತರರ ಬಳಿ ಹೋಗಿ ಸಹಾಯ ಕೇಳುವುದಕ್ಕೆ ಅವರ ಸ್ವಾಭಿಮಾನ ಒಪ್ಪಲಿಲ್ಲ. ನೇರವಾಗಿ ರಿಷಿಕೇಶ್ ಗೆ ಹೋದ ಸಂಜಯ್ ಮಿಶ್ರ ಅಲ್ಲಿ ಒಂದು ಡಾಬಾ ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸಕ್ಕೆ ಸೇರಿಕೊಂಡರು. ದಿನಕ್ಕೆ 250 ರೂಪಾಯಿ ಕೂಲಿ 200 ತಟ್ಟೆ ಹಾಗೂ ಗ್ಲಾಸ್ ತೊಳೆಯುವ ಕೆಲಸ. ಬರುತ್ತಿದ್ದ 150 ರೂಪಾಯಿಯಲ್ಲೆ ಆರಾಮಾಗಿ ಬದುಕುತ್ತಿದ್ದರು ಸಂಜೆ ಮಿಶ್ರ. ಆದರೆ ಆ ಹೋಟೆಲ್ ನಲ್ಲಿ ಊಟಕ್ಕೆ ಬರುತ್ತಿದ್ದವರು ಹೆಸರನ್ನು ಗುರುತಿಸಿ ಫೋಟೋಗಾಗಿ ಮುಗಿಬೀಳುತ್ತಿದ್ದರು.

ಅದು ಏಕೋ ಸಂಜಯ್ ಮಿಶ್ರ ರಿಷಿಕೇಶ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ವಿಷಯ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿಗೆ ಗೊತ್ತಾಯ್ತು. ತನ್ನ ಆಲ್ ದ ಬೆಸ್ಟ್ ಚಿತ್ರದಲ್ಲಿ ನಟಿಸುವಂತೆ ಮಿಶ್ರಾಗೆ ಒತ್ತಡ ಮಾಡಿದರು. ಒತ್ತಾಯಕ್ಕೆ ಮಣಿದು ಆ ಚಿತ್ರದಲ್ಲಿ ನಟಿಸಿದರು ಮಿಶ್ರ. ಆ ಚಿತ್ರ ಸೂಪರ್ ಹಿಟ್ ಕೂಡ ಆಯ್ತು. ನಂತರ ಸಂಜಯ್ ಮಿಷ್ರ ಹಿಂತಿರುಗಿ ನೋಡಲೇ ಇಲ್ಲ ಈಗ ವರ್ಷಕ್ಕೆ 20 ಚಿತ್ರಗಳಲ್ಲಿ ನಡೆಸುತ್ತಿದ್ದಾರೆ. ಸ್ವಾಭಿಮಾನ ಅಂದರೆ ಇದೇ ಅಲ್ಲವೇ.