ಪುನೀತ್ ರಾಜಕುಮಾರ್ ಅವರ ಮದುವೆ ಕ್ಷಣಗಳು ನೋಡಿಲ್ಲ ಅಂದ್ರೆ ಒಮ್ಮೆ ನೋಡಿ..!!

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ಪ್ರೇಮದ ಕಾಣಿಕೆ ಚಿತ್ರದ ಮೂಲಕ ಅಪ್ಪು ಬಾಲ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಬಾಲನಟನಾಗಿ ಸುಮಾರು ಹತ್ತು ಚಿತ್ರಗಳಲ್ಲಿ ಅಭಿನಯಿಸಿದ್ದ ಅಪ್ಪು, ಕನ್ನಡ ಚಲನಚಿತ್ರರಂಗದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ನಂತರ 2002ರಲ್ಲಿ ತೆರೆ ಕಂಡ ಅಪ್ಪು ಸಿನಿಮಾದ ಮೂಲಕ ನಾಯಕನಟರಾಗಿ ಹೊರಹೊಮ್ಮಿದರು. ಇನ್ನು ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಿತ್ರರಂಗದ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ.

ಹಾಗೆ ಅಪ್ಪು ಕೂಡ ಅಣ್ಣಾವ್ರ ಹಾಗೆ ತುಂಬಾ ಸಿಂಪಲ್. ಅಪ್ಪು ಕೂಡ ತಂದೆಯಂತೆ ಅಭಿಮಾನಿಗಳನ್ನು ದೇವರಂತೆ ಕಾಣುತ್ತಾರೆ ಅಲ್ಲದೆ ಗೌರವಿಸುತ್ತಾರೆ ಕೂಡ. ತಾನೊಬ್ಬ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ಎಂಬುದನ್ನು ಮರೆತು, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಾರೆ. ಅಲ್ಲದೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನು ಡಿಸೆಂಬರ್ 1, 1999 ರಲ್ಲಿ ಅಶ್ವಿನಿ ಅವರನ್ನು ಮದುವೆಯಾದರು. ಅಪ್ಪು ಅವರಿಗೆ ಇಬ್ಬರು ಪುತ್ರಿಯರಿದ್ದಾರೆ ಮೊದಲ ಪುತ್ರಿಯ ಹೆಸರು ದೃತಿ ಮತ್ತು ಎರಡನೇ ಪುತ್ರಿ ಹೆಸರು ವಂದಿತ.

ಇನ್ನು ಅಪ್ಪು ಅವರ ಮದುವೆಯ ಫೋಟೋಗಳು ಮನಸೆಳೆಯುವಂತಿದೆ. ಫೋಟೋಗಳನ್ನು ನೀವು ಈ ಲೇಖನದಲ್ಲಿ ಕಾಣಬಹುದು. ಈ ಚಿಕ್ಕ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈ ಲೇಖನಕ್ಕೆ ಒಂದು ಲೈಕ್ ನೀಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ಕೂಡ ಪವರ್ ಸ್ಟಾರ್ ಅಭಿಮಾನಿ ಆಗಿದ್ದರೆ ಅವರ ಮುಂದಿನ ಸಿನಿಮಾ ಯುವರತ್ನ ಗಾಗಿ ಕಾಯುತ್ತಿದ್ದಾರೆ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.