ನಮ್ಮ ಫೇಮಸ್ ಟಾಪ್ ವಿಲನ್ ಗಳ ಹೆಂಡತಿಯರು ಕೂಡ ಸ್ಟಾರ್ ನಟಿಯರು ಎಂದು ಗೊತ್ತಿದಿಯ ನಿಮಗೆ ಫೋಟೋ ಗ್ಯಾಲರಿ ನೋಡಿ !!

ಸ್ನೇಹಿತರೆ, ಸಿನಿಮಾದಲ್ಲಿ ಹೀರೋಗಳಿಗೆ ಸರಿಸಮಾನವಾದ ಪಾತ್ರ ಯಾವುದು ಎಂದರೆ ಅದು ವಿಲನ್ ಪಾತ್ರ. ಸಿನಿಮಾಗಳಲ್ಲಿ ವಿಲನ್ ಪಾತ್ರಗಳು ಎಷ್ಟು ಚೆನ್ನಾಗಿರುತ್ತೆ ಹೀರೋ ಕೂಡ ಅಷ್ಟರಮಟ್ಟಿಗೆ ಹೈಲೆಟ್ ಆಗ್ತಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೀರೋಗಳಿಗೆ ಸರಿಸಮಾನವಾಗಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಈ ಟಾಪ್ ವಿಲನ್ ಗಳ ಪತ್ನಿಯರು ಕೂಡ ಸ್ಟಾರ್ ನಟಿಯರು. ಇನ್ನು ಮೊದಲನೇದಾಗಿ ದಕ್ಷಿಣ ಭಾರತದಲ್ಲಿ ರಘುವರನ್ ಒಂದು ಕಾಲದಲ್ಲಿ ಫೇಮಸ್ ವಿಲನ್ ಆಗಿ ಚಿತ್ರರಂಗದಲ್ಲಿ ಮಿಂಚಿದ್ದರು.

1982 ನಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಘುವರನ್ ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಸಿ ತುಂಬಾ ಅವಾರ್ಡ್ ಗಳನ್ನು ಪಡೆದಿದ್ದಾರೆ. ರಘುವರನ್ ಅವರು ನಟಿ ರೋಹಿಣಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರು ಕೂಡ ತಮಿಳು, ತೆಲುಗು ಚಿತ್ರರಂಗದಲ್ಲಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಈಗಲೂ ಕೂಡ ಅನೇಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ ರೋಹಿಣಿ. ಇನ್ನು ಕನ್ನಡದ ನಟ ಅವಿನಾಶ್, ಇವರು ಪೋಷಕನಟ, ವಿಲನ್ ಆಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಕೂಡ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಅವಿನಾಶ್ ಅವರು ಮಾಡಿದ ವಿಲನ್ ಪಾತ್ರಗಳೆಲ್ಲವೂ ಒಳ್ಳೆಯ ಹೆಸರನ್ನು ತಂದುಕೊಟ್ಟಿವೆ. ಇನ್ನು ನಟ ಅವಿನಾಶ್ ಅವರು ಕನ್ನಡದ ನಟಿ ಮಾಳವಿಕ ಅವರನ್ನು ಮದುವೆಯಾಗಿದ್ದಾರೆ. ನಟಿ ಮಾಳವಿಕಾ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಸಂಪಾದಿಸಿದ್ದಾರೆ. ಇನ್ನು ಕೆಜಿಎಫ್ ಚಾಪ್ಟರ್ ಒಂದರಲ್ಲಿ ಕೂಡ ಮಾಳವಿಕಾ ಅವರು ಅಭಿನಯಿಸಿದ್ದು, ಇನ್ನಷ್ಟು ಹೆಸರುವಾಸಿಯಾಗಿದ್ದಾರೆ.

ಇನ್ನು ಆಶಿಶ್ ವಿದ್ಯಾರ್ಥಿ ಇವರು ಕೂಡಾ ಫೇಮಸ್ ವಿಲನ್ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆಶಿಶ್ ವಿದ್ಯಾರ್ಥಿ ಅವರ ಪತಿ ಕೂಡ ನಟಿಯಾಗಿದ್ದಾರೆ. ಇವರ ಹೆಸರು ರಾಜೋಶಿ ವಿದ್ಯಾರ್ಥಿ. ಇನ್ನು ಅತುಲ್ ಕುಲಕರ್ಣಿ ಇವರು ಕೂಡ ಕನ್ನಡ-ತಮಿಳು, ತೆಲುಗು, ಹಿಂದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ ಪತ್ನಿಯೂ ಕೂಡಾ ದೊಡ್ಡ ನಟಿಯಾಗಿದ್ದಾರೆ. ಅವರ ಹೆಸರು ಗೀತಾಂಜಲಿ ಕುಲಕರ್ಣಿ…