ದರ್ಶನ್, ಯಶ್, ಸುದೀಪ್, ಪುನೀತ್, ಶಿವಣ್ಣ ಇವರಲ್ಲಿ ನಂಬರ್ 1 ಶ್ರೀಮಂತ ಸ್ಟಾರ್ ಯಾರು ಗೊತ್ತಾ…?

ಸ್ನೇಹಿತರೆ, ನಮ್ಮ ಸ್ಯಾಂಡಲ್ವುಡ್ನಲ್ಲಿ ತಯಾರಾದ ಚಿತ್ರಗಳು ದಕ್ಷಿಣ ಭಾರತದ 5 ಭಾಷೆಗಳಲ್ಲೂ ಸಹ ರಿಲೀಸ್ ಆಗುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕರಲ್ಲಿ ದರ್ಶನ್, ಸುದೀಪ್, ಯಶ್, ಪುನೀತ್, ಧ್ರುವ ಸರ್ಜಾ ಸೇರಿದಂತೆ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ರಕ್ಷಿತ್ ಶೆಟ್ಟಿ, ಮುರುಳಿ ಸೇರಿದಂತೆ ಹಲವಾರು ಕಲಾವಿದರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹಾಗಾದ್ರೆ ಸ್ಟಾರ್ ಗಳಲ್ಲಿ ಅತ್ಯಂತ ಶ್ರೀಮಂತ ನಟ ಯಾರು ಗೊತ್ತಾ ಅಲ್ಲದೆ ಸಿನಿಮಾವನ್ನು ಹೊರತುಪಡಿಸಿ ಬೇರೆ ಯಾವ ವ್ಯವಹಾರಗಳನ್ನು ನಮ್ಮ ಸ್ಟಾರ್ಗಳು ಮಾಡುತ್ತಿದ್ದಾರೆ. ತಿಳಿಯೋಣ ಬನ್ನಿ.

ಈಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು 7 ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಉಪೇಂದ್ರರವರು ಅತಿಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇನ್ನು ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಹೊಂದಿರುವ ಉಪ್ಪಿ 140 ರಿಂದ 160 ಕೋಟಿ ವ್ಯವಹಾರವನ್ನು ಮಾಡುತ್ತಾರೆ. ಇನ್ನು ಯಾವ ಯುವ ನಟರಿಗೆ ಏನು ಕಮ್ಮಿ ಇಲ್ಲ ಎನ್ನುವಂತೆ ಹಿಟ್ ಗಳ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಮ್ಮ ಶಿವರಾಜ್ ಕುಮಾರ್ ಅವರು ಬರೋಬ್ಬರಿ ಒಂದೂವರೆ ಎಕರೆಯಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ.

ಇನ್ನು ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ಶಿವರಾಜ್ ಕುಮಾರ್ ಅವರು ಬೆಂಗಳೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ 180ರಿಂದ 220 ಕೋಟಿ ವ್ಯವಹಾರವನ್ನು ಶಿವರಾಜ್ ಕುಮಾರ್ ಅವರು ಹೊಂದಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಹುಟ್ಟಿನಿಂದಲೇ ಆಗರ್ಭ ಶ್ರೀಮಂತರಾಗಿದ್ದರೂ. ಇನ್ನು ಕೋಟಿ ಕೋಟಿ ಬೆಲೆಬಾಳುವ ಶೇರುಗಳನ್ನು ಕಿಚ್ಚ ಸುದೀಪ್ ಹೊಂದಿದ್ದು, ಕಿಚ್ಚ ಕ್ರಿಯೇಶನ್ ಮತ್ತು ಸರೋವರ ಗ್ರೂಪ್ ಗೆ ಕೂಡ ಮಾಲೀಕರಾಗಿದ್ದಾರೆ. ಇನ್ನು ಉನ್ನತ ಮೂಲಗಳ ಪ್ರಕಾರ 200ರಿಂದ 250 ಕೋಟಿ ವ್ಯವಹಾರವನ್ನು ನಮ್ಮ ಅಭಿನಯ ಚಕ್ರವರ್ತಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇನ್ನು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್. ಹೊಸ ಹೊಸ ಎಕ್ಸ್ಪರಿಮೆಂಟ್ ಚಿತ್ರಗಳನ್ನು ಮಾಡುತ್ತಿರುವ ಗಣೇಶ್ ಅವರು ಸ್ಯಾಂಡಲ್ವುಡ್ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಕೂಡ ಅನೇಕ ಪ್ರಾಪರ್ಟಿ ಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇನ್ನು ಉನ್ನತ ಮಾಹಿತಿಯ ಪ್ರಕಾರ 100ರಿಂದ 150 ಕೋಟಿ ವ್ಯವಹಾರವನ್ನು ಗಣೇಶ್ ಅವರು ಹೊಂದಿದ್ದಾರೆ. ಇನ್ನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್. ಆರ್ ನಗರದಲ್ಲಿ ಸ್ವಂತ ಮನೆಯನ್ನು ಹೊಂದಿರುವ ಇವರು, ಮೈಸೂರಿನಲ್ಲಿ ಅತಿದೊಡ್ಡ ಫಾರ್ಮ್ ಹೌಸ್ ಅನ್ನು ಹೊಂದಿದ್ದಾರೆ. ಇನ್ನು ಡಿ-ಬಾಸ್ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಟಾಪ್ ಅಲ್ಲಿ ಇದ್ದಾರೆ.

ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಅನೇಕ ವ್ಯವಹಾರವನ್ನು ಮಾಡುತ್ತಿರುವ ನಮ್ಮ ಡಿ ಬಾಸ್ ರವರು 120 ರಿಂದ 170 ಕೋಟಿ ವ್ಯವಹಾರವನ್ನು ಮಾಡುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಇನ್ನು ದೊಡ್ಡ ದೊಡ್ಡ ಮಾಲ್ ಗಳು ಮತ್ತು ಪ್ರಾಪರ್ಟಿ ಗಳ ಮೇಲೆ ಇನ್ವೆಸ್ಟ್ ಮಾಡಿರುವ ಪುನೀತ್ ರಾಜಕುಮಾರ್ ಅವರು 200ರಿಂದ 300 ಕೋಟಿ ವ್ಯವಹಾರವನ್ನು ಮಾಡುತ್ತಾರೆ ಎಂದು ಮಾಹಿತಿ ಇದೆ. ಇನ್ನು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ಯಶ್, ಕೋಟಿ ಕೋಟಿ ಬೆಲೆಬಾಳುವ ಶೇರ್ ಗಳನ್ನು ಹೊಂದಿದ್ದಾರೆ.

ಇನ್ನು ಬೆಂಗಳೂರು ಮೈಸೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಗಳನ್ನು ಹೊಂದಿದ್ದು ಉನ್ನತ, ಮೂಲಗಳ ಪ್ರಕಾರ ಸುಮಾರು 100ರಿಂದ 110 ಕೋಟಿ ವ್ಯವಹಾರವನ್ನು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಹೊಂದಿದ್ದಾರೆ ಎಂಬ ಮಾಹಿತಿ ಇದೆ.