ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರ್ಯಾರು ಗೊತ್ತಾ…?

ಸ್ನೇಹಿತರೆ, ಈ ಸಿನಿಮಾರಂಗ ಅನ್ನೋದು ಒಂದು ತರಹ ಮಾಯಾಬಜಾರ್ ಇದ್ದಂತೆ. ಈ ಕೇವಲ ಪರಿಶ್ರಮ ಮತ್ತು ಪ್ರತಿಭೆ ಇದ್ದರೆ ಮಾತ್ರ ಮೇಲೆ ಬರಲು ಸಾಧ್ಯ. ಹೀಗೆ ಯಾರ ಸಹಾಯವಿಲ್ಲದೆ ತಮ್ಮ ಸ್ವಂತ ಪ್ರತಿಭೆಯಿಂದ ಮೇಲೆ ಬಂದು, ಇಂದು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಗಿಂತ ನಮ್ಮ ದಕ್ಷಿಣ ಕನ್ನಡ ಸಿನಿಮಾಗಳನ್ನು ಹೆಚ್ಚು ಹೆಚ್ಚು ಹಿಟ್ ಮತ್ತು ಪ್ರಖ್ಯಾತಿ ಪಡೆಯುತ್ತಿದೆ. ಈ ಮೂಲಕ ನಮ್ಮ ದಕ್ಷಿಣ ಭಾರತದ ನಟರು ಕೂಡ ತಮ್ಮ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 7 ನಟರ ಪಟ್ಟಿ ಇಲ್ಲಿದೆ ನೋಡಿ….

ಮೊದಲೇ ಸ್ಥಾನದಲ್ಲಿರುವುದು ಬೇರೆ ಯಾರು ಅಲ್ಲ ರಜಿನಿಕಾಂತ್. ದಕ್ಷಿಣ ಭಾರತದ ಸೂಪರ್ ಸ್ಟಾರ್ ಎಂದೆ ಖ್ಯಾತರಾಗಿರುವ ರಜನಿಕಾಂತ್ ಅವರು ಸುಮಾರು 90 ರಿಂದ 100 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ಇನ್ನು ಎರಡನೇ ಸ್ಥಾನದಲ್ಲಿ ಇರುವವರು ಮೋಹನ್ಲಾಲ್. ಮೋಹನ್ ಲಾಲ್ ಅವರ ಐದು ಸಿನಿಮಾಗಳು 2019ರಲ್ಲಿ ರಿಲೀಸ್ ಆಗಿತ್ತು, ಆದರೆ ಈ ಐದು ಚಿತ್ರಗಳಲ್ಲಿ ಲೂಸಿಫರ್ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಮೋಹನ್ ಲಾಲ್ ಅವರು ಒಂದು ಚಿತ್ರಕ್ಕೆ ಸುಮಾರು 64.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಇನ್ನು ಮೂರನೇ ಸ್ಥಾನದಲ್ಲಿ ನಟ ಅಜಿತ್ ಕುಮಾರ್. ಇವರು ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸುತ್ತಾರೆ. ಇವರು ಒಂದು ಚಿತ್ರಕ್ಕೆ ಸುಮಾರು 40 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಬಾಹುಬಲಿ ಪ್ರಭಾಸ್. ಹಲವಾರು ಒಳ್ಳೆಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಭಾಸ್ ಅವರು, ಉತ್ತಮ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದಾರೆ. ಇವರು ತಮ್ಮ ಸಾಹೋ ಚಿತ್ರಕ್ಕೆ 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ಇನ್ನು ಐದನೆಯ ಸ್ಥಾನದಲ್ಲಿ ತೆಲುಗಿನ ನಟ ಮಹೇಶ್ ಬಾಬು. ಇವರ ಸರಿಲೇರು ನೀಕೆವ್ವರು ಚಿತ್ರ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿತು. ಇವರು ಒಂದು ಚಿತ್ರಕ್ಕೆ 35ರಿಂದ 40 ಕೋಟಿ ಸಂಭಾವನೆ ಪಡೆಯುತ್ತಾರೆ. ಇನ್ನು ಆರನೆಯದಾಗಿ ನಟ ಜೋಸೆಫ್ ವಿಜಯ್. ಮೂಲಗಳ ಪ್ರಕಾರ ತಮಿಳ್ ವಿಜಯ್ ಅವರು ಸುಮಾರು 35 ಕೋಟಿ ರೂಪಾಯಿ ಒಂದು ಚಿತ್ರಕ್ಕೆ ಪಡೆಯುತ್ತಾರಂತೆ. ಇನ್ನು ಏಳನೇ ಸ್ಥಾನದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್. ಇವರು 30 ರಿಂದ 35 ಕೋಟಿ ಒಂದು ಚಿತ್ರಕ್ಕೆ ಸಂಭಾವನೆ ಪಡುತ್ತಾರಂತೆ.