ಅಂದು ಅಪ್ಪಾಜಿ ಅವರನ್ನು ಕಾಡಿನಿಂದ ಬಿಡುಗಡೆಮಾಡಲು ವೀರಪ್ಪನ್ ಬೇಡಿಕೆ ಇಟ್ಟಿದ್ದು ಎಷ್ಟು ಕೋಟಿ ಗೊತ್ತಾ..?

ಸ್ನೇಹಿತರೆ, ಕಾಡುಗಳ್ಳ ವೀರಪ್ಪನ್, ಈ ಹೆಸರನ್ನು ಕೇಳಿದರೆ ಕನ್ನಡಿಗರಲ್ಲಿ ಆಕ್ರೋಶ ಮೂಡುತ್ತದೆ. ಕಾರಣ ಈ ಕಾಡುಗಳ್ಳ, ಕರ್ನಾಟಕದ ಹೆಮ್ಮೆ ಸಿನಿರಂಗದ ದೇವರು ಅಣ್ಣಾವ್ರನ್ನು ಅಪಹರಿಸಿದನು. 21 ವರ್ಷಗಳ ಹಿಂದೆ, ಜುಲೈ 30ರಂದು ರಾತ್ರಿ ಕಾಡುಗಳ್ಳ ವೀರಪ್ಪನ್ ಕನ್ನಡಿಗರ ಆರಾಧ್ಯದೈವ ಡಾ.ರಾಜಕುಮಾರ್ ಅವರನ್ನು ಅಪಹರಿಸಿಕೊಂಡು ತನ್ನ ಜೊತೆ ಕಾಡಿಗೆ ಕರೆದುಕೊಂಡು ಹೋಗಿದ್ದ. ಮರುದಿನ ಬೆಳಗ್ಗೆ ಈ ಸುದ್ದಿ ರಾಜ್ಯದ ಜನತೆಗೆ ಬರಸಿಡಿಲಿನಂತೆ ಬಡಿದಿತ್ತು. ಕರೆದುಕೊಂಡು ಹೋದ ನಂತರ ಸುಮಾರು 108 ದಿನಗಳ ನಂತರ ಅಣ್ಣಾವ್ರು ಕಾಡುಗಳ್ಳನ ಸೆರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದರು.ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಲು ಎಷ್ಟು ಹಣ ಕೇಳಿದ್ದ ಗೊತ್ತಾ ತಿಳಿಯಲು ಮುಂದೆ ಓದಿ‌‌..‌

ಗಾಜನೂರಿನ ತೋಟದ ಮನೆಯಿಂದ ಡಾ‌.ರಾಜಕುಮಾರ್ ಮತ್ತು ಇನ್ನೂ ಮೂವರನ್ನು ಅಂದು ರಾತ್ರಿ ಅಪಹರಿಸಿದ್ದ ವಿರಪ್ಪನ್. ಇದರಿಂದ ಗಾಬರಿಯಾದ ಪಾರ್ವತಮ್ಮ ಹಾಗೂ ಸಂಬಂಧಿಗಳು ತಕ್ಷಣವೇ ಅಲ್ಲಿಂದ ಚಾಮರಾಜನಗರಕ್ಕೆ ಬಂದು ಎಸ್ಟಿಡಿ ಬೂತ್ ಮೂಲಕ ಮಕ್ಕಳು ಹಾಗೂ ಚಿತ್ರರಂಗದ ಇತರರಿಗೆ ಅಪಹರಣದ ಮಾಹಿತಿ ನೀಡಿದರು. ಅಂದು ರಾತ್ರಿ 1.30ರ ಸಮಯಕ್ಕೆ ಪಾರ್ವತಮ್ಮ ಅವರು ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದರು. ಮರುದಿನ ಬೆಳಗ್ಗೆಯೇ ಎಸ್ಎಂ ಕೃಷ್ಣ ಅವರು ತಮಿಳುನಾಡಿಗೆ ಹೋಗಿ ಅಲ್ಲಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಜೊತೆ ಸಭೆ ನಡೆಸಿದರು.

ಅಣ್ಣಾವ್ರನ್ನು ತನ್ನ ಸೆರೆಯಿಂದ ಬಿಡುಗಡೆ ಮಾಡಲು ವೀರಪ್ಪನ್ ಸರಕಾರದ ಮುಂದೆ ಬಹಳ ಬೇಡಿಕೆಗಳನ್ನು ಇಟ್ಟಿದ್ದನು.. ವೀರಪ್ಪನ್ ಇಟ್ಟ ಬೇಡಿಕೆಗಳ ಬಗ್ಗೆ ತಮಿಳಿನ ಜರ್ನಲಿಸ್ಟ್ ಒಬ್ಬರು ತಾವು ವೀರಪ್ಪನ್ ಬಗ್ಗೆ ಬರೆದಿರುವ ದಿ ಲೈಫ್ ಅಂಡ್ ಫಾಲ್ ಆಫ್ ವೀರಪ್ಪನ್ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 21 ವರ್ಷಗಳ ಹಿಂದೆ ವೀರಪ್ಪನ್ ಇಟ್ಟಿದ್ದ ಬೇಡಿಕೆ ವಿಷಯ ಈಗ ಬಹಳ ವೈರಲ್ ಆಗಿದೆ. ಅಷ್ಟಕ್ಕೂ ವೀರಪ್ಪ ನಮ್ಮ ಅಣ್ಣಾವ್ರನ್ನು ಬಿಡಲು ಕರ್ನಾಟಕ ಸರ್ಕಾರಕ್ಕೆ ಕೇಳಿದ ಹಣ ಎಷ್ಟು ಗೊತ್ತಾ? ಗೊತ್ತಾದ್ರೆ ನಿಜಕ್ಕೂ ಬೆರಗಾಗುತ್ತೀರಾ.

ಹೌದು ಅಣ್ಣಾವ್ರನ್ನು ಬಿಡುಗಡೆ ಮಾಡಲು ಸರ್ಕಾರದ ಬಳಿ ವೀರಪ್ಪನ್ ಕೇಳಿದ್ದು ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿಗಳು. ಇದರಲ್ಲಿ 100 ಕೋಟಿ ಲಿಕ್ವಿಡ್ ಕ್ಯಾಶ್ ಇರಬೇಕು ಎಂದು ಆತ ಬೇಡಿಕೆ ಇಟ್ಟಿದ್ದ. ಆ ಸಮಯದಲ್ಲಿ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ನಕ್ಕೀರನ್ ಅವರು ವೀರಪ್ಪನ್ ಜೊತೆ ಆರು ಬಾರಿ ಮಾತುಕತೆ ನಡೆಸಿ, 15 ಕೋಟಿ ರೂಪಾಯಿಗಳನ್ನು 3 ಕಂತಿನಲ್ಲಿ ಕೊಡುವುದಾಗಿ ಮತ್ತು ಹಣ ಚಿನ್ನದ ಜೊತೆಗೆ ವೀರಪ್ಪನ್ ಇಟ್ಟಿದ್ದ ಇನ್ನಿತರ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡರು ಎಂದು ಸುಬ್ರಮಣಿಯನ್ ಎನ್ನುವ ಜರ್ನಲಿಸ್ಟ್ ಬರೆದಿರುವ ಪುಸ್ತಕದಲ್ಲಿ ತಿಳಿಸಿದ್ದಾರೆ.