ಸುಮ್ಮನೆ ಇದ್ದ ಯುವ ಆಟಗಾರ ಜೈಸ್ವಾಲ್ ನನ್ನು ಕೆಣಕಿದ ಶ್ರೀಶಾಂತ್ ! ಉತ್ತರ ಕಂಡು ಶಾಕ್ ಆದ ಶ್ರೀಶಾಂತ್.

ನಮಸ್ಕಾರ ಸ್ನೇಹಿತರೇ ಕೆಲವು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಿದ ನಂತರ ಐಪಿಎಲ್ ನಲ್ಲಿ ಮ್ಯಾಚ್ ಫಿ’ಕ್ಸಿಂಗ್ ಮಾಡಿಕೊಂಡು ಏಳು ವರ್ಷಗಳ ನಿಷೇಧದ ನಂತರ ಇದೀಗ ಶ್ರೀಶಾಂತ್ ರವರು ಸಕ್ರಿಯ ಕ್ರಿಕೆಟ್ಗೆ ಮರಳಿದ್ದಾರೆ. ಏಳು ವರ್ಷಗಳ ನಂತರ ಬೌಲಿಂಗ್ ಮಾಡಿದ ಮೊದಲನೇ ಪಂದ್ಯದಲ್ಲಿಯೇ ವಿಕೆಟ್ ಪಡೆದುಕೊಂಡು ಕ್ರೀಡಾಂಗಣಕ್ಕೆ ನಮಸ್ಕರಿಸಿ ಉತ್ತಮ ವರ್ತನೆ ತೋರಿದ ಶ್ರೀಶಾಂತ್ ರವರು ಎರಡನೇ ಪಂದ್ಯದಲ್ಲಿ ತಮ್ಮ ಅಗ್ರೆಸ್ಸಿವ್ ಆಟವನ್ನು ಮುಂದುವರೆಸಿದರು.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು ರಲ್ಲಿ ಶ್ರೀಶಾಂತ್ ರವರು ಮೊದಲಿನಿಂದಲೂ ಪ್ರಸಿದ್ಧರು. ಅದರಲ್ಲಿಯೂ ಭಾರತ ತಂಡದ ಪರವಾಗಿ ಪಾಲ್ಗೊಂಡಿದ್ದ ಶ್ರೀಶಾಂತ್ ರವರು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ದೇಶದ ಆಟಗಾರರನ್ನು ಹಲವಾರು ಬಾರಿ ಕೆಣಕಿ ತಮ್ಮ ಅಗ್ರೆಸಿವ್ ಆಟವನ್ನು ವಿಶ್ವಕ್ಕೆ ತೋರಿಸಿದ್ದಾರೆ. ತಾವೊಬ್ಬ ಅಗ್ರೆಸಿವ್ ಆಟಗಾರ ಎಂಬುದನ್ನು ಒಪ್ಪಿಕೊಳ್ಳುವ ಶ್ರೀಶಾಂತ್ ರವರು ಈ ಬಾರಿ ಅದೇ ಅಗ್ರೆಸಿವ್ ಆಟವನ್ನು ಭಾರತ ಕ್ರಿಕೆಟ್ ತಂಡದ ಭವಿಷ್ಯದ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಬಹುದು ಎಂಬ ಭರವಸೆ ಮೂಡಿಸಿರುವ ವಿಶ್ವಕಪ್ ಫೈನಲ್ ನ ಹೀರೋ ಯಶಸ್ವಿ ಜೈಸ್ವಾಲ್ ರವರ ಮುಂದೆ ತೋರಿಸಿದ್ದಾರೆ. ಆದರೆ ಊಹಿಸಿದಂತೆ ಯುವ ಆಟಗಾರ ಶ್ರೀಶಾಂತ್ ರವರಿಗೆ ಉತ್ತರ ನೀಡಿದ್ದಾನೆ.

ಹೌದು ಸ್ನೇಹಿತರೇ ಇದೀಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಯಲ್ಲಿ ಮುಂಬೈ ಹಾಗೂ ಕೇರಳ ತಂಡಗಳು ಎದುರಾಳಿಯಾಗಿದ್ದವು. ಮುಂಬೈ ಬ್ಯಾಟ್ಮ್ಯಾನ್ ಗಳಾದ ಯಶಸ್ವಿ ಜೈಸ್ವಾಲ್, ಸೂರ್ಯ ಕುಮಾರ್ ಯಾದವ್ ಹಾಗೂ ಆದಿತ್ಯ ತಾರೇ ರವರು ಅನುಭವಿ ಆಟಗಾರ ಶ್ರೀಶಾಂತ್ ರವರ ಬೌಲಿಂಗ್ ಎದುರಿಸಬೇಕಾಗಿತ್ತು. ಅಂದುಕೊಂಡಂತೆ ಶ್ರೀಶಾಂತ್ ರವರು ಎರಡು ರೀತಿಯಲ್ಲಿ ಬಾಲ್ ಗಳನ್ನು ತಿರುಗಿಸುವ ರಲ್ಲಿ ಯಶಸ್ವಿಯಾದರು. ನೆನ್ನೆ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ ಪವರ್ ಪ್ಲೇನಲ್ಲಿ ಅತ್ಯುತ್ತಮವಾಗಿ ಮೊದಲ ಎರಡು ಓವರ್ ಗಳನ್ನು ಬೌಲಿಂಗ್ ಮಾಡಿದ ಶ್ರೀಶಾಂತ್ ರವರು ಕೇವಲ 12 ರನ್ ಗಳನ್ನು ಮಾತ್ರ ನೀಡಿದ್ದರು.

ಇದೇ ಸಂದರ್ಭದಲ್ಲಿ ಕೇರಳದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ರವರು ಪವರ್ ಪ್ಲೇ ನಲ್ಲಿ ನಮಗೆ ವಿಕೆಟ್ ಬೇಕು ಎಂಬುದನ್ನು ಅರಿತುಕೊಂಡು ಶ್ರೀಶಾಂತ್ ರವರಿಗೆ ಬಾಲ್ ನೀಡಿ ವಿಕೆಟ್ ಪಡೆಯುವ ಆಲೋಚನೆ ಮಾಡಿಕೊಂಡರು. ಈಗಾಗಲೇ ಎರಡು ಓವರ್ ಗಳಲ್ಲಿ ಶ್ರೀಶಾಂತ್ ರವರು ಕೇವಲ 12 ರನ್ಗಳನ್ನು ನೀಡಿರುವ ಕಾರಣ ಮತ್ತೊಂದು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಿದರೆ ವಿಕೆಟ್ ಪಡೆಯಬಹುದು ಎಂಬುದು ಸಂಜು ಸಾಮ್ಸಂಗ್ ಅವರ ಲೆಕ್ಕಾಚಾರವಾಗಿತ್ತು.

ಅಂದುಕೊಂಡಂತೆ ಶ್ರೀಶಾಂತ್ ರವರು ಬೌಲಿಂಗ್ ಮಾಡಿದಾಗ ಮೊದಲನೇ ಬಾಲ್ ಅತ್ಯುತ್ತಮವಾಗಿ ಮೂಡಿ ಬಂದಿತ್ತು. ಯಶಸ್ವಿ ಜೈಸ್ವಾಲ್ ರವರು ಮುನ್ನುಗ್ಗಿ ಬೌಂಡರಿ ಗೆರೆ ದಾಟಿ ಸಲು ಪ್ರಯತ್ನಿಸಿದಾಗ ಬಾಲ್ ಟಚ್ ಮಾಡುವುದರಲ್ಲಿ ಕೂಡ ವಿಫಲರಾದರು. ಇಲ್ಲಿಯವರೆಗೂ ಎಲ್ಲವೂ ಸಾಮಾನ್ಯದಂತೆ ಇತ್ತು, ಆದರೆ ಶ್ರೀಶಾಂತ್ ರವರು ಯಶಸ್ವಿ ಜೈಸ್ವಲ್ ರವರನ್ನು ಗುರಾಯಿಸಲು ಆರಂಭಿಸಿದರು. ಎಂದಿನಂತೆ ಎದುರಾಳಿ ತಂಡದ ಜೊತೆ ಅಗ್ರೆಸಿವ್ ಆಟ ಆರಂಭಿಸಿದರು. ಆದರೆ ಹೀಗೆ ಅಗ್ರೆಸಿವ್ ಆಗುವ ಮುನ್ನ ಅಲ್ಲೊಬ್ಬ ಯುವ ಆಟಗಾರ ಬ್ಯಾಟಿಂಗ್ ಮಾಡುತ್ತಿದ್ದಾನೆ ಎಂಬುದನ್ನು ಶ್ರೀಶಾಂತ್ ರವರು ನೆನಪಿನಲ್ಲಿ ಇಡಬೇಕಾಗಿತ್ತು ಆದರೆ ಅದನ್ನು ಅವರು ಮಾಡಲಿಲ್ಲ.

ಎಲ್ಲರೂ ಹೀಗೆ ಆಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಯಶಸ್ವಿ ಜೈಸ್ವಾಲ್ ರವರು ಶ್ರೀಶಾಂತ್ ರವರಿಗೆ ಮುಂದಿನ ಮೂರು ಬಾಲ್ಗಳಲ್ಲಿ ಸರಿಯಾದ ಉತ್ತರ ನೀಡಿದರು. ಹೌದು ಸ್ನೇಹಿತರೇ ಇದಾದ ಬಳಿಕ ಮುಂದಿನ ಬಾಲನ್ನು ಯಶಸ್ವಿ ಜೈಸ್ವಾಲ್ ರವರು ಬಹಳ ಸುಲಭವಾಗಿ ಸಿಕ್ಸರ್ ಗೆರೆ ದಾಟಿಸಿದ್ದರು, ತದ ನಂತರದ ಬಾಲನ್ನು ಕೂಡ ಸಿಕ್ಸರ್ ಗೆರೆ ದಾಟಿಸಿ ಸತತ ಎರಡು ಸಿಕ್ಸರ್ ಗಳನ್ನು ಗಳಿಸಿದ್ದರು, ಇನ್ನು ಓವರ್ ನ ನಾಲ್ಕನೇ ಎಸೆತ ಅಂದರೆ ಆ ಘಟನೆ ನಡೆದಮೇಲೆ ಮೂರನೇ ಎಸೆತವನ್ನು ಶ್ರೀಶಾಂತ್ ಯಾರ್ಕರ್ ಹಾಕಲು ಮುಂದಾದಾಗ ಚಾಕಚಕ್ಯತೆ ಮೆರೆದ ಯಶಸ್ವಿ ಜೈಸ್ವಾಲ್ ರವರು ಬೌಂಡರಿ ಗಳಿಸುವುದರಲ್ಲಿ ಯಶಸ್ವಿಯಾದರು.

ಈ ಉತ್ತರವನ್ನು ನೋಡಿದ ನೆಟ್ಟಿಗರು ಯಶಸ್ವಿ ಜೈಸ್ವಾಲ್ ರವರಿಂದ ಶ್ರೀಶಾಂತ ಅವರಿಗೆ ತಕ್ಕ ಉತ್ತರ ಸಿಕ್ಕಿದೆ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಗ್ರೆಸಿವ್ ಆಗಿರುವುದನ್ನು ಯಾರು ಪ್ರಶ್ನೆ ಮಾಡುವುದಿಲ್ಲ ಆದರೆ ಯುವ ಆಟಗಾರರ ಜೊತೆ ಅನುಭವಿ ಆಟಗಾರ ಆಡುವಾಗ ಸಾಧ್ಯವಾದಷ್ಟು ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಶ್ರೀಶಾಂತ ಅಗ್ರೆಸಿವ್ ಆದರೂ ಆದರೂ ಕೂಡ ಆಟಗಾರ ಯಶಸ್ವಿ ಜೈಸ್ವಾಲ್ ರವರು ತಕ್ಕ ಉತ್ತರವನ್ನು ನೀಡುವ ಮೂಲಕ ಶ್ರೀಶಾಂತ್ ರವರಿಗೆ ಪಾಠ ಕಲಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ರವರು ನೀಡಿದ ಉತ್ತರದ ವಿಡಿಯೋ ಈ ಕೆಳಗಿನ ಟ್ವೀಟ್ ನಲ್ಲಿ ಕೆಳಗಡೆ ಇದೆ ನೀವೇ ನೋಡಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444