RCB 2021 ರೆಡಿಯಾಯ್ತು ಆರ್ಸಿಬಿ ರಿಲೀಸ್ ಮಾಡಲಿರೂ ಆಟಗಾರರ ಲಿಸ್ಟ್.! ತಂಡದಿಂದ ಹೊರ ಹೋಗುವುದು ಯಾರು ಗೊತ್ತಾ..?

ಸ್ನೇಹಿತರೆ ಆರ್ಸಿಬಿ ರಿಲೀಸ್ ಮಾಡಲಿರುವ ಮೊದಲನೇ ಆಟಗಾರ ಎಂದರೆ ಅದು ಸೌತ್ ಆಫ್ರಿಕದ ಹಿರಿಯ ವೇಗಿ, ಡೇಲ್ ಸ್ಟೈನ್. ಕಳೆದ ಸೀಸನ್ನಲ್ಲಿ ಇವರನ್ನು 2 ಕೋಟಿ ಮೊತ್ತಕ್ಕೆ ಖರೀದಿಸಲಾಗಿತ್ತು. ಆದರೆ ಇವರನ್ನು ಆಡಿಸಿದ್ದು ಕೇವಲ ಮೂರು ಮ್ಯಾಚ್ ಮಾತ್ರ. ಈ ಮೂರು ಪಂದ್ಯಗಳಲ್ಲಿ ಡೇಲ್ ಸ್ಟೈನ್ ಗಳಿಸಿತ್ತು ಒಂದೇ ಒಂದು ವಿಕೆಟ್, ಅದು ಕೂಡ ಇವರ ಬೌಲಿಂಗ್ ಎಕಾನಮಿ ರೇಟ್ 11.40. ಹೀಗಾಗಿ ಈ ದುಬಾರಿ ಬೌಲರನ್ನು ಆರ್ಸಿಬಿ ತಂಡ ರಿಲೀಸ್ ಮಾಡಿದರೆ ತಂಡಕ್ಕೆ 2 ಕೋಟಿ ರೂಪಾಯಿಗಳು ಉಳಿತಾಯವಾಗಲಿದೆ.

ಹೀಗಾಗಿ ಬೆಸ್ಟ್ ಎಕನಾಮಿ ಉಳ್ಳ ಬೇರೆ ಬೌಲರನ್ನು ಆರ್ಸಿಬಿ ತಂಡ ಹುಡುಕಬಹುದು. ಇನ್ನು ಆರ್ಸಿಬಿ ರಿಲೀಸ್ ಮಾಡಲಿರುವ ಮತ್ತೊಬ್ಬ ಆಟಗಾರ ಬೇರೆ ಯಾರು ಅಲ್ಲ, ಅದು ಉಮೇಶ್ ಯಾದವ್. ಹೌದು ಕಳೆದ ಸೀಸನ್ನು ಇವರ ಪರ್ಫಾರ್ಮೆನ್ಸ್ ನೋಡಿದರೆ ಉಮೇಶ್ ಯಾದವ್ ತುಂಬಾನೇ ದುಬಾರಿ ಅಂತ ಹೇಳಬಹುದು. ಅವರಿಗೆ ಆರ್ಸಿಬಿ ನೀಡಿರೋ ಹಣ ವರ್ಷಕ್ಕೆ 4.2 ಕೋಟಿ. ಹೀಗಾಗಿ ಕಳೆದ ಸೀಸನ್ ಬಗ್ಗೆ ನೋಡೋದಾದ್ರೆ, ಇವರು ಆಡಿರೋದು ಕೇವಲ ಎರಡು ಪಂದ್ಯಗಳು ಮಾತ್ರ, ಅಲ್ಲದೆ ಯಾವುದೇ ವಿಕೆಟ್ ಅನ್ನು ಸಹ ಪಡೆದಿಲ್ಲ, ಇವರ ಎಕನಾಮಿ 11.84 ರಷ್ಟಿದೆ.

ಹೀಗಾಗಿ ಉಮೇಶ್ ಯಾದವ್ ಅವರನ್ನು ಕೈಬಿಟ್ಟರೆ ತಂಡಕ್ಕೆ 4.2 ಕೋಟಿ ಉಳಿತಾಯವಾಗುತ್ತದೆ. ಹೀಗಾಗಿ ಖಂಡಿತ ಆರ್ಸಿಬಿ ತಂಡ ಉಮೇಶ್ ಅವರನ್ನು ತಂಡದಿಂದ ಕೈಬಿಡಲಾಗುತ್ತೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನು ಮೂರನೇ ಆಟಗಾರ ಆಸ್ಟ್ರೇಲಿಯಾದ ಸೀಮಿತ ಓವರ್ಗಳ ನಾಯಕ ಆರೋನ್ ಫಿಂಚ್. ಈ ಆಟಗಾರನಿಗೆ ಆರ್ಸಿಬಿ ತಂಡ 4.4 ಕೋಟಿ ಹಣವನ್ನು ನೀಡಿ ಕರೆದಿದ್ದು, 12 ಮ್ಯಾಚ್ ಗಳನ್ನು ಆಡಿ ಕಲೆಹಾಕಿದ್ದು 262 ರನ್ ಗಳನ್ನು ಮಾತ್ರ. ಹೀಗಾಗಿ ಆರೋನ್ ಅವರನ್ನು ಕೈಬಿಡುವುದರಿಂದ ತಂಡಕ್ಕೆ 4.4 ಕೋಟಿ ಹಣ ಉಳಿತಾಯವಾಗಲಿದೆ.

ಇನ್ನು ತಂಡ ರಿಲೀಸ್ ಮಾಡಲಿರುವ ನಾಲ್ಕನೇ ಆಟಗಾರ ಸೌತ್ ಆಫ್ರಿಕಾದ ಕ್ರಿಸ್ ಮೋರಿಸ್‌. ಹೌದು ಕಳೆದ ಸೀಸನಲ್ಲಿ ಈ ಆಟಗಾರನನ್ನು ಬರೋಬರಿ 10ಕೋಟಿಗೆ ಖರೀದಿಸಲಾಗಿತ್ತು. ಇವರು ಕಳೆದ ಸೀಸನ್ನಲ್ಲಿ 9 ಪಂದ್ಯಗಳನ್ನು ಆಡಿ 11 ವಿಕೆಟ್ಗಳನ್ನು ಕಬಳಿಸಿದರು. ಇವರ ಪರ್ಫಾರ್ಮೆನ್ಸ್ ಉತ್ತಮವಾಗಿದೆ, ಆದರೆ ಇವರಿಗೆ ನೀಡಿರುವ ಹಣ ತುಂಬಾನೇ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕ್ರಿಸ್ ಮೋರಿಸ್ ಅವರನ್ನು ರಿಲೀಸ್ ಮಾಡುವುದರಿಂದ ತಂಡಕ್ಕೆ 10 ಕೋಟಿ ರೂಪಾಯಿಗಳು ಉಳಿತಾಯವಾಗಲಿದೆ.

ಇನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಲಿರುವ 5ನೇ ಆಟಗಾರ ಆತ ಬೇರೆ ಯಾರು ಅಲ್ಲ, ಗುರುಕೀರತ್ ಸಿಂಗ್. ಕಳೆದ ಸೀಸನಲ್ಲಿ ಈ ಆಟಗಾರ 8 ಪಂದ್ಯಗಳನ್ನು ಆಡಿ, ಕೇವಲ 71 ರನ್ ಕಲೆಹಾಕಿದರು. ಹಾಗೆಯೇ ಇವರ ಸ್ಟ್ರೈಕ್ ರೇಟು 88. ಅಂದರೆ ನೂರು ಬಾಲ್ ಗಳನ್ನು ಆಡಿದರೆ, ಕೇವಲ 88 ರನ್ಗಳನ್ನು ಬಾರಿಸುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಇವರಿಂದ ಆರ್ಸಿಬಿ ತಂಡಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಕಳೆದ ಸೀಸನ್ನಲ್ಲಿ ಈ ಆಟಗಾರನನ್ನು 50 ಲಕ್ಷಕ್ಕೆ ಆರ್ಸಿಬಿ ತಂಡ ಖರೀದಿಸಲಾಗಿತ್ತು.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444