RCB 2021 || 1 ಪಂದ್ಯ, 2 ಡಕೌಟ್, 3 ಹ್ಯಾಟ್ರಿಕ್, 4 ಓವರ್, 5 ವಿಕೆಟ್, ಆರ್ಸಿಬಿಗೆ ಈತ ಬೇಕೇ ಬೇಕು..!

ಸ್ನೇಹಿತರೆ ಐಪಿಎಲ್ 14ನೇ ಸೀಸನ್ ಲೆಕ್ಕಾಚಾರವನ್ನು ಅದಾಗಲೇ ಎಲ್ಲಾ ತಂಡಗಳು ಮಾಡುತ್ತ ಇವೆ. ಇದರ ಜೊತೆ ಆರ್ಸಿಬಿ ಕೂಡ ಹೊಸ ಆಟಗಾರರ ಖರೀದಿಗೆ ರಣತಂತ್ರವನ್ನು ರಚಿಸುತ್ತಿದೆ ಅಂತಾನೆ ಹೇಳಬಹುದು. ಈಗಾಗಲೇ ಮಿನಿ ಆಕ್ಷನ್ ಅಂತ ಐಪಿಎಲ್ ಕಮಿನಿಟಿ ಘೋಷಿಸಿರುವುದರಿಂದ, ತಂಡದಲ್ಲಿ ಕೆಲ ಆಟಗಾರರ ಬದಲಾವಣೆ ಆಗೋದು ಸಹಜ, ಅಳೆದು ತೂಗಿ ಲೆಕ್ಕಾಚಾರ ಮಾಡಿ ಆಟಗಾರರನ್ನು ಖರೀದಿಸುವ ಜವಾಬ್ದಾರಿ ಆರ್ಸಿಬಿ ತಂಡದ ಮೇಲಿದೆ. ಈ ಮಧ್ಯೆ ವಿದೇಶಿ ಆಟಗಾರರ ಖರೀದಿಗಾಗಿ ಎಲ್ಲರ ಕಣ್ಣು ಬಿದ್ದಿದೆ.

ಅದರಲ್ಲೂ ಆರ್ಸಿಬಿ ತಂಡ ಕೂಡ ಓರ್ವ ಅದ್ಭುತ ವಿದೇಶಿ ಸ್ಪಿನ್ನರ್ ಮೇಲೆ ಕಣ್ಣಿಟ್ಟಿದೆ ಅಂತನೇ ಹೇಳಬಹುದು. ಹಾಗಾದ್ರೆ ಆ ಸ್ಪಿನ್ನರ್ ಯಾರು ? ಆತನಿಂದ ತಂಡಕ್ಕೆ ಯಾವೆಲ್ಲ ಅನುಕೂಲಗಳಿವೆ. ಈ ಎಲ್ಲ ಮಾಹಿತಿಯನ್ನು ತಿಳಿಯೋಣ ಬನ್ನಿ. ಕೇವಲ 19 ವರ್ಷದ ಆಟಗಾರ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾನೆ. 2017 ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ, ಈ ಆಟಗಾರ ಅದಾಗಲೇ ತನ್ನ ದೇಶಕ್ಕಾಗಿ 1 ಟೆಸ್ಟ್, 41 ಏಕದಿನ ಹಾಗೆ 19 ಟಿ20 ಪಂದ್ಯಗಳನ್ನು ಆಡಿದ್ದಾನೆ.

ಅದಾಗಲೇ ಐಪಿಎಲ್ ನಲ್ಲಿ ಮಿಂಚಿರುವ ಈತನಿಗೆ ಕಳೆದ ಸೀಸನ್ನಲ್ಲಿ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಬಿಗ್ ಬ್ಲಾಸ್ಟ್ ನಲ್ಲಿ ಬ್ರಿಸ್ಬೇನ್ ಹಿಟ್ಸ್ ತಂಡದ ಪರವಾಗಿ ಮಿಂಚಿದ್ದಾನೆ. ಒಂದೇ ಒಂದು ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಕಬಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೂ ಭಾಜನಾಗಿದ್ದಾನೆ. ಹೌದು ಆತ ಬೇರೆ ಯಾರು ಅಲ್ಲ ಆಫ್ಘಾನಿಸ್ತಾನದ ಆಫ್-ಸ್ಪಿನ್ನರ್ ಮುಜಿಬುರ್ ರೆಹಮಾನ್. ಆರ್ಸಿಬಿ ತಂಡ ಸ್ಪಿನ್ನರ್ಸ್ ವಿಭಾಗದಲ್ಲಿ ಡಿಪೆಂಡ್ ಆಗಿರೋದು ಕೇವಲ ಚಹಲ್ ಮೇಲೆ ಮಾತ್ರ.

ಹೀಗಾಗಿ ವಿದೇಶಿ ಸ್ಪಿನ್ನರ್ ಕೋಟಾದಲ್ಲಿ ಮುಜಿಬುರ್ ರೆಹಮಾನ್ ಗೆ ಮಣೆ ಹಾಕಿದರೆ, ತಂಡದ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮುಜೀಬುರ್ ರೆಹಮಾನ್ ಆಡುತ್ತಿದ್ದು, ಕಳೆದ ಸೀಸನ್ನಲ್ಲಿ ಕೇವಲ ಎರಡೇ ಎರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ಸಿಕ್ಕಿತ್ತು. ಇನ್ನು ಪಂಜಾಬ್ ತಂಡದಲ್ಲಿ ಅದಾಗಲೇ ಘಟಾನುಘಟಿಗಳು ಇರೋದ್ರಿಂದ, ಇವರನ್ನು ರೀಟೈನ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಮುಜೀಬುರ್ರಹ್ಮಾನ್ ಆರ್ಸಿಬಿ ತಂಡಕ್ಕೆ ಬಂದರೆ ಏನು ತಪ್ಪಾಗುವುದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ಕಮೆಂಟ್ ಮಾಡಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444