ಆರ್ ಸಿಬಿ 2021| ಎಬಿಡಿ ಮಾಡಲಿದ್ದಾರೆ ವಿಶಿಷ್ಟ ದಾಖಲೆ..! ಆರ್ ಸಿ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಸ್ನೇಹಿತರೆ, ಎಲ್ಲ ತಂಡಗಳು ಕೂಡ ಇದೀಗ ಐಪಿಎಲ್ ಸೀಸನ್ 14ರ ಲೆಕ್ಕಚಾರದಲ್ಲಿ ತೊಡಗಿದೆ. ಅದರಲ್ಲಿ ಆರ್ ಸಿಬಿ ವಿಶೇಷ ಸಾಧನೆಯೊಂದನ್ನು ಮಾಡಲು ರೆಡಿಯಾಗಿದೆ. ಅದರಲ್ಲೂ ಆರ್ಸಿಬಿ ಜೀವಾಳವಾಗಿರುವ ಎಬಿಡಿ ವಿಲ್ಲರ್ಸ್ ವಿಶಿಷ್ಟ ಸಾಧನೆಯೊಂದನ್ನು ಮಾಡಲಿದ್ದಾರೆ. ಅದು ಕೂಡ ಐಪಿಎಲ್ ಆರಂಭಕ್ಕೂ ಮೊದಲೇ ಎಬಿಡಿ ಮಾಡಲಿರುವ ಆ ಸಾಧನೆ ಏನು ಎಂದು ತಿಳಿಯಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಈ ಸಾಧನೆಯನ್ನು ಇದುವರೆಗೂ ಐಪಿಎಲ್ನಲ್ಲಿ ಮಾಡಿರುವುದು ಕೇವಲ ಮೂರು ಆಟಗಾರರು ಮಾತ್ರ ಮತ್ತು ಆ ಮೂರು ಜನ ಆಟಗಾರರು ಸಹ ಭಾರತೀಯರು. ಆದರೆ ಒಬ್ಬ ವಿದೇಶಿ ಆಟಗಾರನಾಗಿ ಎಬಿಡಿ ವಿಲ್ಲರ್ಸ್ ಆ ವಿಶಿಷ್ಟ ಸಾಧನೆಯ ಮೈಲಿಗಲ್ಲನ್ನು ಮಾಡಲು ಹೊರಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ಮ್ಯಾಚ್ ಟಾಪ್ ಮೋಸ್ಟ್ ಪ್ಲೇಯರ್ ಗಳು ಇವರುಗಳು ತಂಡದಲ್ಲಿದ್ದರೆ. ಸಾಕು ಆ ತಂಡದ ಬ್ರಾಂಡ್ ವ್ಯಾಲ್ಯೂ ಶಿಖರದೆತ್ತರಕ್ಕೆ ಇರುತ್ತದೆ.

ಅದರಿಂದ ಇವರು ಪಡೆಯುವ ಸಂಭಾವನೆ ಕೂಡ ಅಷ್ಟೇ ಈ ಮೂರು ಆಟಗಾರರು ಐಪಿಎಲ್ ನಲ್ಲಿ ಪಡೆದಿರುವ ಸಂಭಾವನೆ ನೂರು ಕೋಟಿಯ ಗಡಿಯನ್ನು ದಾಟಿದೆ. ಮಆದರೆ ಈಗ ಆರ್ ಸಿ ಬಿಯ ಸ್ಟಾರ್ ಪ್ಲೇಯರ್ 2021ರ ಅಂದ್ರೆ ಐಪಿಎಲ್ ಹದಿನಾಲ್ಕನೇ ಸೀಸನ್ ಎಂಟ್ರಿ ಕೊಡುವ ಮೂಲಕ ಎಬಿಡಿ ವಿಲ್ಲರ್ಸ್ ಕೂಡ 100 ಕೋಟಿ ಕ್ಲಬ್ ಗೆ ಎಂಟ್ರಿ ಕೊಡಲಿದ್ದಾರೆ.ಹಾಗೂ ಐಪಿಎಲ್ ನಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ವಿದೇಶಿ ಆಟಗಾರ ಅನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ.

ಇನ್ನೂ ವಿಶೇಷ ಎಂದರೆ ವಿರಾಟ್ ಮತ್ತು ಎಬಿಡ ಇಬ್ಬರು ಸೇರಿ ಆರ್ಸಿಬಿ ಇಬ್ಬರು ಆಟಗಾರರು 100 ಕೋಟಿ ಕ್ಲಬ್ ಸೇರಿದ ದಾಖಲೆಯನ್ನು ನಿರ್ಮಿಸಲಿದ್ದಾರೆ ಕಳೆದ 13 ಸೀಸನ್ ಗಳ ಐಪಿಎಲ್ ಮುಕ್ತಾಯವಾಗಿದೆ ಎಬಿ ಡಿವಿಲಿಯರ್ಸ್ ಇಲ್ಲಿಯವರೆಗೂ ಕೂಡ 91 ಕೋಟಿ 51 ಲಕ್ಷದ 62 ಸಾವಿರ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆದಿದ್ದಾರೆ. ಇನ್ನು ಆರ್ ಸಿ ಬಿ ತಂಡ 11 ಕೋಟಿ ಹಣವನ್ನು ನೀಡಿ ಎಬಿಡಿ ರವರನ್ನು ರಿಟೈನ್ ಮಾಡಬೇಕು.

ಯಾಕೆಂದರೆ ಕಳೆದ ಸೀಸನ್ನಲ್ಲಿ ಎಬಿಡಿ ರವರಿಗೆ ನೀಡಿರುವ ಸಂಭಾವನೆ 11ಕೋಟಿ 91 ಕೋಟಿಯನ್ನು ಈಗಾಗಲೇ ಸಂಪಾದಿಸಿರುವ ಎಬಿಡಿ ಈ ಬಾರಿಯ 11ಕೋಟಿ ಒಂದಿಗೆ ಒಟ್ಟು 102 ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರೆ. ಇದರೊಂದಿಗೆ ನೂರು ಕೋಟಿ ಕ್ಲಬ್ಬನ್ನು ಸಹ ಸೇರಲಿದ್ದಾರೆ. ಈ ಮೂಲಕ ಇವರು ನೂರು ಕೋಟಿಗೂ ಹೆಚ್ಚು ಹಣವನ್ನು ಪಡೆದ ವಿದೇಶಿ ಆಟಗಾರರ ಎಂದು ಹೆಸರಾಗಲಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.