ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟು ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್..!

ಸ್ನೇಹಿತರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಭಾರತ ತಂಡ ಬ್ರಿಸ್ಬೇನ್ ನ ಗಬ್ಬಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡಿದ್ದು, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರು ವಿಕೆಟ್ ರೋಚಕ ಗೆಲುವನ್ನು ಆಚರಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಗೆದ್ದಿರುವ ಅಜಿಂಕ್ಯಾ ರಹಾನೆ ಪಡೆ ಇತಿಹಾಸ ಸೃಷ್ಟಿಸಿದ. ಟೀಮ್ ಇಂಡಿಯಾದ ಐತಿಹಾಸಿಕ ಸಾಧನೆಗೆ ಅನೇಕ ಕ್ರಿಕೆಟ್ ಪಂಡಿತರು, ಅಭಿಮಾನಿಗಳು ಶ್ಲಾಘಿಸಿದ್ದಾರೆ.

ಅಲ್ಲದೆ ತಂಡದ ಅದ್ಭುತ ಸಾಧನೆಯನ್ನು ಮೆಚ್ಚಿ ಬಂದ ಅನೇಕ ಸಂದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ ಮ್ಯಾನ್ ಅಶ್ವೆಲ್ ಪ್ರಿನ್ಸ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆಯುತ್ತಿದೆ. ಟ್ವಿಟರ್ನಲ್ಲಿ ನಾಲ್ಕೇಸಾಲು ಬರೆದಿರುವ ಪ್ರಿನ್ಸ್ ನಾಲ್ಕು ಸಾಲುಗಳಲ್ಲೇ ಭಾರತ ನೀಡಿದ ಪ್ರದರ್ಶನ, ಹೋರಾಟ, ಕಂಡ ಹಿನ್ನಡೆ, ಅನುಭವಿಸಿದ ಮುಖಭಂಗ, ಎದುರಾಳಿಗೆ ನೀಡಿದ ಪ್ರತ್ಯುತ್ತರ, ಐತಿಹಾಸಿಕ ಸಾಧನೆ, ಅನಾನುಕೂಲತೆಗಳು ಎಲ್ಲವನ್ನು ವಿವರಿಸಿದ್ದಾರೆ. ಹೀಗಾಗಿ ಅವರ ಟ್ವೀಟ್ ಹೆಚ್ಚು ವೈರಲ್ ಆಗುತ್ತಿತ್ತು ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು ಟ್ವೀಟ್ ಮಾಡಿರುವ ಅಶ್ವೆಲ್ “ಆಧುನಿಕ ಟೆಸ್ಟ್ ಕ್ರಿಕೆಟ್ನಲ್ಲಿ ಇದು ಅತಿಶ್ರೇಷ್ಠ ಸರಣಿ ಗೆಲುವು 2005 ಅಷಸ್ ಗೆಲುವು ಐತಿಹಾಸಿಕ ಅಂತ ಇಂಗ್ಲೆಂಡ್ ಹೇಳಬಹುದು ಆದರೆ ಮೊದಲ ಟೆಸ್ಟ್ನಲ್ಲಿ 36ಕ್ಕೆ ಆಸ್ಟ್ರೇಲಿಯಾ ಪ್ರೇಕ್ಷಕರಿಂದ ನಿಂದಿಸಲ್ಪಟ್ಟ ನಾಯಕ ವಿರಾಟ್ ಕೊಹ್ಲಿ ಇಲ್ಲದೆ ಗಾಯದಿಂದ ಕಾಡಿಸಲು ಪಟ್ಟು ಅಂತಿಮ ಟೆಸ್ಟ್ನಲ್ಲಿ ಮೊದಲ ಆಯ್ಕೆಯ ಬೌಲರ್ ಇಲ್ಲದೆ ಭಾರತ ತಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದಿದ್ದು ನನ್ನ ಪ್ರಕಾರ ಶ್ರೇಷ್ಠ ವಿಜಯ” ಬರೆದುಕೊಂಡಿದ್ದಾರೆ.ಈ ಬಗ್ಗೆ ನೀವೇನು ಹೇಳ್ತೀರಾ ಭಾರತ ತಂಡದ ಗೆಲುವಿಗೆ ಕಾರಣವಾದ ಅಂಶವಾದರೂ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.