ಐಪಿಎಲ್ ಹರಾಜು, 8 ತಂಡಗಳು ಬಿಡುಗಡೆಗೊಳಿಸಬಲ್ಲ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ !!

ಐಪಿಎಲ್ ನ 13ನೇ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ ಇದೀಗ 14ನೇ ಆವೃತ್ತಿಯ ಆರಂಭಕ್ಕೆ ಸಜ್ಜಾಗುತ್ತಿದೆ ಬಿಸಿಸಿಐ. ಮಾರ್ಚ್ ತಿಂಗಳ ಅಂತ್ಯಕ್ಕೆ 14ನೇ ಆವೃತ್ತಿಯ ಐಪಿಎಲ್ ಆರಂಭವಾಗುವ ಸಾಧ್ಯತೆ ಇದ್ದು ಅದಕ್ಕಾಗಿ ಮಿನಿ ಹರಾಜು ಪ್ರಕ್ರಿಯೆಯನ್ನು ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮೊದಲ ಹಂತದ ಮಾತುಕತೆ ನಡೆದಿದೆ. ಇನ್ನು ಹರಾಜಿಗೂ ಮುನ್ನ ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿನ ಆಟಗಾರರಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಕೈ ಬಿಡಬೇಕು ಎಂದು ನಿರ್ಧರಿಸಬೇಕಿದೆ.

ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕಾದ ಹಾಗೂ ಬಿಡುಗಡೆಗೊಳಿಸಬೇಕು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಅಂತನೇ ಹೇಳಬಹುದು ಸ್ನೇಹಿತರೆ. ಹಾಗಿದ್ರೆ ಯಾವೆಲ್ಲ ತಂಡ ಯಾವೆಲ್ಲಾ ಆಟಗಾರರನ್ನು ಬಿಡುಗಡೆ ಮಾಡಲಿವೆ, ಈ ಎಲ್ಲ ಮಾಹಿತಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಡೆಲ್ಲಿ ಕ್ಯಾಪಿಟಲ್ಸ್. ಅಜಿಂಕ್ಯ ರಹನೆ, ಅವೇಶ್ ಖಾನ್, ಹರ್ಷಲ್ ಪಾಟೀಲ್, ಇಶಾಂತ್ ಶರ್ಮಾ, ಕೀಮೊ ಪಾಲ್, ಸಂದೀಪ್ ಲಮಿಚ್ಚೆನೆ, ಕ್ಯಾರಿ, ಲಲಿತ್ ಯದವ್, ಮೋಹಿತ್ ಶರ್ಮ. ಇನ್ನು ಚೆನ್ನೈ ಸೂಪರ್ ಕಿಂಗ್ಸ್. ಕೆಎಂ ಆಸಿಫ್ ಇಮ್ರಾನ್ ತಾಹಿರ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಎಂ ವಿಜಯ್, ಪಿಯೂಷ್ ಚಾವ್ಲಾ, ಲುಂಗಿ ಎನ್ ಜಿಡಿ, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್.

ಇನ್ನು ಮುಂಬೈ ಇಂಡಿಯನ್ಸ್ ತಂಡ ಕೂಟ ಆದಿತ್ಯ ತಾರಾ, ಧವಲ್ ಕುಲಕರ್ಣಿ, ಜಯಂತ್ ಯಾದವ್, ಮಿಚಲ್ ಮೆಕ್ಲೆನಾಗನ್, ಕ್ರಿಸ್ ಲಿನ್, ಮೋಹಿನ್ ಖಾನ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈ ಸೇರಿದಂತೆ ಹಲವರನ್ನು ಕೈಬಿಡುವ ಸಾಧ್ಯತೆ ಇದೆ. ಹಾಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಾಯಾಂಕ್ ಮಾರ್ಕಂಡೆ, ಅಂಕಿತ್ ರಜಪೂತ್, ಮನನ್ ವೂಹ್ರಾ, ಶಶಾಂಕ್ ಸಿಂಗ್, ವರುನ್ ಆರನ್, ಓಶಾನೆ ಥಾಮಸ್, ಅನಿರುಧ್ ಜೋಷಿ, ಆಂಡ್ರ್ಯ ಟೈ, ಆಕಾಶ್ ಸಿಂಗ್, ಅನುಜ್ ರಾವತ್ ಸೇರಿದಂತೆ ಎಲ್ಲರನ್ನೂ ಕೈಬಿಡಲಾಗುತ್ತದೆ.

ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪವನ್ ನೇಗಿ, ಉಮೇಶ್ ಯಾದವ್, ಜೋಷ್ ಫೀಲಿಪ್ಪೆ, ಡೆಲ್ ಸ್ಟ್ರೀನ್, ಶಹಬಾಜ್ ಅಹಮದ್, ಪವನ್ ದೇಶಪಾಂಡೆ ಇವರನ್ನು ಕೈಬಿಡಲಾಗುತ್ತದೆ. ಇನ್ನು ಕೊನೆಯದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬೇಸಿಲ್ ಥಾಂಪಿ, ಬಿಲ್ಲಿ ಸ್ಟಾನ್ ಲೇಕ್, ಮೊಹಮ್ಮದ್ ನಬಿ, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್, ವಿರಾಟ್ ಸಿಂಗ್, ಬಾವಾನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಸಂಜಯ್ ಯದವ್‌ ಈ ಆಟಗಾರರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ಫ್ರಾಂಚೈಸಿಗಳು ನಿರ್ಧರಿಸಿದ್ದಾರಂತೆ‌…