ಆತ ಬೌಲಿಂಗ್ನಲ್ಲಿ ಡ್ರಾವಿಡ್ ನಂತಿದ್ದ ಭಾರತೀಯನ ನೆನೆದ ಸ್ಟೀವ್ ವಾ.‌..!

ಸ್ನೇಹಿತರೆ, ಭಾರತದ ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸ್ ಮ್ಯಾನ್ ರಾಹುಲ್ ದ್ರಾವಿಡ್-ಗೆ ಆಪದ್ಬಾಂಧವ ಎನ್ನುವ ಹೆಸರಿತ್ತು. ಏಕೆಂದರೆ ತಂಡ ಸೋಲಿನಂಚಿನಲ್ಲಿದ್ದ ಗೋಡೆಯಂತೆ ವಿಕೆಟ್ ಕಾವಲು ನಿಂತು, ದ್ರಾವಿಡ್ ಒಂದು ಪಂದ್ಯ ಗೆಲ್ಲುತ್ತಿದ್ದರು, ಇಲ್ಲವೇ ಡ್ರಾ ಮಾಡಿಸುತ್ತಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ನಾಯಕತ್ವದಡಿಯಲ್ಲಿ ಹೆಚ್ಚು ಗೆಲುವುಗಳನ್ನು ಕಂಡಿತ್ತು. ಅದು ಒಂದರಲ್ಲಿ ಎರಡು ಮಾತಿಲ್ಲ.

ಆಸ್ಟ್ರೇಲಿಯಾಕ್ಕೆ 57 ಪಂದ್ಯಗಳಲ್ಲಿ ನಾಯಕನಾಗಿ ಆಡಿ 72 ಶೇ. ಗೆಲುವನ್ನು ತಂದು ಕೊಟ್ಟಿರುವ ಸ್ಟೀವ್ ವಾ ಅವರು ಭಾರತದ ಇಬ್ಬರು ಪ್ರಮುಖ ಆಟಗಾರರನ್ನು ಸ್ಮರಿಸಿಕೊಂಡಿದ್ದಾರೆ.ಆಸ್ಟ್ರೇಲಿಯಾ ಪರ 168 ಟೆಸ್ಟ್ ಪಂದ್ಯಗಳನ್ನಾಡಿರುವ ವಾ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಬಂಗಾಳ ಹುಲಿ ಸೌರವ್ ಗಂಗೂಲಿ ಮತ್ತು ಅನಿಲ್ ಕುಂಬ್ಳೆ ತಂಡಕ್ಕೆ ನೆರವಾಗುತ್ತಿದ್ದುದನ್ನು ನೆನಪಿಸಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತನ್ನ ದೇಶಕ್ಕಾಗಿ ಅನಿಲ್ ಕುಂಬ್ಳೆ ಎಷ್ಟು ಸಂಭ್ರಮಿಸಿ ಆಡುವವರನ್ನು ನಾನು ನೋಡಿಲ್ಲ. ದೇಶಕ್ಕಾಗಿ ಆಡೋದೇ ಆತನಿಗೆ ಎಲ್ಲವೂ ಆಗಿತ್ತು.

ರಾಹುಲ್ ದ್ರಾವಿಡ್ ಬ್ಯಾಟಿಂಗ್ ನಲ್ಲಿ ಹೇಗಿದ್ದರೂ, ಹಾಗೆಯೇ ಬೌಲಿಂಗ್ನಲ್ಲಿ ಅನಿಲ್ ಕುಂಬ್ಳೆ ಇದ್ದರೂ ಎಂದು ನನಗನಿಸುತ್ತದೆ. ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ವಾ.ಈ ಮೂವರು ದಿಗ್ಗಜರ ಬಗ್ಗೆ ನೀವೇನು ಹೇಳ್ತೀರಾ, ಹಾಗೆಯೇ ಈ ಮೂವರು ಆಟಗಾರರಲ್ಲಿ ನಿಮ್ಮ ಫೆವರೇಟ್ ಯಾರು, ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ….