ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಣೀತಾ ಸುಭಾಷ್ ಕೊಟ್ಟ ದೇಣಿಗೆ ಏಷ್ಟು ಗೊತ್ತಾ ???

ಸ್ನೇಹಿತರೆ, ನಟನೆಯ ಜೊತೆಜೊತೆಗೆ ಸಮಾಜಮುಖಿ ಕಾರ್ಯಗಳನ್ನು ತೊಡಗಿಸಿಕೊಳ್ಳುವ ಕೆಲ ತಾರೆಗಳಲ್ಲಿ ಪ್ರಣೀತ ಸುಭಾಷ್ ಕೂಡ ಒಬ್ಬರು. ಈಗ ಅವರು ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಅಂತನೇ ಹೇಳಬಹುದು. ಅಂದರೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ, ಅಲ್ಲದೆ ಕೈಲಾದಷ್ಟು ದೇಣಿಗೆ ನೀಡುವಂತೆ ಅಭಿಮಾನಿಗಳಿಗೂ ಕೂಡ ಕರೆ ನೀಡಿದ್ದಾರೆ. ಹಾಗಿದ್ರೆ ನಟಿ ಪ್ರಣಿತ ಹೇಳಿದ್ದಾದರೂ ಏನು, ಈ ಎಲ್ಲ ಮಾಹಿತಿ ಇಲ್ಲಿದೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

“ಎಲ್ಲರಿಗೂ ನಮಸ್ಕಾರ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಯೋಧ್ಯದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಅದಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ಕೂಡ ಶುರು ಮಾಡಿದ್ದಾರೆ. ಅದಕ್ಕೆ ನಾನು ಕೂಡ ಕೊಡುಗೆ ನೀಡಿದ್ದೇನೆ ನೀವೆಲ್ಲರೂ ಕೂಡ ಇದಕ್ಕೆ ಕೈಜೋಡಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಜೈ ಶ್ರೀರಾಮ್” ಎಂದು ವೀಡಿಯೋ ಮೂಲಕ ಪ್ರಣಿತ ಸಂದೇಶ ನೀಡಿದ್ದಾರೆ.

“ಇನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರು ದೇಣಿಗೆ ನೀಡುವುದಾಗಿ ನಾನು ವಿನಮ್ರವಾಗಿ ಪ್ರತಿಜ್ಞೆ ಮಾಡುತ್ತೇನೆ. ಹೈತಿಹಾಸಿಕ ಆಂದೋಲನದಲ್ಲಿ ನೀವು ಸಹ ಭಾಗಿಯಾಗಿ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಣೀತಾ ಬರೆದುಕೊಂಡಿದ್ದಾರೆ. ಇನ್ನು ಬಹು ಭಾಷೆಯಲ್ಲಿಯೂ ಮಿಂಚಿರುವ ಈ ಕನ್ನಡದ ನಟಿಯ ಕಾರ್ಯಕ್ಕೆ ರಾಮಭಕ್ತರು ಭೇಷ್ ಎನ್ನುತ್ತಿದ್ದಾರೆ. ಹಾಗೆಯೇ ಎಲ್ಲೆಡೆಯಿಂದ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

‘ಜೈಶ್ರೀರಾಮ್’ ಇಷ್ಟು ದಿನದಲ್ಲಿ ಯಾವ ಕನ್ನಡದ ನಟಿಯೂ ಹಿಡದ ಹೆಜ್ಜೆಯನ್ನು ನೀವು ಹೇಗೆ ಇಟ್ಟಿರಿ ಒಂದು ಕಡೆ ನಶೆ ಮಾಡುವವರು, ಇನ್ನೊಂದು ಕಡೆ ರಾಮಭಕ್ತರು. ಪ್ರಭು ರಾಮನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಪ್ರಣಿತ ಸುಭಾಷ್ ಹೇಳಿದ ಮಾತಿನಿಂದ ಪ್ರೇರಿತರಾಗಿ ಈಗಾಗಲೇ ಕೆಲವು ಅಭಿಮಾನಿಗಳು ದೇಣಿಗೆ ನೀಡಿ, ಅದರ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಾಮೆಂಟ್ ಮಾಡಿ ತಿಳಿಸಿ…