ಈ ಸ್ತ್ರೀರೂಪಿ ಗಣಪನ ಬಗ್ಗೆ ನಿಮಗೆಷ್ಟು ಗೊತ್ತು ? ನೀವು ವಿನಾಯಕನ ಬಗ್ಗೆ ಕೆಳಿರ್ತೀರಿ ಆದರೆ ವಿನಾಯಕಿ ಬಗ್ಗೆ ಕೇಳಿದ್ದೀರಾ ??

ಸ್ನೇಹಿತರೆ ನಿಮಗೆಲ್ಲ ವಿನಾಯಕನ ಬಗ್ಗೆ ಗೊತ್ತು, ಆದರೆ ವಿನಾಯಕಿ ಅಂದರೆ ಸ್ತ್ರೀರೂಪಿ ಗಣೇಶನ ಬಗ್ಗೆ ನಿಮಗೆ ಗೊತ್ತಾ, ನಿಮಗೆಲ್ಲ ಒಂದು ಕ್ಷಣ ಅಚ್ಚರಿಯೆನಿಸಿದರೂ ಇದು ಸತ್ಯ, ಸನಾತನ ಧರ್ಮ ಸೇರಿದಂತೆ ಜೈನ ಶಾಸ್ತ್ರ, ಅನೇಕ ಸಂಪ್ರದಾಯಗಳಲ್ಲಿ ಸ್ತ್ರೀರೂಪಿ ಗಣಪನನ್ನು ಆರಾಧಿಸುವ ಪದ್ಧತಿ ಇದೆ. ಕರ್ನಾಟಕ-ಕೇರಳ, ಒರಿಸ್ಸಾ, ಬಿಹಾರ ಸೇರಿದಂತೆ ದೇಶದ ಅನೇಕ ದೇವಾಲಯಗಳಲ್ಲಿ ಇಂತಹ ಸ್ತ್ರೀರೂಪಿ ಗಣೇಶನ ವಿಗ್ರಹಗಳನ್ನು ನಾವು ಕಾಣಬಹುದು. ಅದರಲ್ಲೂ ಬಿಹಾರ, ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿನ ಮಂದಿರಗಳಲ್ಲಿ ಇಂತಹ ಹೆಣ್ಣು ಗಣಪನ ವಿಗ್ರಹವನ್ನು ಪೂಜಿಸಲಾಗುತ್ತಿತ್ತು.

ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ಕೂಡ ಪಂಚಲೋಹದ ಸುಂದರವಾದ ವಿನಾಯಕಿ ವಿಗ್ರಹವಿದೆ ಅನ್ನೋದು ಮತ್ತೊಂದು ವಿಶೇಷ. ಇನ್ನು ಯಾವೆಲ್ಲಾ ದೇವಸ್ಥಾನಗಳಲ್ಲಿ ಈ ಗಣೇಶನ ಸ್ತ್ರೀ ಸ್ವರೂಪಿ ವಿಗ್ರಹವಿದೆ ಎಂದು ನೋಡುವುದಾದರೆ. ಕೇರಳದ ಸರಿನಾಡು ಬಾಲಸುಬ್ರಹ್ಮಣ್ಯಂ ದೇವಾಲಯದಲ್ಲಿ. ಮರದಿಂದ ಮಾಡಿರುವ ಈ ವಿಗ್ರಹವನ್ನು ವಿನಾಯಕಿ ಎಂದು ಕರೆಯಲಾಗುತ್ತದೆ. ಇನ್ನು ಮಹಾರಾಷ್ಟ್ರದ ಭೂಲೇಶ್ವರ ದೇವಸ್ಥಾನದಲ್ಲಿರುವ ವಿಘ್ನೇಶ್ವರಿ ಶಿಲ್ಪವಂತೂ ತುಂಬಾನೇ ವಿಶಿಷ್ಟವಾಗಿದೆ.

ವಿಶೇಷ ಅಂದ್ರೆ ಈ ಭೂಲೇಶ್ವರ ದೇವಸ್ಥಾನದಲ್ಲಿ ಗಣಪತಿ ಮಾತ್ರವಲ್ಲ, ಸಾಕ್ಷಾತ್ ಶಿವನು ಕೂಡ ಇಲ್ಲಿ ಹೆಣ್ಣಿನ ರೂಪದಲ್ಲಿದ್ದಾನೆ. ಅಷ್ಟೇ ಯಾಕೆ ಶಿವನ ಪುತ್ರ ಕಾರ್ತಿಕೇಯ ಕೂಡ ಇಲ್ಲಿ ಹೆಣ್ಣಿನ ಸ್ವರೂಪದಲ್ಲಿ ಕುಳಿತುಬಿಟ್ಟಿದ್ದಾನೆ. ಒಟ್ಟಾರೆ ಹಿಡಿ ಶಿವನ ಕುಟುಂಬವೇ ಇಲ್ಲಿ ಸ್ತ್ರೀ ಮಯವಾಗಿದೆ. ಅರ್ಧ ಪುರುಷ ಹಾಗೂ ಅರ್ಧ ಸ್ತ್ರೀರೂಪ ವಿರೋ ಅರ್ಧನಾರೀಶ್ವರನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸಂಪೂರ್ಣ ಸ್ತ್ರೀ ರೂಪಿ ಶಿವನ ವಿಗ್ರಹ ಇರೋದು ಭೂಲೇಶ್ವರ ದೇವಸ್ಥಾನದಲ್ಲಿ ಮಾತ್ರ. ಇವರ ಸ್ತ್ರೀ ರೂಪಗಳ ಹಿಂದಿರೋ ರಹಸ್ಯವಾದರೂ ಏನು ಅನ್ನುವ ಬಗ್ಗೆ ಒಂದು ರೋಚಕವಾದ ಕಥೆ ಇದೆ.

ಅಂಧಕಾಸುರನ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಈತನನ್ನು ಆತನ ಬಂಧುಗಳೇ ಕೊಳ್ಳಲು ಸಂಚು ರೂಪಿಸಿದಾಗ, ಬ್ರಹ್ಮನನ್ನು ಕುರಿತು ತಪಸ್ಸು ನಡೆಸುತ್ತಾನೆ. ನಂತರ ಬ್ರಹ್ಮನ ಬಳಿ ತನಗೆ ಸಾವು ಬಾರದಂತೆ ವರ ಪಡೆದುಕೊಳ್ಳುತ್ತಾನೆ. ವಿಚಿತ್ರ ಅಂದ್ರೆ ಈತ ಸಾಕ್ಷಾತ್ ಪರಶಿವನನ್ನೇ ಮೋಹಿಸಲು ಮುಂದಾಗುತ್ತಾನೆ. ಇದರಿಂದ ಸಿಟ್ಟಿಗೆದ್ದ ಶಿವನ ಕೈಯಿಂದ ಅಂದಕಾಸುರನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಕೊನೆಗೆ ಈ ಅಂಧಕಾಸುರನನ್ನು ಕೊಲ್ಲುವುದಕ್ಕೆ ಸಪ್ತಮಾತ್ರಿಕೆಗಳನ್ನು ಸೃಷ್ಟಿಸುತ್ತಾರೆ.

ಚತುರ್ಮುಖ ಬ್ರಹ್ಮನಿಂದ ಬ್ರಾಹ್ಮಣಿ, ವಿಷ್ಣುವಿನ ದೇಹದಿಂದ ವೈಷ್ಣವಿ, ಮಹೇಶ್ವರನಿಂದ ಮಹೇಶ್ವರಿ, ಕಾರ್ತಿಕೇಯನಿಂದ ಕೌಮರಿ, ವರಹನಿಂದ ವಾರಾಹಿ, ಇಂದ್ರನಿಂದ ಇಂದ್ರಾಣಿ, ಪಾರ್ವತಿಯಿಂದ ಚಾಮುಂಡಿ, ಹೀಗೆ ಒಬ್ಬೊಬ್ಬರಿಂದ ಒಂದೊಂದು ಶಕ್ತಿಯನ್ನು ಸೃಷ್ಟಿಸಿ ಶಿವನ ಎಲ್ಲಾ ಶಕ್ತಿಗಳನ್ನು ಒಂದುಗೂಡಿಸಿ ಅಂಧಕಾಸುರನನು ಸಂಹರಿಸುತ್ತಾನೆ. ಆದರೆ ಈ ವಿನಾಯಕಿ ಎಂಬುವ ಸ್ತ್ರೀರೂಪ ಮೊದಲ ಬಾರಿಗೆ ಕಾಣೋದು ಶಾಕ್ತ ಸಂಪ್ರದಾಯದಲ್ಲಿ. ಹೌದು ಶಾಕ್ತರು ಕಾಪಾಲಿಕರು, ಯೋಗಿನಿಯರು ಪಾರ್ವತಿಯ 64 ರೂಪಗಳನ್ನು ಆರಾಧಿಸುತ್ತಾರೆ.

ಇವರು ಪೂಜಿಸುವ ಪಾರ್ವತಿಯ 64 ರೂಪಗಳನ್ನ ಚೌಸತ್ ಯೋಗಿನಿಯರು ಅಂತ ಕರೀತಾರೆ. ಅಂದಹಾಗೆ ಈ ಶಾಕ್ತರು ಆರಾಧಿಸುವ ಪಾರ್ವತಿಯ 64 ರೂಪಗಳ ಪೈಕಿ ವಿನಾಯಕೀ ಕೂಡ ಒಂದು. ಒಡಿಸ್ಸಾ ಚೌಸತ್ ಯೋಗಿನಿ ಮಂದಿರದಲ್ಲಿ ಕೂಡ ಸ್ತ್ರೀರೂಪಿ ಗಣೇಶನ ವಿಗ್ರಹವನ್ನು ನೀವು ಕಾಣಬಹುದು. ಇದು ಶಾಕ್ತರು ಆರಾಧಿಸುವ ಸ್ತ್ರೀರೂಪಿ ಗಣೇಶನ ಕಥೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448