ಕುಬೇರನಾಗಿ ಬೆಳೆದ ರಘುವೀರ್ ಸಾ’ವಿನ ದುರಂತ ಕಥೆ, ನಿಜಕ್ಕೂ ಒಂದು ಕ್ಷಣ ಬೇಜಾರ್ ಆಗುತ್ತೆ ಕಣ್ರೀ !!

ಸ್ನೇಹಿತರೆ ಬದುಕಿನ ಹಾದಿಯಲ್ಲಿ ಏರುಪೇರು ಕಷ್ಟ-ಸುಖ ಎಲ್ಲಾ ಸಾಮಾನ್ಯ. ಆದರೆ ಸಂತೋಷದಿಂದ ನಡೆಯುತ್ತಾ ಕುಬೇರನಂತೆ ಬಾಳಿದ್ದ ಕನ್ನಡದ ನಟನೊಬ್ಬ ಪ್ರೀತಿ-ಪ್ರೇಮದ ಹಿಂದೆ ಅಲೆದು, ಇಂದು ದುರಂತ ಅಂತ್ಯ ಕಂಡಿದ್ದಾರೆ. ಹಾಗಿದ್ದರೆ ಈ ನಟ ಯಾರು? ಅವರ ಜೀವನದ ರೋಚಕ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ. ಆ ನಟನ ಹೆಸರು ರಘುವೀರ್. ಹುಟ್ಟಿದ್ದು 19 ಮಾಚ್ 1963 ರಲ್ಲಿ ತಂದೆ ಮುನಿಯಲ್ಲಪ್ಪ. ಬೆಂಗಳೂರಿನಲ್ಲಿ ಬಹುದೊಡ್ಡ ಸಿವಿಲ್ ಕಾಂಟ್ರಾಕ್ಟರ್ ಮತ್ತು ಆಗರ್ಭ ಶ್ರೀಮಂತ.

ಸಿನಿಮಾ ನಟರ ಹಾಗೂ ರಾಜಕೀಯ ವ್ಯಕ್ತಿಗಳ ಮನೆಯನ್ನು ಕಟ್ಟಿಸಿ ಕೊಡುತ್ತಿದ್ದ ಬಹುಬೇಡಿಕೆಯ ಗುತ್ತಿಗೆದಾರ. ಇವರ ಮುದ್ದಿನ ಮಗ ರಘುವೀರ್. ತಂದೆ ಕಟ್ಟಡ ನಿರ್ಮಾಣದಲ್ಲಿ ಬಹುಬೇಡಿಕೆಯ ಗುತ್ತಿಗೆದಾರನ ಆಗಿದ್ದರಿಂದ ಮಗ ಕೂಡ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ತೊಡಗುತ್ತಾರೆ. ಹೀಗಾಗಿ ತಂದೆ ಕಟ್ಟಿಸುತ್ತಿದ್ದ ಮನೆಗಳಿಗೆ ರಘುವೀರ್ ಪ್ರಾಕ್ಟಿಕಲ್ಸ್ಕಾಗಿ ಹೋಗುತ್ತಿದ್ದರು. ಆದರೆ ಹೀಗೆ ಒಂದು ದಿನ ಅಂಬರೀಶ್ ಅವರನ್ನು ನೋಡಿ ಮತ್ತು ಅವರ ಕಡಕ್ ಮಾತನ್ನು ಕೇಳಿ, ತಾನು ಓರ್ವ ನಟ ಆಗಬೇಕು ಎಂದು ಇವರಿಗೆ ಅನಿಸುತ್ತದೆ.

ತಮ್ಮ ಆಸೆಯನ್ನು ತಂದೆಯ ಬಳಿ ಹೇಳಿದಾಗ ತಂದೆಗೆ ಮಗನ ಆಸೆಯನ್ನು ಅಲ್ಲಗಳೆಯಲು ಆಗಲಿಲ್ಲ. ಹೀಗಾಗಿ ನಟನೆ ಅಭ್ಯಾಸವನ್ನು ಕಲಿಯಲು ರಘುವೀರ್ ಅವರನ್ನು ಚೆನ್ನೈಗೆ ಕಳಿಸುತ್ತಾರೆ. ಎಲ್ಲ ಕಲೆಗಳನ್ನು ಕರಗತಮಾಡಿಕೊಂಡು ಅಲ್ಲಿಂದ ವಾಪಸಾದ ರಘುವೀರ್ 1990 ರಲ್ಲಿ ಅಜಯ್ ವಿಜಯ್ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಸಿನಿಮಾ ಅಷ್ಟೊಂದು ಹೆಸರು ಅವರಿಗೆ ತರಲಿಲ್ಲ. ಮುಂದೆ 1990 ರಲ್ಲಿ ಎಸ್ ನಾರಾಯಣ್ ಅವರ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುತ್ತಾರೆ.

ಈ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡು ರಘುವೀರ್ ಸಿನಿ ಬದುಕಿಗೆ ಒಂದು ಬ್ರೇಕ್ ನೀಡಿತ್ತು. ನಂತರ ಶೃಂಗಾರ ಕಾವ್ಯ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಈ ಚಿತ್ರದಲ್ಲಿ ಚೆನ್ನೈ ಮೂಲದ ಸಿಂಧು ಅವರು ನಾಯಕಿಯಾಗಿ ನಟಿಸಿದ್ದರು. ಹೀಗಾಗಿ ರಘುವೀರ್ ಮತ್ತು ಸಿಂಧು ಅವರ ನಡುವೆ ಬಾಂಧವ್ಯ ಬೆಳೆದು ಮದುವೆಯ ತಯಾರಿಯಲ್ಲಿ ತೊಡಗುತ್ತಾರೆ. ಆದರೆ ರಘುವೀರ್ ತಂದೆ ಅವರಿಗೆ ಈ ಮದುವೆ ಸುತಾರಾಂ ಇಷ್ಟ ಇರುವುದಿಲ್ಲ.

ತಂದೆಯನ್ನು ದಿಕ್ಕರಿಸಿ ಮದುವೆಯಾದ ಕಾರಣ ಅವರನ್ನು ಮನೆಯಿಂದ ಹೊರಹಾಕುತ್ತಾರೆ. ಇಲ್ಲಿಂದ ಶುರುವಾಯಿತು ಅವರಿಗೆ ಸಂಕಷ್ಟದ ಕಾಲ. ಈ ನಟನಿಗೆ ಯಾವ ಅವಕಾಶ ಒದಗಿ ಬರಲಿಲ್ಲ. ಹಾಗೂ-ಹೀಗೂ ಜೀವ ನಡೆಸುತ್ತಿದ್ದ ಅವರಿಗೆ 2005ರಲ್ಲಿ ದೊಡ್ಡ ಆ’ಘಾತ ಕಾದಿತ್ತು. ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಸಿಂಧು ಅಕಾಲಿಕ ಮ’ರಣ ಹೊಂದಿದರು ಹೀಗಾಗಿ ತೀವ್ರ ಮಾನಸಿಕ ಒತ್ತಡಗಳಿಂದ ಬ’ಳಲುತ್ತಿದ್ದ ರಘುವೀರ್ ಅವರನ್ನು ಅವರ ತಂದೆ ವಾಪಸ್ ಮನೆಗೆ ಕರೆದುಕೊಂಡು ಬಂದು ಮತ್ತೊಂದು ಮದುವೆ ಮಾಡಿಸುತ್ತಾರೆ.

ಆದರೆ 2014ರಂದು ಹೃ’ದಯಾಘಾ’ತದಿಂದ ಆಸ್ಪತ್ರೆಗೆ ಸೇರಿದ ಈ ನಟ, 8 ಮೇ 2014ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಒಟ್ಟಿನಲ್ಲಿ ಕುಬೇರ ವಂಶದಲ್ಲಿ ಹುಟ್ಟಿದ ರಘುವೀರ್ ಸಿನಿಮಾ, ಪ್ರೀತಿ ಮತ್ತು ದುಃಖದ ಮಡುವಿನಲ್ಲಿ ಬಿದ್ದು ಏನು ಪಡೆಯದೆ ಹೊರಟು ಹೋಗುತ್ತಾರೆ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448