ವಿಶ್ವದ ಅತಿದೊಡ್ಡ ಶಿವಲಿಂಗದ ಬಗ್ಗೆ ನಿಮಗೆಷ್ಟು ಗೊತ್ತು, ನೀವು ಶಿವನ ಬೋಜೇಶ್ವರ ಲಿಂಗದ ಬಗ್ಗೆ ಕೇಳಿದ್ದೀರಾ ??

ಸ್ನೇಹಿತರೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ ಯಾರಿಗೆ ತಾನೇ ಗೊತ್ತಿಲ್ಲ, ತನ್ನ ಅಗಾಧತೆ ಹಾಗೂ ಅದ್ಭುತ ವಾಸ್ತು ತಂತ್ರಜ್ಞಾನದಿಂದ ವಿಶ್ವದ ಗಮನ ಸೆಳೆದಿರುವ ಪ್ರಾಚೀನ ದೇವಾಲಯ. ಆ ಆಲಯದ ಹೆಸರಿಗೆ ತಕ್ಕಂತೆ ಗೋಪುರದಿಂದ ಹಿಡಿದು ಗರ್ಭಗುಡಿಯಲ್ಲಿರುವ ಶಿವಲಿಂಗದ ವರೆಗೂ ಎಲ್ಲವೂ ಅಲ್ಲಿ ಅದ್ಭುತವೇ. ಅದರಲ್ಲೂ ಬೃಹದೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಎತ್ತರವೇ ಬರೋಬ್ಬರಿ 12 ಅಡಿ. ವಿಶೇಷ ಅಂದ್ರೆ ಈ ಬೃಹದೇಶ್ವರ ಲಿಂಗ ಕ್ಕಿಂತಲೂ ಎರಡು ಪಟ್ಟು ದೊಡ್ಡದಾದ ಮತ್ತೊಂದು ಶಿವಲಿಂಗವಿದೆ ಅದರ ಬಗ್ಗೆ ನಿಮಗೆ ಗೊತ್ತಿದೆಯಾ?.

ಇಷ್ಟಕ್ಕೂ ವಿಶ್ವದ ಅತಿ ದೊಡ್ಡ ಏಕಶಿಲಾ ಶಿವಲಿಂಗ ಎಂದೇ ಫೇಮಸ್ ಆಗಿರೋ ಶಿವಲಿಂಗ ಇರೋದಾದ್ರೂ ಎಲ್ಲಿ,, ಮತ್ತು ಅದನ್ನು ಕೆತ್ತಿಸಿದವರು ಯಾರು, ಅದರ ವಿಶೇಷತೆ ಗಳಾದರೂ ಏನು? ಈ ಎಲ್ಲಾ ಪ್ರಶ್ನೆಗೂ ಉತ್ತರ ಇಲ್ಲಿದೆ ನೋಡಿ. ಸ್ನೇಹಿತರೆ ನೀವೆಲ್ಲಾ ಧಾರಾನಗರಿ ಅರಸನಾಗಿದ್ದ, ಭೋಜರಾಜನ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಮಧ್ಯಪ್ರದೇಶದ ಇವತ್ತಿನ ಭೂಪಾಲ್ಲವೇ ಅವತ್ತಿನ ಧಾರಾನಗರಿ ಎನಿಸಿಕೊಂಡಿತು. 11ನೇ ಶತಮಾನದಲ್ಲಿ ಭೂಪಾಲ್ ನಲ್ಲಿ ಆಳ್ವಿಕೆ ನಡೆಸುತ್ತಿದ್ದ ಭೋಜರಾಜ ಪರಾಕ್ರಮಿ ಮಾತ್ರವಲ್ಲದೆ, ಮಹಾಪಂಡಿತ ಎನಿಸಿಕೊಂಡವನು.

ಶ’ಸ್ತ್ರ ಹಾಗೂ ಶಾಸ್ತ್ರ ಗಳೆರಡರಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದ ಬೋಜರಾಜ, ವಾಸ್ತುಶಾಸ್ತ್ರ, ಅಶ್ವಶಾಸ್ತ್ರ ಹೀಗೆ 83ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾನೆ. ಈತ ಬರೆದಿರುವ ಸಮರಾಂಗಣ ಸೂತ್ರಧಾರ ಎಂಬ ವಾಸ್ತು ಗ್ರಂಥ ಇಡೀ ಭಾರತೀಯ ಶಿಲ್ಪಶಾಸ್ತ್ರ ಹಾಗೂ ವಾಸ್ತು ಶಾಸ್ತ್ರದ ಮೂಲ ಗ್ರಂಥ ಎನಿಸಿಕೊಂಡಿದೆ. ಅಷ್ಟೇ ಅಲ್ಲದೆ ಈತ ಅದ್ಭುತ ಧಾರ್ಮಿಕ ವ್ಯಕ್ತಿಯಾಗಿದ್ದ. ಹೀಗಾಗಿ ಭೋಜರಾಜ ಆತನ ರಾಜಧಾನಿಯಾಗಿದ್ದ ಭೂಪಾಲ್ ಒಂದರಲ್ಲೇ 104 ಭವ್ಯ ಶಿವಾಲಯ ಗಳನ್ನು ನಿರ್ಮಿಸಿದನಂತೆ.

ಅಂದಹಾಗೆ ನಾವು ಹೇಳುತ್ತಿರುವ ವಿಶ್ವದ ಅತಿದೊಡ್ಡ ಶಿವಲಿಂಗವನ್ನ ಪ್ರತಿಷ್ಠಾಪಿಸಿದ್ದು ಕೂಡ, ಇದೇ ಭೋಜರಾಜ. ಈ ಶಿವಲಿಂಗದ ಹೆಸರು ಭೋಜೇಶ್ವರ. ಇದರ ಎತ್ತರವೇ ಬರೋಬ್ಬರಿ 21 ಅಡಿ, ಪೀಠವು ಸೇರಿ ಈ ಶಿವಲಿಂಗ 40 ಅಡಿ ಎತ್ತರವಿದೆ. ಅಂದಹಾಗೆ ಒಂದೇ ಕೆಂಪು ಶಿಲೆಯಲ್ಲಿ ಕೆತ್ತಲ್ಪಟ್ಟ ವಿಶ್ವದ ಅತಿ ದೊಡ್ಡ ಶಿವಲಿಂಗ ಇರೋದು ಮಧ್ಯಪ್ರದೇಶದಲ್ಲಿ. ಕ್ರಿಸ್ತಶಕ 1035ರಲ್ಲಿ, ಅಂದರೆ ಸರಿಸುಮಾರು ಒಂದು ನೂರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಈ ಭೋಜೇಶ್ವರ ದೇವಸ್ಥಾನದ ಗರ್ಭಗುಡಿ ಕೇವಲ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ.

ಅಷ್ಟೇ ಅಲ್ಲದೆ ಈ ದೇವಸ್ಥಾನದ ಪ್ರವೇಶದ್ವಾರದ ಅಡಿ ಬರೋಬರಿ 40 ಅಡಿ. ಹಾಗೆ ಅಲ್ಲಿ ಕೆತ್ತಲಾಗಿರುವ ಶಿವ ಗಣ್ಣದ ಶಿಲ್ಪಗಳು ಹಾಗೂ ಕಲಾಕೃತಿಗಳು ಈ ದೇವಾಲಯದ ಭವ್ಯತೆಗೆ ಸಾಕ್ಷಿಯಾಗಿದೆ. ಹೀಗೆ ಹೆಜ್ಜೆಹೆಜ್ಜೆಗೂ ಅಚ್ಚರಿ ಹುಟ್ಟಿಸುವ ಈ ಭೋಜೇಶ್ವರ ದೇವಸ್ಥಾನ ಅಪೂರ್ಣವಾಗಿ ಉಳಿದುಕೊಳ್ಳುತ್ತದೆ. ಈ ಮಂದಿರ ನಿರ್ಮಾಣದ ಹಂತದಲ್ಲಿರುವಾಗಲೇ, ಭೋಜ ರಾಜನಿಗೆ ಯು’ದ್ಧವೊಂದು ಎದುರಾದ ಪರಿಣಾಮ, ಇದು ಅಪೂರ್ಣವಾಗಿ ಉಳಿದುಬಿಡ್ತು. ಪರಿಣಾಮ ವಿಶ್ವದ ವಿಶ್ವದ ಅತಿ ದೊಡ್ಡ ಶಿವಲಿಂಗ ನಿರ್ಮಿಸುವ ಭೋಜರಾಜನ ಕನಸು ಕೂಡ ಭಗ್ನವಾಗಿ ಹೋಯಿತು…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448