IPL 2021 ಮೆಗಾ ಆಕ್ಷನ್ ಗೆ ಮುಹೂರ್ತ ಫಿಕ್ಸ್,, RTM ಕಾರ್ಡ್ ನಿಯಮದಲ್ಲಿ ಬಾರಿ ಬದಲಾವಣೆ..!

ಹೌದು ಸ್ನೇಹಿತರೆ ಐಪಿಎಲ್ 2020 ದುಬೈನಲ್ಲಿ ಅದ್ದೂರಿಯಾಗಿ ನೆರವೇರಿತು. ಇನ್ನೇನು ಐಪಿಎಲ್ 2021ರ ಅಂದರೆ ಸೀಸನ್ 14ರ ಲೆಕ್ಕಾಚಾರ ಅದಾಗಲೇ ಜೋರಾಗಿ ನಡೆಯುತ್ತಿದೆ. ಮೇಘ ಆಕ್ಷನ್ ಇರೋದ್ರಿಂದ ಈ ಬಾರಿಯ ಐಪಿಎಲ್ ಮತ್ತಷ್ಟು ರಂಗನ್ನು ಪಡೆದುಕೊಂಡಿದೆ. ಅಲ್ಲದೆ ಹೊಸ ತಂಡಗಳ ಸೇರ್ಪಡೆ ಮತ್ತು ಪ್ಲೇಯಿಂಗ್ 11 ರಿಂದ ವಿದೇಶಿ ಆಟಗಾರರನ್ನು ಆಡಿಸುವ ನಿರ್ಧಾರದ ಕುರಿತಾದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ಈ ಎಲ್ಲ ವಿಚಾರಗಳಿಂದಾಗಿ ಐಪಿಎಲ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಇನ್ನು ಐಪಿಎಲ್ ಬಿಡ್ಡಿಂಗ್ ವಿಚಾರಕ್ಕೆ ಬರುವುದಾದರೆ, ಒಂದು ತಂಡ ಕೇವಲ ಮೂವರು ಆಟಗಾರರನ್ನು ಮಾತ್ರ ರೀಟೈನ್ ಮಾಡಬಹುದಾಗಿದೆ. ಉಳಿದ ಆಟಗಾರರನ್ನು ಆರ್ ಟಿ ಎಂ ಕಾರ್ಡ್ ಬಳಸಿ ಬಿಡ್ಡಿಂಗ್ ಮಾಡಬಹುದು ಅನ್ನುವ ವಿಚಾರವನ್ನು ಈಗಾಗಲೇ ನಿಮ್ಮ ಗಮನಕ್ಕೆ ತಂದಿದ್ದೇವೆ. ಆದರೆ ಈಗ ತಂಡವೊಂದು ಕೇವಲ ಒಬ್ಬ ಆಟಗಾರನನ್ನು ಬೇಕಾದರೂ ರೀಟೈನ್ ಮಾಡಿಕೊಳ್ಳಬಹುದು. ಉಳಿದ ನಾಲ್ವರನ್ನು ಆರ್ ಟಿ ಎಂ ಕಾರ್ಡ್ ಬಳಸಿ ಖರೀದಿಸಬಹುದು.

ಉದಾಹರಣೆಗೆ ಚೆನ್ನೈ ತಂಡಕ್ಕೆ ಯಾವ ಆಟಗಾರರು ಅನಾವಶ್ಯಕ ಎನಿಸಿದರೆ ಎಲ್ಲರನ್ನೂ ಕೂಡ ರಿಲೀಸ್ ಮಾಡಿ, ಕೇವಲ ದೋಣಿಯನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಆರ್ ಟಿ ಎಂ ಕಾರ್ಡ್ ಮೂಲಕ ಖರೀದಿಸಬಹುದು. ಇನ್ನು ಆರ್ಸಿಬಿ ತಂಡ ವಿರಾಟ್, ಎಬಿಡಿ ಮತ್ತು ಚಹಲ್ ಈ ಮೂವರನ್ನು ಮಾತ್ರ ರಿಟೇನ್ ಮಾಡಿ, ಉಳಿದವರನ್ನು ಆರ್ ಟಿ ಎಂ ಕಾರ್ಡ್ ಬಳಸಿ ಕರೆಯಬಹುದು. ಅಂದರೆ ಯಾವ ತಂಡವಾದರೂ ಸಹ ಕನಿಷ್ಠ ಒಂದು ಆಟಗಾರನನ್ನು ಮತ್ತು ಗರಿಷ್ಠ ಮೂರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು.

ಇನ್ನು ಮೇಗಾ ಆಕ್ಷನ್ ನಡೆಯುವ ದಿನಾಂಕದ ಬಗ್ಗೆಯೂ ಬಿಸಿಸಿಐ ಮೂಲಗಳಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಅದರ ಪ್ರಕಾರ ಜನವರಿ ಕೊನೆಯ ಅಥವಾ ಫೆಬ್ರವರಿಯ ಮೊದಲ ವಾರದಲ್ಲಿ ಐಪಿಎಲ್ ಮೇಗಾ ಆಕ್ಷನ್ ನಡೆಯಲಿದ್ದು, ಈಗಾಗಲೇ ಫ್ರಾಂಚೈಸಿಗಳ ಮುಂದೆ ಐಪಿಎಲ್ ಕಮಿಟಿ ಎರಡು ದಿನಾಂಕಗಳನ್ನು ನೀಡಿದೆ, ಮೊದಲನೆಯದಾಗಿ ಜನವರಿ 29 ಮತ್ತು ಫೆಬ್ರವರಿ 12 ರಂದು ಮೆಗಾ ಆಕ್ಷನ್ ನಡೆಸುವ ಕುರಿತು ದಿನಾಂಕಗಳನ್ನು ನೀಡಲಾಗಿದೆ. ಹೀಗಾಗಿ ಫ್ರಾಂಚೈಸಿಗಳ ಅಭಿಪ್ರಾಯವನ್ನು ಕೂಡ ಪಡೆಯಲಾಗುತ್ತಿದೆ.

ಇನ್ನೂ ಖುಷಿ ವಿಷಯ ಏನಪ್ಪಾ ಅಂದ್ರೆ, ಈ ಬಾರಿಯ ಮೆಗಾ ಆಕ್ಷನ್ ನಮ್ಮ ಬೆಂಗಳೂರಿನಲ್ಲಿ ನಡೆಯಲಿದೆ. ಹೌದು ಕನ್ನಡಿಗರದಂತಹ ಐಪಿಎಲ್ ಚೇರ್ ಮ್ಯಾನ್ ಬ್ರಿಜೇಶ್ ಪಟೇಲ್ ಮತ್ತು ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗುಲಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಕೂಡ ಬಂದಿದೆ. ಅವರ ಮಾತುಕತೆ ಪ್ರಕಾರ ಬೆಂಗಳೂರಿನಲ್ಲಿ ಮೆಗಾ ಆಕ್ಷನ್ ನಡೆಸುವ ಕುರಿತು ಚರ್ಚೆ ನಡೆದಿದೆ. ಎಲ್ಲವೂ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಬಿಸಿಸಿಐನ ಮಹತ್ವದ ಸಭೆಯಲ್ಲಿ ನಿರ್ಧಾರವಾಗಲಿದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448