ಕನ್ನಡಿಗನ ಪರ ರೊಚ್ಚಿಗೆದ್ದ ಮಾಜಿ ಆಟಗಾರ ಯಾಕೆ ಗೊತ್ತಾ !!

ಸ್ನೇಹಿತರೆ ನೆನ್ನೆ ನಡೆದ ಆಸ್ಟ್ರೇಲಿಯ ಮತ್ತು ಭಾರತದ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ, ಟೀಮ್ ಇಂಡಿಯಾ 17 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಇವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ವೇಗಿಗಳಾದ ಬೂಮ್ರಾ, ಶಾರ್ದುಲ್ ಟಾಕುರ್, ಟೀ.ನಟರಾಜನ್ ಅವರ ಬೌಲಿಂಗ್ ನೆರವಿನಿಂದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಕ್ಲೀನ್ಸ್ವೀಪ್ ಆಗುವುದರಿಂದ ತಪ್ಪಿಸಿಕೊಂಡಿದೆ.

ಇನ್ನೇನು ಮ್ಯಾಕ್ಸ್ವೆಲ್ ಹಾಗೂ ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯಾಗೆ ಮ್ಯಾಚ್ ಗೆಲ್ಲಿಸಿ ಬಿಡ್ತಾರೆ ಅಂತ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು. 38 ಬಾಲ್ ಗೆ 4 ಸಿಕ್ಸರ್ ಮತ್ತು 3 ಬೌಂಡರಿ ಸಮೇತ 59 ರನ್ ಸಿಡಿಸಿದ ಮ್ಯಾಕ್ಸ್ವೆಲ್ ನವರನ್ನು ಬೂಮ್ರಾ ಕ್ಲೀನ್ ಬೋಲ್ಡ್ ಮಾಡುವ ಮುಖಾಂತರ ಪಂದ್ಯಕ್ಕೆ ರೋಚಕ ತಿರುವನ್ನು ನೀಡಿದರು. ನಂತರ ಬಂದ ಯಾವುದೇ ಬ್ಯಾಟ್ಸ್ ಮ್ಯಾನ್ ಮ್ಯಾಜಿಕ್ ಮಾಡದ ಕಾರಣ ಆಸ್ಟ್ರೇಲಿಯಾ ತನ್ನ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರತಿವರ್ಷ ಕನಿಷ್ಠ ಒಂದು ಶತಕವನ್ನು ಆದರೂ ಗಳಿಸಿಕೊಂಡು ಬಂದಿದ್ದಾರೆ. ಆದರೆ ಇದೇ ಪ್ರಥಮ ಬಾರಿಗೆ 2020ರಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಕನಿಷ್ಠ ಒಂದು ಶತಕ ದಾಖಲಾಗಿಲ್ಲ. ಇದೀಗ ಆಸ್ಟ್ರೇಲಿಯಾದ ವಿರುದ್ಧ ಮೂರು ಏಕದಿನ ಪಂದ್ಯ ಆಡುವ ಅವಕಾಶ ಸಿಕ್ಕಿದ್ರು. ಆದರೆ ಕನಿಷ್ಠ ಒಂದು ಶತಕ ಬಾರಿಸಲು ಆಗಲಿಲ್ಲ. ಇನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಬೆಂಚ್ ಕಾಯುವ ವಿಶ್ವದಾಖಲೆ ಕಂಡಿತ ಮನೀಶ್ ಪಾಂಡೆ ಹೆಸರಿಗೆ ಅಂತ ದೊಡ್ಡಗಣೇಶ್ ಟ್ವೀಟ್ ಮಾಡಿದ್ದಾರೆ.

ಹೌದು ಈ ಕುರಿತು ಟ್ವೀಟ್ ಮಾಡಿರುವ ದೊಡ್ಡ ಗಣೇಶ್, ಔಪಚಾರಿಕವಾಗಿರುವ ಪಂದ್ಯದಲ್ಲು ಮನೀಶ್ ಪಾಂಡೆ ಅವರಿಗೆ ಅವಕಾಶ ನೀಡದಿದ್ದರೆ ಅವರು ಹದಿನೈದರ ಬಳಗದಲ್ಲಿದ್ದರು ಏನು ಪ್ರಯೋಜನ. ಕಳೆದ ಎರಡು ವರ್ಷಗಳಲ್ಲಿ ಆತ ಕೇವಲ ಮೂರು ಏಕದಿನ ಪಂದ್ಯವನ್ನು ಮಾತ್ರ ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಿವೃತ್ತರಾಗುವ ವೇಳೆಗೆ, ಅತಿ ಹೆಚ್ಚು ಪಂದ್ಯಗಳಲ್ಲಿ ಬೆಂಚ್ ಕಾಯ್ದೆ ಆಟಗಾರ ಎಂದು ವಿಶ್ವ ದಾಖಲೆ ಬರೆಯಲಿದ್ದಾರೆ ಅಂತ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448