ಕನ್ನಡನ ಇಂಟರ್ನ್ಯಾಷನಲ್ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀನಿ ಅಂತ ಹೇಳಿ ಹೆಂಡತಿ ಜೊತೆ ರಸಂ ಮಾಡ್ತಿದ್ದೀಯಲ್ಲ..! ಮತ್ತೆ ಟ್ರೋಲ್ ಆದ ಬಿಗ್ ಬಾಸ್ ದಂಪತಿ..!

ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಜೋಡಿ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಈಗ ರಸಂ ವಿಷಯವೊಂದಕ್ಕೆ ನೆಟ್ಟಿಗರು ತನ್ನ ಪತ್ನಿ ಬಗ್ಗೆ ಮಾತನಾಡುವುದಕ್ಕೆ ಚಂದನ್ ಶೆಟ್ಟಿ ಅವರಿಗೆ ಖಡಕ್ ಉತ್ತರ ನೀಡಿದ್ದಾರೆ. ಹೌದು ಚಂದನ್ ಮತ್ತು ನಿವೇದಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಅಕೌಂಟ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹಾಗೆ ಇತ್ತೀಚಿಗಷ್ಟೇ ಕಲರ್ಸ್ ಕನ್ನಡದಲ್ಲಿ ಬರುವಂತಹ, ಸೃಜನ್ ಲೋಕೇಶ್ ಅವರು ನಡೆಸಿಕೊಡುವ ಕಿರುತೆರೆಯ ಕಾಮಿಡಿ ಶೋ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭಾಗವಹಿಸಿದ್ದರು. ಅಂದಹಾಗೆ ಈ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರು ಫೋರ್ಕ್ ಮೂಲಕ ಮುದ್ದೆ ತಿಂದಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ರೀತಿ ಫೋರ್ಕ್ ಮೂಲಕ ಮುದ್ದೆ ತಿಂದಿದ್ದರಿಂದ ಹಲವಾರು ಟೀಕೆಗೆ ಕಾರಣವಾಗಿದ್ದಲ್ಲದೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಚಂದನ್ ಮತ್ತು ನಿವೇದಿತಾ ರಸಂ ಮಾಡುವ ಜಾಹೀರಾತು ಒಂದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ವಿಡಿಯೋ ಇದೀಗ ಟ್ರೋಲಿಗರ ಬಾಯಿಗೆ ತುತ್ತಾಗಿದೆ ಎಂದೇ ಹೇಳಬಹುದು. ಈ ವಿಡಿಯೋ ನೋಡಿರುವಂತಹ ವ್ಯಕ್ತಿ ಒಬ್ಬರು “ಏನ್ ಗುರು ಕನ್ನಡನಾ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀನಿ ಎಂದು ಹೇಳಿ, ಹೆಂಡತಿ ಜೊತೆ ರಸಂ ಮಾಡ್ತಾ ಕುತಿದ್ದೀರಲ್ಲ” ಎಂದು ಕಾಮೆಂಟ್ ಮಾಡುವ ಮೂಲಕ ಚಂದನ್ ಶೆಟ್ಟಿ ಅವರ ಕಾಲೆಳೆದಿದ್ದಾರೆ.

ಇನ್ನು ಈ ವ್ಯಕ್ತಿಯ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ರಾಪರ್ ಚಂದನ್ ಶೆಟ್ಟಿ “ಅಲ್ಲಾ ಗುರು ನಾನು ರಸಂ ಆದ್ರೂ ಮಾಡ್ತೀನಿ, ಕೋಳಿ ಸಾರು ಆದ್ರೂ ಮಾಡ್ತೀನಿ, ನಿನ್ನ ಮನೆ ಸ್ಟವ್ ಮೇಲೆ ಮಾಡ್ತಾ ಇದೀನಿ. ಈಗಾಗಲೇ ನನ್ನ ಕೆಲ ಹಾಡುಗಳೆಲ್ಲ ಫಾರಿನ್ ಪಬ್ ಗಳಲ್ಲಿ ಪ್ಲೇ ಆಗ್ತಾ ಇದೆ. ನಮ್ಮಂತಹ ಕಲಾವಿದರನ್ನು ನಿಮ್ಮಂತವರು ಯಾವಾಗಲೂ ತುಳಿಯುವುದಕ್ಕೆ ನೋಡ್ತೀರಾ, ಆದರೆ ನನ್ನ ಪ್ರಕಾರ ನಿನ್ನಂತ ದ್ವೇಷ ಮಾಡುವವರು ಇದ್ದರೇನೇ ನಮ್ಮಂತವರಿಗೆ ಸ್ಪೂರ್ತಿ. ನೀವು ಹೀಗೆ ನಮ್ಮ ಮೇಲೆ ದ್ವೇಷ ಮಾಡುತ್ತಲೇ ಇರಿ, ನಾವು ನಮ್ಮ ಗುರಿ ಮುಟ್ಟುವುದರ ಕಡೆ ಕೆಲಸ ಮಾಡುತ್ತೇವೆ” ಎಂದು ಚಂದನ್ ಶೆಟ್ಟಿ ಉತ್ತರ ನೀಡಿದ್ದಾರೆ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448