ಶಿವತಾಂಡವ ಸ್ತೋತ್ರ.! ಈ ಮಹಾಮಂತ್ರ ಹುಟ್ಟಿದ್ದೇಗೆ ಗೊತ್ತಾ..?

ಸ್ನೇಹಿತರೆ, ಶಿವನನ್ನು ಸ್ತುತಿಸುವ ಈ ಸ್ತೋತ್ರವನ್ನು ಕೇಳಿದರೆ ಮೈ-ಮನಸ್ಸು ರೋಮಾಂಚನವಾಗುತ್ತದೆ, ಎದೆಯ ಬ’ಡಿತ ಜಾಸ್ತಿ ಆಗುತ್ತೆ. ಇದನ್ನು ಕೇಳ್ತಾ ಇದ್ರೆ ಸಾಕ್ಷಾತ್ ಶಿವನೇ ನಮ್ಮ ಮುಂದೆ ತಾಂಡವಂ ಮಾಡುತ್ತಿದ್ದಾನೆನೋ ಎಂಬ ಭಾವ ನಮ್ಮ ಮನದಲ್ಲಿ ಮೂಡುವುದು ಸುಳ್ಳಲ್ಲ. ಸಾಮಾನ್ಯವಾಗಿ ನೀವು ಈ ಸ್ತೋತ್ರವನ್ನು ಒಂದಲ್ಲ ಒಂದು ಬಾರಿ ಕೇಳಿರುತ್ತೀರಿ. ಇದು ಶಿವ ತಾಂಡವ ಸ್ತೋತ್ರ ಶಿವನ ಮಹಾಭಕ್ತ ಎಂದು ಪ್ರಸಿದ್ಧವಾಗಿದ್ದ ದಶಕಂಠ ರಾವಣ ಬರೆದಿದ್ದು. ಇಂತಹ ಅದ್ಭುತ ಸ್ತೋತ್ರವನ್ನು ರಾವಣ ಬರೆದಿದ್ದು ಯಾವಾಗ, ಇದರ ಹಿಂದಿರುವ ಕಥೆ ಏನು.

ಕುಬೇರನನ್ನು ಗೆದ್ದು ತನ್ನಂತ ಶಕ್ತಿಶಾಲಿ ಬ್ರಹ್ಮಾಂಡದಲ್ಲಿ ಯಾರು ಇಲ್ಲ ಎಂದು ಬೀಗುತ್ತಿದ್ದ ರಾವಣ ಪುಷ್ಪಕ ವಿಮಾನವನ್ನೇರಿ ಲಂಕೆಗೆ ಹೊರಟಿದ್ದ. ಲಂಕೆಗೆ ಹೋಗುವ ಮಾರ್ಗದಲ್ಲಿ ಆತ ದೊಡ್ಡ ದೊಡ್ಡ ಗಿರಿ ಶಿಖರಗಳನ್ನು ಏರಿ ಹೊರಟಿದ್ದ ಹೀಗೆ ಆಕಾಶದಲ್ಲಿ ಹಾರುತ್ತಿದ್ದ ರಾವಣನಿಗೆ ಒಂದು ದೊಡ್ಡ ಶ್ವೇತಬಣ್ಣದ ಪರ್ವತ ಅಡ್ಡವಾಯಿತು. ಅದರ ತುದಿ ಮುಟ್ಟಬೇಕೆಂಬ ಆಸೆಯಿಂದ ಅತ್ತಕಡೆ ತನ್ನ ಪುಷ್ಪಕ ವಿಮಾನ ವನ್ನು ತಿರುಗಿಸಿದ ರಾವಣ. ಆದರೆ ಅದೆಷ್ಟು ಬಾರಿ ಪ್ರಯತ್ನಿಸಿದರೂ ರಾವಣನಿಗೆ ಶ್ವೇತವರ್ಣ ಪರ್ವತದ ತುದಿಯನ್ನು ಏರಲು ಸಾಧ್ಯವಾಗಲಿಲ್ಲ.

ಇಷ್ಟಕ್ಕೂ ರಾವಣ ಏರಲು ಹೊರಟಿದ್ದು ಸಾಕ್ಷಾತ್ ಶಿವ ಮತ್ತು ಪಾರ್ವತಿಯರು ನೆಲೆಸಿದ್ದ ಕೈಲಾಸಪರ್ವತವನ್ನ. ಇದನ್ನು ಅರಿಯದ ರಾವಣನಿಗೆ ಕೋ’ಪ ಶುರುವಾಯಿತು, ಅದು ರಾವಣನ ಅಹಂಕಾರವನ್ನು ಇನ್ನಷ್ಟು ಬಡಿದೆಬ್ಬಿಸಿತು. ಹೀಗೆ ಮತ್ತೊಂದು ಬಾರಿ ತನ್ನ ಪುಷ್ಪಕ ವಿಮಾನವನ್ನು ಏರಿ ಆ ಪರ್ವತದ ಕಡೆಗೆ ಹೋಗುತ್ತಾನೆ ಅಲ್ಲಿ ಅಚಾನಕ್ಕಾಗಿ ಶಿವನ ವಾಹನ ನಂದಿ ಅಡ್ಡ ಬರುತ್ತದೆ. ಇದ್ಯಾವ ಪರ್ವತ ಎಂದು ರಾವಣ ನಂದೀಶ್ವರನನ್ನು ಪ್ರಶ್ನಿಸಿದ್ದ. ಅದಕ್ಕೆ ಉತ್ತರಿಸಿದ ನಂದಿ ಇದು ಸಾಕ್ಷಾತ್ ಶಿವ-ಪಾರ್ವತಿಯರು ನೆಲೆಸಿರುವ ಕೈಲಾಸಪರ್ವತ, ಅಪ್ಪಿತಪ್ಪಿಯೂ ನೀನು ಇದನ್ನು ಏರಲಾಗುವುದಿಲ್ಲ, ಅದಕ್ಕಾಗಿ ಅದನ್ನು ಬಿಟ್ಟು ಲಂಕೆಗೆ ಹಿಂದಿರುಗು ಎಂದು ಹೇಳುತ್ತದೆ.

ನಂದಿಯ ಸಲಹೆಯನ್ನು ತಿರಸ್ಕರಿಸುವ ರಾವಣ ಮತ್ತೆ ಕೈಲಾಸಪರ್ವತದ ಕಡೆ ಸಾಗಿದ ಇನ್ನೇನು ರಾವಣ ಕೈಲಾಸದ ತುದಿ ಮುಟ್ಟಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಸಾಮಾನ್ಯ ಕೋತಿಗಳು ಕೈಲಾಸ ಏರುವ ಪ್ರಯತ್ನವನ್ನು ವಿಫಲಗೊಳಿಸಿದವು, ಇದರಿಂದ ಇನ್ನಷ್ಟು ಕುಪಿತಗೊಂಡ ರಾವಣ ತನ್ನ ಎರಡು ಕೈಗಳಿಂದ ಪರ್ವತವನ್ನು ಎತ್ತಲು ಮುಂದಾದ. ಈತನ ಸಾಹಸಕ್ಕೆ ಕೈಲಾಸಪರ್ವತವು ಒಂದು ಕ್ಷಣ ಅಲುಗಾಡಲೂ ಶುರುವಾಯಿತು‌. ತನ್ನ ತಪವನ್ನು ಬಂಗಾ ಮಾಡಿದ ರಾವಣನಿಗೆ ತಕ್ಕಶಾಸ್ತಿ ಮಾಡಬೇಕೆಂದು ಶಿವ ಕುಳಿತ ಜಾಗದಿಂದಲೇ ತನ್ನ ಹೆಬ್ಬೆರಳಿನಿಂದ ಕೈಲಾಸವನ್ನು ಕೆಳಗೆ ಗುದ್ದಿದ.

ಆಗ ರಾವಣ ಜೀ’ವಭ’ಯದಿಂದ ಓಡಲು ಶುರು ಮಾಡಿದ. ತನ್ನ ಪ್ರಾ’ಣಕ್ಕೆ ಇನ್ನು ಉಳಿಗಾಲವಿಲ್ಲ ಎಂದು ಅರಿತ ರಾವಣ, ಶಿವನನ್ನು ಪಟಿಸಲು ಶುರುಮಾಡುತ್ತಾನೆ. ಆಗ ಹುಟ್ಟಿಕೊಂಡಿದ್ದೇ ಈ ಶಿವ ತಾಂಡವ ಸ್ತೋತ್ರ. ತನ್ನ ದೇ’ಹದ ನರಗಳನ್ನು ತಂತಿಯ ವೀಣೆಯಾಗಿ ಮಾಡಿ ಶಿವ ತಾಂಡವ ಸ್ತೋತ್ರ ವನ್ನು ಹಾಡುವುದಕ್ಕೆ ಶುರುಮಾಡಿದರಂತೆ ರಾವಣ. ಈ ಸ್ತೋತ್ರದಲ್ಲಿ ಶಿವನ ಶಕ್ತಿ ಮತ್ತು ಸೌಂದರ್ಯವನ್ನು ವರ್ಣಿಸಲಾಗಿದೆ. ರಾವಣ ಶಿವ ತಾಂಡವ ಸ್ತೋತ್ರ ವನ್ನು ಹಾಡಿ ಮುಗಿಸುವ ಹೊತ್ತಿಗೆ ಶಿವನ ಕೋಪವು ಕಡಿಮೆಯಾಗಿತ್ತು ಮತ್ತು ರಾವಣನ ಅಹಂ’ಕಾರ ಸಹ ಮುರಿದಿತ್ತು. ದಶಕಂಠನಿಗೆ ರಾವಣ ಎಂದು ನಾಮಕರಣವಾಗಿದ್ದು ಸಹ ಇದೇ ಸಂದರ್ಭದಲ್ಲಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448