ಸ್ನೇಹಿತರೆ! ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದಿದ್ದಾರೆ ದಾಸರ ಶ್ರೇಷ್ಠ ಪುರಂದರದಾಸರು. ದಾಸರು ಹೇಳಿದಂತೆ ಅದ್ಭುತ ಮಾನವಜನ್ಮ ಸುಲಭವಾಗಿ ಸಿಕ್ಕಿದ್ದಲ್ಲ ಈ ಮನುಷ್ಯ ಜನ್ಮಕ್ಕಾಗಿ ಎಷ್ಟೆಲ್ಲಾ ಜನ್ಮಗಳನ್ನು ಎತ್ತಿ ದೇಹ ತೊರೆಯಬೇಕು ಗೊತ್ತಾ? ಇದಾದ ಮೇಲೆ ಅಂತಿಮವಾಗಿ ಮನುಷ್ಯ ಜನ್ಮ ಸಿಗುವುದು.
ಪದ್ಮ ಪುರಾಣದ ಒಂದು ಭಾಗದಲ್ಲಿ ಮನುಷ್ಯನ ಜನ್ಮರಹಸ್ಯದ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಪದ್ಮ ಪುರಾಣದ ಪ್ರಕಾರ ಮನುಷ್ಯ ಜನ್ಮಕ್ಕೂ ಮುನ್ನ ಒಟ್ಟು 84 ಲಕ್ಷ ಜನ್ಮಗಳನ್ನು ಎತ್ತ ಬೇಕಂತೆ. ಅವು ಯಾವುವೆಂದರೆ 9 ಲಕ್ಷ ಜನ್ಮಗಳು ಅದೇ ಜಲಚರ ಜನ್ಮ, ಇದಾದಮೇಲೆ 20 ಲಕ್ಷ ಮರಗಿಡಗಳ ಜನ್ಮ, ನಂತರ 11 ಲಕ್ಷ ಕ್ರಿಮಿಕೀಟಗಳ ಜನ್ಮ, ಇದಾದಮೇಲೆ 10 ಲಕ್ಷ ಪಕ್ಷಿಗಳ ಜನ್ಮ, ಇದೂ ಆದಮೇಲೆ 30 ಲಕ್ಷ ಜನ್ಮಗಳು ಭೂಮಿಯ ಮೇಲೆ ವಾಸಿಸುವ ವಿವಿಧ ಪ್ರಾಣಿಗಳ ಜನ್ಮವೆತ್ತ ಬೇಕಂತೆ. ಇವೆಲ್ಲಾ ಆದಮೇಲೆ ಮತ್ತೆ ಸಿಗುವುದೇ 4 ಲಕ್ಷ ಮಾನವ ಜನ್ಮ ಗಳು.
ಈ ಮನುಷ್ಯ ಜನ್ಮ ಗಳು ಕೂಡ ಮತ್ತೆ ಸಿಗಬೇಕು ಅಂದರೆ ನಮ್ಮ ಕರ್ಮಫಲಗಳೇ ಕಾರಣವಾಗಿರುತ್ತದೆ. ಕುರುಕ್ಷೇತ್ರದಲ್ಲಿ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸುವಾಗ ಇದನ್ನೇ ಹೇಳಿದನಂತೆ ಆತ್ಮಕ್ಕೆ ಸಾ’ವಿಲ್ಲ ನಾವು ಮಾಡುವ ಕರ್ಮಗಳೇ ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂದಿದ್ದಾನೆ ಭಗವಂತ. ಹುಟ್ಟು-ಸಾ’ವಿನ ಈ ಕಾಲ ಚಕ್ರದಿಂದ ಮುಕ್ತವಾಗಬೇಕು ಎಂದಾದರೆ ಒಳ್ಳೆ ಕರ್ಮಗಳನ್ನು ಮಾಡುತ್ತಾ ಮುಕ್ತಿ ಹೊಂದಬೇಕು.
ಮನುಷ್ಯ ಉತ್ತಮ ಕೆಲಸವನ್ನು ಮಾಡಿದರೆ ಸ್ವರ್ಗ ಸಿಗುತ್ತದೆ ಸ್ವರ್ಗದ ಹಾದಿ ಮೋಕ್ಷದ ಕಡೆಗೆ ಹೋಗುತ್ತದೆ. ಅದೇ ಜೀವನದಲ್ಲಿ ಕೆಟ್ಟ ಕೆಲಸವನ್ನು ಮಾಡಿದರೆ ಅಂತಹವರಿಗೆ ನ’ರಕ ಸಿಗುತ್ತದೆ ಮನುಷ್ಯ ಮಾಡಿದ ಪಾಪಗಳಿಗೆ ತಕ್ಕಂತೆ ವಿವಿಧ ಜೀವಿಗಳ ಜನ್ಮ ಸಿಗುತ್ತದೆ. ಈ ಜನ್ಮದಲ್ಲಿ ವಿಪರೀತವಾಗಿ ಯಾವುದಾದರೂ ಒಂದು ಪ್ರಾಣಿಗಳನ್ನು ಅನಗತ್ಯವಾಗಿ, ಅನಿವಾರ್ಯ ವಿಲ್ಲದ ಸಮಯದಲ್ಲಿ ಅಥವಾ ಮೋಜಿಗಾಗಿ ಹಿಂಸಿಸಿದರೆ ಅಸಹ್ಯ ಪಟ್ಟುಕೊಂಡಿದ್ದರೆ, ಮುಂದಿನ ಜನ್ಮದಲ್ಲಿ ಅದೇ ಪ್ರಾಣಿಯಾಗಿ ಜನ್ಮ ತಾಳುವ ಸಾಧ್ಯತೆಗಳಿವೆ ಎನ್ನುತ್ತವೆ ಕೆಲವು ಪುರಾಣಗಳು.
ಹೀಗಾಗಿ ಮನುಷ್ಯರ ಜನ್ಮ ತುಂಬಾ ಯೋಗ್ಯವಾದದ್ದು ಇದನ್ನು ಉಪಯೋಗಿಸಿಕೊಳ್ಳಿ ಎಂದಿದ್ದಾರೆ ಚಾಣಕ್ಯ. ಹೀಗಾಗಿ ಮನುಷ್ಯರ ಜನ್ಮ ವಿರಳ ಎಂದು ಸುಮ್ಮಸುಮ್ಮನೆ ಹೇಳಿಲ್ಲ ತಿಳಿದವರು ಬೇಕಾದರೆ ನೀವು ಸಹ ಒಂದು ಬಾರಿ ಲೆಕ್ಕಹಾಕಿ ಇರುವ 84ಲಕ್ಷ ಪ್ರಾಣಿ ಜನ್ಮಗಳಲ್ಲಿ ಮನುಷ್ಯ ಜನ್ಮವನ್ನು ಶ್ರೇಷ್ಠ ಎಂದು ಯಾಕೆ ನಂಬುತ್ತಾರೆ ಎಂದು. ಮನುಷ್ಯರಲ್ಲಿ ಎಲ್ಲವನ್ನು ಯೋಚಿಸಿ ಮಾಡುವ ಸಾಮರ್ಥ್ಯ ಇರುತ್ತದೆ, ಅಲ್ಲದೆ ಮನುಷ್ಯರಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಗೊತ್ತಾಗುತ್ತದೆ.
ಆತ್ಮ-ಪರಮಾತ್ಮ ನನ್ನು ಒಲಿಸಿಕೊಳ್ಳುವ ಸಾಮರ್ಥ್ಯ ಇರುವುದು ಮನುಷ್ಯರಿಗೆ ಮಾತ್ರ. ಇಷ್ಟೆಲ್ಲಾ ತಿಳಿದು ಪಾಪಕೃತ್ಯಕ್ಕೆ ಮುಂದಾದರೆ ಸಾ’ವಿನ ನಂತರವೂ ಕ್ರಿಮಿಕೀಟಗಳಂತೆ ಬದುಕಬೇಕಾಗುತ್ತದೆ ಹೀಗಾಗಿ ಮನುಷ್ಯ ಜನ್ಮ ತುಂಬಾ ಶ್ರೇಷ್ಠ ಅದನ್ನು ಹಾಳು ಮಾಡಿಕೊಳ್ಳಬಾರದು. ಈ ಮಾಹಿತಿ ನಿಮಗೆ ಖುಷಿ ಕೊಟ್ಟಿದ್ದಾರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448