ನಿಮಗೆ 30 ವರ್ಷ ಆಗಿದೆಯಾ?, ವಯಸ್ಸಾಯ್ತು ಅಂತ ಯೋಚ್ನೆ ಮಾಡಬೇಡಿ, ಇಲ್ಲಿರುವ ಆಹಾರಕ್ರಮ ಪಾಲಿಸಿ ಸಾಕು, ಎಷ್ಟು ಗಟ್ಟಿಮುಟ್ಟಾಗಿ ಇರ್ತೀರ ನೋಡಿ !!

ಸ್ನೇಹಿತರೆ ದೇಹಕ್ಕೆ ವಯಸ್ಸಾದಂತೆಲ್ಲಾ ನಮ್ಮ ಆಹಾರ ಪದ್ಧತಿಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಅದರಲ್ಲೂ ಬಹುಮುಖ್ಯವಾಗಿ ವಯಸ್ಸಾದಂತೆಲ್ಲಾ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ತುಂಬಾ ನಿಧಾನ ಆಗುತ್ತದೆ. ಹೀಗಾಗಿ ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸುವುದರಿಂದ ಉತ್ತಮ ಮತ್ತು ಆರೋಗ್ಯಕರವಾದ ಜೀವನ ನಮ್ಮದಾಗಿಸಿಕೊಳ್ಳುಬವುದು. ಇನ್ನೂ ಬಹಳ ಮುಖ್ಯವಾಗಿ ಮಹಿಳೆಯರ ಹಾರ್ಮೋನಗಳಲ್ಲಿ ಹೆಚ್ಚು ವ್ಯತ್ಯಾಸಗಳು ಕಂಡುಬರುವುದರಿಂದ ಮಹಿಳೆಯರು ಹೆಚ್ಚು ಗಮನವನ್ನು ತಮ್ಮ ಆರೋಗ್ಯದ ಮೇಲೆ ಕೊಡಬೇಕಾಗಿದೆ.

ಹೀಗಾಗಿ ಕೆಲವು ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ. 30 ವರ್ಷಗಳು ದಾಟಿದ ನಂತರ ಮಹಿಳೆಯರಲ್ಲಿ ಕ್ಯಾಲ್ಶಿಯಂ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಕ್ಯಾಲ್ಸಿಯಂ ನಮ್ಮ ದೇಹದಲ್ಲಿ ಕಡಿಮೆಯಾದರೆ ಮೂಳೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳಬಹುದು. ಚಿಕ್ಕ ವಯಸ್ಸಿನವರು ಏನೇ ತಿಂದರೂ ಅದು ಬೇಗ ಜೀರ್ಣವಾಗುತ್ತದೆ. ಯಾಕೆಂದರೆ ಅವರಲ್ಲಿ ಜೀರ್ಣಕ್ರಿಯೆ ಬಹುಬೇಗ ಕಾರ್ಯನಿರ್ವಹಿಸುತ್ತದೆ.

ಆದರೆ ವಯಸ್ಸಾದ ಹೋದಂತೆಲ್ಲ ಜೀರ್ಣಕ್ರಿಯೆ ನಿಧಾನವಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಹಾಗಿದ್ದರೆ ಯಾವ ಆಹಾರವನ್ನು ತಿನ್ನಬೇಕು ಎಂದು ತಿಳಿಯೋಣ ಬನ್ನಿ. ಮೊದಲನೆಯದಾಗಿ ಮೀನು. 30 ವರ್ಷಗಳು ಆದನಂತರ ಮೂಳೆ ಮತ್ತು ಸಂಧಿ ನೋವಿನ ಸಮಸ್ಯೆಗಳು ಬರುವುದು ಹೆಚ್ಚು. ಅದರಲ್ಲೂ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಧ್ಯಯನದ ಪ್ರಕಾರ ಮೀನು ಮೂಳೆಗಳಿಗೆ ಪುಷ್ಟಿ ನೀಡುವ ಮುಖಾಂತರ ಅದನ್ನು ಬಲಿಷ್ಠಗೊಳಿಸುತ್ತದೆ.

ಪ್ರತಿದಿನ ಸಾಧ್ಯವಾದರೆ ಒಂದು ಮೊಟ್ಟೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ, ರಾತ್ರಿ ಮಲಗುವ ಮುನ್ನ ಚೆನ್ನಾಗಿ ಕಾಯಿಸಿದ ಹಾಲನ್ನು ಕುಡಿಯಿರಿ, ಸಾಧ್ಯವಾದಷ್ಟು ಎಲ್ಲ ತರಕಾರಿಗಳನ್ನು ಅರ್ಧ ಬೇಯಿಸಿ ತಿನ್ನುವುದು ಒಳ್ಳೆಯದು, ಹೆಚ್ಚು ಬೇಯಿಸಿದ ತರಕಾರಿಗಳಲ್ಲಿ ಪೋಷಕಾಂಶಗಳು ಕಡಿಮೆಯಾಗಿರುತ್ತದೆ, ಒಂದಷ್ಟು ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ಅವುಗಳನ್ನು ತಿನ್ನಿ, ಮೊಳಕೆ ಬಂದ ಕಾಳುಗಳಲ್ಲಿ ಸಾಕಷ್ಟು ಪೋಷಕಂಶಗಳು ಉತ್ಪತ್ತಿಯಾಗಿರುತ್ತದೆ, ಇನ್ನು ಸಾಧ್ಯವಾದರೆ ಪ್ರತಿದಿನ ನಿಮ್ಮ ಊಟದಲ್ಲಿ ಕೆಲವೊಂದಷ್ಟು ಹಣ್ಣುಗಳನ್ನು ಸೇರಿಸಿಕೊಳ್ಳಿ, ಏಕೆಂದರೆ ಪ್ರತಿಯೊಂದು ಹಣ್ಣಿನಲ್ಲೂ ಅದರದೇ ಆದಂತಹ ವಿಶೇಷತೆಗಳು ಇದ್ದೇ ಇರುತ್ತದೆ.

ಬೀಜಗಳು. ಅಂದರೆ ಬಾದಾಮಿ, ಗೋಡಂಬಿ, ಕಡಲೆಬೀಜ ಮತ್ತು ಇತರೆ ಬೀಜಗಳನ್ನು ಸೇವಿಸಿದರೆ ಇದರಲ್ಲಿ ವಿಟಮಿನ್ ಇ ಕೂಡ ಸಮೃದ್ಧಿಯಾಗಿದ್ದು ರಕ್ತದ ಒತ್ತಡವನ್ನು ತಗ್ಗಿಸುತ್ತದೆ. ಹೀಗಾಗಿ ಇದರಿಂದ ಹೃದಯದ ಸಮಸ್ಯೆಯನ್ನು ತಡೆಗಟ್ಟಬಹುದು. ನಂತರ ಪ್ರೊಟೀನ್ ಮಹಿಳೆಯರು 30 ವರ್ಷ ದಾಟಿದರೆ ಹೆಚ್ಚು ಪ್ರೊಟೀನ್ ಇರುವ ಆಹಾರವನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ತೆಳು ಮಾಂಸ ಮತ್ತು ಮೀನುಗಳನ್ನು ಸೇವಿಸಿದರೆ ಉತ್ತಮ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ನಂತರ ಕಾಳುಗಳು ಹೆಚ್ಚಿನ ಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಇರುವುದರಿಂದ 30 ವರ್ಷದ ನಂತರ ಮಹಿಳೆಯರ ಮುಖದಲ್ಲಿ ಮೂಡುವ ಸುಕ್ಕನ್ನು ತಡೆಗಟ್ಟಬಹುದು. ಕೊನೆಯದಾಗಿ ಪ್ರತಿದಿನ ಹಾಲು ಮೊಸರು ಬೆಣ್ಣೆ ಮತ್ತು ತುಪ್ಪ ಈ ರೀತಿ ಹಾಲಿನ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಸಮೃದ್ಧವಾದ ಕ್ಯಾಲ್ಸಿಯಂ ದೊರೆತು ನಿಮ್ಮ ಮೂಳೆಗಳು ಬಲಿಷ್ಠವಾಗುತ್ತದೆ.

ಇವಿಷ್ಟು ಆಹಾರಕ್ರಮಗಳು ಬರಿ ಮಹಿಳೆಯರಿಗೆ ಮಾತ್ರವಲ್ಲ ಗಂಡಸರಿಗೂ ಉಪಲಬ್ದ ವಾಗಿರುತ್ತವೆ, ಇದರ ಜೊತೆಗೆ ಕಡಿಮೆ ಅಂದರೂ ವಾರಕ್ಕೆ ಮೂರು ಬಾರಿ ವ್ಯಾಯಾಮ ಮಾಡುವುದು ಒಳ್ಳೆಯದು, ಪ್ರತಿದಿನ ಆರರಿಂದ ಏಳು ಗಂಟೆ ನಿದ್ದೆ ಮಾಡಬೇಕು, ಕನಿಷ್ಠವೆಂದರೂ ಪ್ರತಿದಿನ 2 ಲೀಟರ್ ನೀರು ಕುಡಿಯಬೇಕು, ಸಾಧ್ಯವಾದರೆ ಪ್ರತಿದಿನ 10 ನಿಮಿಷ ಧ್ಯಾನ ಮಾಡಿ, ಅತಿ ಮುಖ್ಯವಾಗಿ ಎಲ್ಲದಕ್ಕೂ ತಲೆ ಕೆಡಿಸಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಿ ಸುಂದರವಾದ ಸುಖಕರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448.