ಸಾಕ್ಷಾತ್ ಶಿವ-ಪಾರ್ವತಿ ಗೂ, ಹೆಣ್ಣು ಮಗಳಿದ್ದಳು ಅವಳೇ ಅಶೋಕ ಸುಂದರಿ, ಆಕೆಯ ಜನ್ಮ ಹೇಗಾಯಿತು ಗೊತ್ತೇ ??

ಸ್ನೇಹಿತರೆ, ಶಿವನಿಗಿರುವ ಇಬ್ಬರು ಗಂಡು ಮಕ್ಕಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಆದರೆ ಶಿವನಿಗೆ ಮೂರು ಮುದ್ದಾದ ಹೆಣ್ಣುಮಕ್ಕಳು ಕೂಡ ಇದ್ದರು. ನಾವಿವತ್ತು ಮೂವರು ಶಿವ ಪುತ್ರಿಯರ ಪೈಕಿ ಅಶೋಕ ಸುಂದರಿ ಅನ್ನುವ ಹಿರಿಯ ಮಗಳ ಬಗ್ಗೆ ಹಾಗೂ ಆಕೆ ಹುಟ್ಟಿದ ಉದ್ದೇಶವಾದರೂ ಏನು ಅನ್ನುವುದರ ಬಗ್ಗೆ ಎಳೆ ಎಳೆಯಾಗಿ ಹೇಳ್ತೀವಿ ಇದನ್ನು ಸಂಪೂರ್ಣವಾಗಿ ಓದಿ‌.

ಕಾಮದಹನದ ನಂತರ ಆ ಹಿಮವಂತನ ಮಗಳು ಪಾರ್ವತಿ ಪರಮೇಶ್ವರನನ್ನು ಪ್ರೀತಿಸಿ ಮದುವೆಯಾದ ಕಥೆ ನಮಗೆಲ್ಲ ಗೊತ್ತಿದೆ. ಮಹಾಮಾತೆ ಪಾರ್ವತಿ ಯಾವಾಗ ಕೈಲಾಸಕ್ಕೆ ಕಾಲಿಟ್ಟರೂ ಅಂದಿನಿಂದ ಶಿವ ಲೋಕದಲ್ಲಿ ಯಾವುದೇ ಕೊರತೆ ಇರಲಿಲ್ಲ, ಶಿವ ಮತ್ತು ಪಾರ್ವತಿಯ ಪ್ರೀತಿಗೆ ಸಾಕ್ಷಿಯಾಗಿ ಕಾರ್ತಿಕೇಯ ಜನಿಸಿದ. ಕೈಲಾಸ ಇಷ್ಟೆಲ್ಲಾ ಶಾಂತಿ ಸಮೃದ್ಧಿಯಿಂದ ಕೂಡಿದ್ದರು ಪಾರ್ವತಿಗೆ ಅದೊಂದು ಚಿಂತೆ ಇನ್ನಿಲ್ಲದಂತೆ ಕಾಡಿತು, ತನಗೊಬ್ಬ ಮಗಳು ಇಲ್ಲ ಅನ್ನೋ ಚಿಂತೆ ಅದು. ಮನೆಯಲ್ಲೊಂದು ಹೆಣ್ಣುಮಗು ಇರಬೇಕು, ಮನೆಯಲ್ಲಿ ಸದಾ ಗೆಜ್ಜೆ ಸದ್ದು ಕೇಳಬೇಕು, ಅದು ಪ್ರತಿಮನೆಯ ಶುಭದ ಲಕ್ಷಣ ಅನ್ನೋ ಮಾತು ನಾವು ಕೇಳಿರುತ್ತೀವಿ.

ಅದೇ ರೀತಿ ಪಾರ್ವತಿ ಕೂಡ ನನ್ನ ಮನಸ್ಸಲ್ಲಿ ಹುಟ್ಟಿಕೊಂಡ ಆಸೆಯಂತೆ ಹೆಣ್ಣು ಜೀವವನ್ನು ಸೃಷ್ಟಿಸುವುದಕ್ಕೆ ನಿರ್ಧರಿಸುತ್ತಾಳೆ. ಅದೊಂದು ದಿನ ಶಿವನಿಲ್ಲದೆ ಕೈಲಾಸದಲ್ಲಿ ಒಂಟಿಯಾಗಿದ್ದ ಪಾರ್ವತಿ ಉದ್ಯಾನವನಕ್ಕೆ ತೆರಳುತ್ತಾಳೆ. ಉದ್ಯಾನದಲ್ಲಿದ್ದ ಕಲ್ಪವೃಕ್ಷದ ಕೆಳಗೆ ಕುಳಿತು ಶಿವನನ್ನು ಧ್ಯಾನಿಸಿ ಮಣ್ಣಿಂದ ಬಾಲಕಿಯ ಬೊಂಬೆಯನ್ನು ಮಾಡುತ್ತಾಳೆ. ಬಳಿಕ ತಾನು ಮಾಡಿದ ಆಕೃತಿಗೆ ಜೀವ ನೀಡುವಂತೆ ಕಲ್ಪವೃಕ್ಷಕ್ಕೆ ಮನವಿ ಮಾಡುತ್ತಾಳೆ‌. ಆದಿಶಕ್ತಿಯ ಕೋರಿಕೆಯನ್ನು ಈಡೇರಿಸುವುದೇ ತನ್ನ ಭಾಗ್ಯ ಅಂದುಕೊಂಡ ಕಲ್ಪವೃಕ್ಷ ಆ ಕ್ಷಣವೇ ನಿರ್ಜೀವ ಬೊಂಬೆಗೆ ಜೀವವನ್ನು ನೀಡುತ್ತದೆ.

ಹೆಣ್ಣು ಮಗುವಿಲ್ಲ ಅನ್ನೋ ತನ್ನ ಶೋಕವನ್ನು ನೀಗಿಸಿದ ಆ ಹೆಣ್ಣುಮಗುವಿಗೆ ಪಾರ್ವತಿ ಅಶೋಕಸುಂದರಿ ಎಂದು ಹೆಸರನ್ನು ಇಡುತ್ತಾಳೆ. ಮಗಳ ಬಾಲ್ಯ ಸಹಜ ಆಟಪಾಠಗಳನ್ನು ಕಂಡು ಸಂತೋಷದಿಂದ ಹಿಗ್ಗಿ ಹೋಗಿದ್ದ ಶಿವ-ಪಾರ್ವತಿಯರು, ಆಕೆಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಅಶೋಕಸುಂದರಿ ಇನ್ನೇನು ಪ್ರಾಪ್ತ ವಯಸ್ಕಳಾಗಿ ಆಕೆಗೆ ಮದುವೆ ಮಾಡಬೇಕೆಂಬ ವಿಚಾರ ಶಿವ-ಪಾರ್ವತಿಯಿಂದ ಹಿಡಿದು ಕೈಲಾಸದಲ್ಲಿ ಪ್ರತಿಯೊಬ್ಬರಿಗೂ ಬೇಸರ ತರಿಸಿತ್ತು, ಆದರೆ ಅಸುರನಿಂದ ತ್ರಿಲೋಕವನ್ನು ರಕ್ಷಿಸುವ ಸಲುವಾಗಿ ಅಶೋಕ ಸುಂದರಿಯ ಕಲ್ಯಾಣ ಆಗಲೇ ಬೇಕಿತ್ತು.

ಹೀಗಾಗಿ ಮುಂದೆ ಒಂದು ದಿನ ಅಶೋಕ ಸುಂದರಿಯನ್ನು ಮೆಚ್ಚಿ ಮದುವೆಯಾಗಿದ್ದು ಬೇರೆ ಯಾರು ಅಲ್ಲ ನಹುಷ ಚಕ್ರವರ್ತಿ, ಚಂದ್ರವಂಶದ ಅರಸನಾಗಿದ್ದ ಈ ನಹುಷ ತನ್ನ ಸಾಧನೆಯಿಂದ ಇಂದ್ರ ಪದವಿಯನ್ನು ಪಡೆದುಕೊಂಡಿದ್ದನು. ವಶಿಷ್ಠರ ಆಶ್ರಮದಲ್ಲಿ ಅವರಿಬ್ಬರ ವಿವಾಹವು ನೆರವೇರುತ್ತದೆ. ಈ ಮಧ್ಯೆ ಅಶೋಕಸುಂದರಿ ಯ ಸೌಂದರ್ಯದಿಂದ ಪ್ರಚಲಿತ ನಾಗಿದ್ದಾ ಹುಂಡ ಎಂಬ ರಾಕ್ಷಸ ಆಕೆಯನ್ನು ವರಿಸಲು ಪ್ರಯತ್ನ ಪಡುತ್ತಾನೆ. ಇದರಿಂದ ಕ್ರೋಧಗೊಂಡ ನಹುಷ ಚಕ್ರವರ್ತಿ ಆ ರಾಕ್ಷಸನನ್ನು ಕೊ’ಲ್ಲುತ್ತಾನೆ. ಇದಿಷ್ಟು ಶಿವನ ಮಗಳಾದ ಅಶೋಕ ಸುಂದರಿಯ ಕಥೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448